Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನನಗೆ ಏನು ಬೇಕೋ ಚಾಮುಂಡೇಶ್ವರಿ ಬಳಿ ಕೇಳಿಕೊಂಡಿದ್ದೇನೆ : ಡಿಸಿಎಂ ಡಿಕೆ ಶಿವಕುಮಾರ್

04/07/2025 10:29 AM

ರೈತರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆ ಹಣ.!

04/07/2025 10:28 AM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಪ್ರಕರಣ : ಇಂದು ಹಾರ್ಟ್ ಅಟ್ಯಾಕ್ ಗೆ ಮತ್ತಿಬ್ಬರು ಬಲಿ!

04/07/2025 10:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಸೈಬರ್ ಅಪರಾಧ ತಡೆಗೆ ಮಹತ್ವದ ಕ್ರಮ : ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಜತೆಗೆ ವೆಬ್ ಬಾಟ್ ಉನ್ನತೀಕರಣ.!
KARNATAKA

BIG NEWS : ರಾಜ್ಯದಲ್ಲಿ ಸೈಬರ್ ಅಪರಾಧ ತಡೆಗೆ ಮಹತ್ವದ ಕ್ರಮ : ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಜತೆಗೆ ವೆಬ್ ಬಾಟ್ ಉನ್ನತೀಕರಣ.!

By kannadanewsnow5723/04/2025 6:33 AM

ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್‍ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-1930 ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ​ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನೀರಿಕ್ಷಕರಾದ ಅಲೋಕ್ ಮೋಹನ್ ತಿಳಿಸಿದರು.

ಇಂದು ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಎಡಿಜಿಪಿ ಸಿಎಲ್&ಎಮ್ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-1930 ವೆಬ್ ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ 1930 ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ 2022 ರಲ್ಲಿ 1.30 ಲಕ್ಷ ಇದ್ದು, ನಂತರ 2024 ರಲ್ಲಿ 8.26 ಲಕ್ಷಕ್ಕೆ ಮತ್ತು 2025 ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 4.34 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಆನ್‍ಲೈನ್ ಹಣಕಾಸು ವಂಚನೆಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಸಾರ್ವಜನಿಕರು ದೂರು ದಾಖಲಿಸಲು ಅನುವಾಗುವಂತೆ ಸೈಬರ್ ಅಪರಾಧ ಸಹಾಯವಾಣಿ-1930 ಹಾಗೂ ವೆಬ್ ಬಾಟ್‍ನ್ನು ಉನ್ನತೀಕರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ (Emergency Response Support System) ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು (Public Safety Answering Point) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣರವರ ಕಛೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಸದರಿ 1930 ಸಹಾಯವಾಣಿ ಕೇಂದ್ರದಲ್ಲಿ ಆನ್‍ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು National Cyber crime Reporting Portal (NCRP) ಮೂಲಕ ದಾಖಲಿಸಲಾಗುತ್ತಿದೆ.

ಈ ರೀತಿಯಲ್ಲಿ ದೂರುದಾರರ ಕರೆಗಳ ಸಂಖ್ಯೆಯು ಏರಿಕೆಯಾಗುತ್ತಿರುವುದರಿಂದ, ಹೆಚ್ಚು ಸಂಖ್ಯೆಯ ಕರೆಗಳು ಕಡಿತಗೊಂಡಿರುವುದು (Call Drops) ಕಂಡುಬಂದಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರೆಗಳು ತಮ್ಮ ದೂರಿನ ಸ್ಥಿತಿ ವಿಚಾರಣೆ (Status enquiry) ಮತ್ತು ಸೈಬರ್ ಅಪರಾಧದ ಕುಂದುಕೊರತೆಗಳಿಗೆ ಸಂಬಂಧಿಸಿದ ಕರೆಗಳಾಗಿದ್ದು, ಎಲ್ಲಾ ಕರೆ ಸ್ವೀಕರಿಸುವ ಸಿಬ್ಬಂದಿಗಳು ಕಾರ್ಯನಿರತರಾಗಿರುತ್ತಿದ್ದ ಕಾರಣ 1930-ಸಹಾಯವಾಣಿಗೆ ಹೊಸ ದೂರುಗಳನ್ನು ದಾಖಲಿಸುವವರು ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ದೂರುದಾರರಿಗೆ 1930-ಸಹಾಯವಾಣಿಯ ಸಂಪರ್ಕ ಸಿಗದೆ ಗೋಲ್ಡನ್ ​ಅವರ್ ನಲ್ಲಿ ದೂರು ದಾಖಲಿಸಲು ಕಷ್ಟಕರವಾಗುತ್ತಿತ್ತು. ಈ ದೂರುದಾರರಲ್ಲಿ ಹಿರಿಯ ನಾಗರೀಕರು ಸಹ ಕರೆ ಮಾಡುತ್ತಿದ್ದು 1930 ಸಹಾಯವಾಣಿಗೆ ಕರೆ ಮಾಡಿದ ಸಮಯದಲ್ಲಿ ಸಂಪರ್ಕ ಸಿಗದೇ ಆಸಹಾಯಕರಾಗಿದ್ದರು.

ಈ ಸಮಸ್ಯೆಯಿಂದ ಹಣಕಾಸು ವಂಚನೆಗೊಳಗಾದ ದೂರುದಾರರ ಹಣವನ್ನು ಗೋಲ್ಡನ್ ​ಅವರ್ ನಲ್ಲಿ ಸಂಬಂಧಿಸಿದ ಬ್ಯಾಂಕ್‍ಗಳಲ್ಲಿ ತಡೆಹಿಡಿಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು. ಇದರಿಂದಾಗಿ ಸದರಿ ಹಣ ವಂಚಕರ ಖಾತೆಗೆ ವರ್ಗಾವಣೆಯಾಗಲು ಸುಲಭವಾಗುತ್ತಿತ್ತು.

ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಇಲಾಖೆಯು, ಸಮಸ್ಯೆಯನ್ನು ಪರಿಹರಿಸಲು ದೂರುದಾರರ ಕರೆಗಳನ್ನು ಹಣಕಾಸು ಸಂಬಂಧಿತ ದೂರುಗಳು, ಹಣಕಾಸೇತರ ಸಂಬಂಧಿತ ದೂರುಗಳು (ಉದಾ.: WhatsApp/Facebook ಖಾತೆಯ ಹ್ಯಾಕ್‍ಗಳು ಅಥವಾ Impersonation), ದೂರಿನ ಸ್ಥಿತಿ ವಿಚಾರಣೆಗಳು ಮತ್ತು ಸೈಬರ್ ಅಪರಾಧ ಸಂಬಂಧಿತ ಕುಂದುಕೊರತೆ ಕರೆಗಳಾಗಿ ಐವಿಆರ್ ವ್ಯವಸ್ಥೆಯ ಮೂಲಕ ವರ್ಗೀಕರಿಸಲಾಗಿದೆ.

ಇದರಿಂದಾಗಿ ಹೊಸ ದೂರನ್ನು ಸಕಾಲದಲ್ಲಿ ದಾಖಲಿಸುವವರಿಗೆ ಆದ್ಯತೆ ನೀಡಲಾಗಿದೆ ಮತ್ತು Voice Guided WebBOT ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ದೂರುದಾರರು ವೆಬ್‍ಬಾಟ್ ಮೂಲಕ ಮಾಹಿತಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಎಸ್‍ಎಂಎಸ್ ಮೂಲಕ ವೆಬ್‍ಬಾಟ್ ಲಿಂಕ್ ಅನ್ನು ಕಳುಹಿಸಲಾಗುವುದು.

ನಂತರ ಈ ಸಹಾಯವಾಣಿಯ ಸಿಬ್ಬಂದಿಯ ಮೂಲಕ ಸದರಿ ಮಾಹಿತಿಯನ್ನು ​ಎನ್.ಸಿ.ಆರ್.ಪಿ ಯಲ್ಲಿ ದಾಖಲಿಸಲಾಗುವುದು. ಇದು ಸಾರ್ವಜನಿಕರಿಗೆ 1930 ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹಾಗೂ ಕಾಲ್ ಡ್ರಾಪ್‍ಗಳನ್ನು ಸಹ ತಡೆಯಲು ಸಹಾಯವಾಗುತ್ತದೆ.

1930 ಸಹಾಯವಾಣಿಯ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತವಾಗಿದ್ದ ಸಮಯದಲ್ಲಿ ದೂರುದಾರರು ಸ್ವಯಿಚ್ಚೆಯಿಂದ ಕರೆ ಕಡಿತಗೊಳಿಸಿದ ಸಮಯದಲ್ಲೂ ಸಹ ಎಸ್‍ಎಂಎಸ್ ಮುಖಾಂತರ ಈ ವೆಬ್‍ಬಾಟ್ ಲಿಂಕ್ ಅನ್ನು ಸದರಿ ದೂರುದಾರರಿಗೆ ಕಳುಹಿಸಲಾಗುವುದು.

2022 ರಲ್ಲಿ 20,894 ದೂರುಗಳನ್ನು ಸೈಬರ್ ಕ್ರೈಂ ಸಹಾಯವಾಣಿ-1930 ಮೂಲಕ National Cyber Crime Reporting Portal (NCRP) ನಲ್ಲಿ ದಾಖಲಿಸಲಾಗಿದ್ದು, 2024 ರಲ್ಲಿ 97,929 ದೂರುಗಳನ್ನು ದಾಖಲಿಸಲಾಗಿತ್ತು. 2022ನೇ ಇಸವಿಯಲ್ಲಿ ವರದಿಯಾದ ಒಟ್ಟು ವಂಚನೆಯ ಮೊತ್ತವು ರೂ.113 ಕೋಟಿ ರೂಪಾಯಿಗಳಾಗಿದ್ದು, ನಂತರ 2024 ರಲ್ಲಿ ರೂ.2,396 ಕೋಟಿಗಳಿಗೆ ಏರಿಕೆಯಾಗಿರುತ್ತದೆ. ಈ ಸಂಬಂಧ ಸೈಬರ್ ಕ್ರೈಂ ಸಹಾಯವಾಣಿ-1930 ರ ಮೂಲಕ ಬ್ಯಾಂಕ್‍ಗಳಲ್ಲಿ ತಡೆಹಿಡಿಯಲಾದ ಮೊತ್ತವು 2022 ರಲ್ಲಿ 8 ಕೋಟಿಗಳಾಗಿದ್ದು, ನಂತರ 2024 ರಲ್ಲಿ ರೂ.226 ಕೋಟಿ ವಂಚನೆಯ ಹಣವನ್ನು ತಡೆಹಿಡಿಯಲಾಗಿದೆ. ಸದರಿ ಮೊತ್ತವು ವಂಚನೆಯ ಮೊತ್ತದ ಶೇಕಡಾ 9 ರಷ್ಟು ಆಗಿರುತ್ತದೆ.

ಈ ಹೊಸ ವ್ಯವಸ್ಥೆಯ ಪರಿಣಾಮದಿಂದಾಗಿ 2025 ರ ಮೊದಲ ತ್ರೈಮಾಸಿಕದಲ್ಲಿ 38,000 ಪ್ರಕರಣಗಳನ್ನು ಸೈಬರ್ ಕ್ರೈಂ ಸಹಾಯವಾಣಿ-1930 ಮೂಲಕ ದಾಖಲಿಸಲಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ ಮಾರ್ಚ್ 2025ರ ಅಂತ್ಯಕ್ಕೆ ವಂಚನೆ ಹಣದ ಶೇಕಡಾ 16 ರಷ್ಟು ಮೊತ್ತವನ್ನು ಬ್ಯಾಂಕ್‍ಗಳಲ್ಲಿಯೇ ತಡೆಯುವಲ್ಲಿ ಶ್ರಮವಹಿಸಿರುತ್ತೇವೆ ಎಂದು ಹೇಳಿದರು.

ವೆಬ್‍ಬಾಟ್ ವ್ಯವಸ್ಥೆ ಜೊತೆಗೆ ಹೊಸ ಸೌಲಭ್ಯಗಳ ವಿವರ:

•1930 ಸಹಾಯವಾಣಿಯಲ್ಲಿ ಈ ಹಿಂದಿನ ದೂರವಾಣಿ ಮೂಲಸೌಕರ್ಯವನ್ನು ಬದಲಾಯಿಸಿ SIP ಲೈನ್‍ಗಳಿಗೆ ಉನ್ನತೀಕರಿಸಲಾಗಿದೆ. ಇದು ಹೆಚ್ಚುತ್ತಿರುವ ದೂರು ಕರೆಗಳ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

* ​ಭಾಷಾ ಆಯ್ಕೆ IVR (Interactive Voice Response) ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಈ ವ್ಯವಸ್ಥೆಯು ವಂಚನೆಗೊಳಗಾದ ದೂರುದಾರರ ಸಂವಹನಕ್ಕಾಗಿ ಕನ್ನಡ, ​ಇಂಗ್ಲೀಷ್ ಅಥವಾ ಹಿಂದಿ ​ಭಾಷೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

•ವಂಚನೆಗೊಳಗಾದ ದೂರುದಾರರು 1930 ಸಹಾಯವಾಣಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸುವ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರೆ, ಈ ಸಮಯದಲ್ಲಿ ಐವಿಆರ್ ಮೂಲಕ ದೂರುದಾರರ Queue Position ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.

•ಹಣಕಾಸೇತರ ಸಂಬಂಧಿತ ದೂರುಗಳಲ್ಲಿ (ಉದಾ.: WhatsApp/Facebook ಖಾತೆಯ ಹ್ಯಾಕ್‍ಗಳು ಅಥವಾ Impersonation) ಸಮಸ್ಯೆಯನ್ನು ಬಗೆಹರಿಸುವ ಬಗೆಗಿನ ಮಾಹಿತಿಯ ಲಿಂಕ್ ಅನ್ನು ಎಸ್‍ಎಂಎಸ್ ಮುಖಾಂತರ ದೂರುದಾರರಿಗೆ ನೀಡಲಾಗುವುದು.

•ವಂಚನೆಗೊಳಗಾದವರು ಮತ್ತು ವಂಚಕರ ಬಗೆಗಿನ ಮಾಹಿತಿಯನ್ನು ಸಹ ಸಂಗ್ರಹಿಸಿ, ಶೇಖರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಮಾಹಿತಿಯಿಂದ ತನಿಖಾಧಿಕಾರಿಗಳು ಆರೋಪಿಯ ಬಗ್ಗೆ ಹಾಗೂ ವಂಚನೆಗಳ ಬಗ್ಗೆ ವಿಶ್ಲೇಷಿತ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

•ಸೈಬರ್ ಕ್ರೈಂ ಸಹಾಯವಾಣಿ-1930 ವನ್ನು ಮಾನ್ಯ ಹೆಚ್ಚುವರಿ ​ಪೊಲೀಸ್ ಮಹಾ ನಿರ್ದೇಶಕರಾದ ಎಸ್. ಮುರುಗನ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಧಾರಿತ ಸಾಫ್ಟ್‍ವೇರ್ ಹಾಗೂ ಮೂಲ ಸೌಕರ್ಯದೊಂದಿಗೆ ಅಂದಾಜು ವೆಚ್ಚ 01 ಕೋಟಿ ರೂಗಳಲ್ಲಿ ಉನ್ನತೀಕರಿಸಲಾಗಿದ್ದು, ಇದರಿಂದ ಹಣಕಾಸು ವಂಚನೆಗೊಳಗಾದ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ.

•1930 ಸಹಾಯವಾಣಿಯು ಸೈಬರ್ ಅಪರಾಧಗಳಿಗೆ ಒಳಗಾದ ನಾಗರೀಕರಿಗೆ ದಿನದ 24 ಗಂಟೆಗಳ ಕಾಲವೂ ಉತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಹೆಚ್ಚುವರಿ ಮಹಾ ನಿರ್ದೇಶಕರಾದ ನಂಜುಂಡಸ್ವಾಮಿ ಹಾಗೂ ಡಿಜಿಪಿ ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

BIG NEWS: Important step to prevent cybercrime in the state: Police department upgrades web bot along with helpline!
Share. Facebook Twitter LinkedIn WhatsApp Email

Related Posts

BIG NEWS : ನನಗೆ ಏನು ಬೇಕೋ ಚಾಮುಂಡೇಶ್ವರಿ ಬಳಿ ಕೇಳಿಕೊಂಡಿದ್ದೇನೆ : ಡಿಸಿಎಂ ಡಿಕೆ ಶಿವಕುಮಾರ್

04/07/2025 10:29 AM1 Min Read

ರೈತರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆ ಹಣ.!

04/07/2025 10:28 AM2 Mins Read

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಪ್ರಕರಣ : ಇಂದು ಹಾರ್ಟ್ ಅಟ್ಯಾಕ್ ಗೆ ಮತ್ತಿಬ್ಬರು ಬಲಿ!

04/07/2025 10:22 AM1 Min Read
Recent News

BIG NEWS : ನನಗೆ ಏನು ಬೇಕೋ ಚಾಮುಂಡೇಶ್ವರಿ ಬಳಿ ಕೇಳಿಕೊಂಡಿದ್ದೇನೆ : ಡಿಸಿಎಂ ಡಿಕೆ ಶಿವಕುಮಾರ್

04/07/2025 10:29 AM

ರೈತರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆ ಹಣ.!

04/07/2025 10:28 AM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಪ್ರಕರಣ : ಇಂದು ಹಾರ್ಟ್ ಅಟ್ಯಾಕ್ ಗೆ ಮತ್ತಿಬ್ಬರು ಬಲಿ!

04/07/2025 10:22 AM

ALERT : ಸಾರ್ವಜನಿಕರೇ ಗಮನಿಸಿ : ಈ 5 ಕೆಲಸಗಳನ್ನು ಮಾಡುವುದರಿಂದ ನಿಮಗೆ ಎಂದಿಗೂ `ಹೃದಯಾಘಾತ’ವಾಗುವುದಿಲ್ಲ.!

04/07/2025 10:22 AM
State News
KARNATAKA

BIG NEWS : ನನಗೆ ಏನು ಬೇಕೋ ಚಾಮುಂಡೇಶ್ವರಿ ಬಳಿ ಕೇಳಿಕೊಂಡಿದ್ದೇನೆ : ಡಿಸಿಎಂ ಡಿಕೆ ಶಿವಕುಮಾರ್

By kannadanewsnow0504/07/2025 10:29 AM KARNATAKA 1 Min Read

ಮೈಸೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಕುಟುಂಬ ಸಮೇತವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ…

ರೈತರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆ ಹಣ.!

04/07/2025 10:28 AM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಪ್ರಕರಣ : ಇಂದು ಹಾರ್ಟ್ ಅಟ್ಯಾಕ್ ಗೆ ಮತ್ತಿಬ್ಬರು ಬಲಿ!

04/07/2025 10:22 AM

ALERT : ಸಾರ್ವಜನಿಕರೇ ಗಮನಿಸಿ : ಈ 5 ಕೆಲಸಗಳನ್ನು ಮಾಡುವುದರಿಂದ ನಿಮಗೆ ಎಂದಿಗೂ `ಹೃದಯಾಘಾತ’ವಾಗುವುದಿಲ್ಲ.!

04/07/2025 10:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.