ಬೆಂಗಳೂರು : ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಆದೇಶದಲ್ಲಿ 2024-25 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು.
ಮುಂದುವರೆದು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ(Welfare Departments) ವಸತಿ ನಿಲಯಗಳು ಮತ್ತು KRIES ಶಾಲೆಗಳಿಗೆ ಸೇರಿದ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸಂಬಂಧಿಸಿದ ವೆಚ್ಚಗಳ ಬಿಲ್ಲುಗಳನ್ನು (ವೆಚ್ಚದ ವಿವರ ಮತ್ತು ಉದ್ದೇಶಿತ ಲೆ.ಶೀ. ವಿವರ ಲಗತ್ತಿಸಿದೆ) ಖಜಾನೆಯಲ್ಲಿ ದಿನಾಂಕ:17.03.2025 ರವರೆಗೆ ಸ್ವೀಕರಿಸಲು ಅನುಮತಿ ನೀಡಲಾಗಿದ್ದು, ಈ ಸಂಬಂಧ ಎಲ್ಲಾ ಬಿಲ್ಲುಗಳನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಎಲ್ಲಾ ಜಿಲ್ಲಾ ಖಜಾನಾಧಿಕಾರಿಗಳಿಗೆ `ಸೂಚನೆ ನೀಡುವಂತೆ ತಿಳಿಸಲು ನಾನು ನಿರ್ದೇಶಿತಳಾಗಿದ್ದೇನೆ ಎಂದು ಸರ್ಕಾರದ ಜಂಟಿ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.