ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಶಾಲಾ ಸಮಯದಲ್ಲಿ ಮಕ್ಕಳಿಗೆ ನಿಗದಿಪಡಿಸಿರುವ ಆಟದ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಟದ ಅವಧಿ ಕಡಿತಗೊಳಿಸದಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಎಸ್ ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ನೀಡುವ ಉದ್ದೇಶದಿಂದ 10ನೇ ತರಗತಿ ಮಕ್ಕಳ ಆಟದ ಸಮಯ ಕಡಿತಗೊಳಿಸಲಾಗುತ್ತಿದೆ ಎಂದು ಬಂದ ದೂರು ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಶಾಲೆಗಳಿಗೆ ಈ ಸೂಚನೆ ನೀಡಿದೆ.
ಶಾಲೆಗಳಲ್ಲಿ ಆಟ, ಕಲೆ ಮತ್ತು ಇನ್ನಿತರ ಪತ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವೈಯಕ್ತಿಕ ವಿಕಾಸದ ಅವಿಭಾಜ್ಯ ಅಂಗವಾಗಿದ್ದು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಪ್ರಕಾರ, ಆಟ ಮಕ್ಕಳ ಹಕ್ಕು ಅದನ್ನು ನಿರ್ಬಂಧಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಮೇಲ್ಕಂಡ ವಿಷಯಕ್ಕೆ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿವಿಧ ಭಾಗಗಳಲ್ಲಿ ಮಕ್ಕಳೊಂದಿಗೆ ನಡೆಸಿದ ಸಂವಾದ ಶಾಲಾ ಬೇಟಿಯ ಸಮಯದಲ್ಲಿ 10ನೇ ತರಗತಿಯ ಮಕ್ಕಳು ವೇಳಾಪಟ್ಟಿಯಲ್ಲಿ ನಿಗದಿಗೊಳಿಸಿದ ಆಟದ ಅವಧಿಯನ್ನು ನಡೆಸದೇ ಇರುವುದು ಗಮನಿಸಲಾಗಿರುತ್ತದೆ. ಆಟ ಕಲೆ ಇನ್ನಿತರ ಪಠೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವೈಯಕ್ತಿಕ ವಿಕಾಸದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಮನಗೊಂಡು ವಿಶ್ವಸಂಸ್ಥೆಯು ಜೂನ್ 11ರಂದು ಪ್ರತಿವರ್ಷ ಅಂತರಾಷ್ಟ್ರೀಯ ಆಟದ ದಿನವೆಂದು ಗುರುತಿಸಲಾಗಿದೆ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶಾಲಾ ಉತ್ತಮ ಫಲಿತಾಂಶ ಗಳಿಸಬೇಕೆಂಬ ಒಂದು ಕಾರಣದಿಂದ ಮಕ್ಕಳ ಆಟಗಳನ್ನು ನಿರ್ಬಂಧಿಸುತ್ತಿರುವುದು ವಿಪರ್ಯಾಸದ ಸಂಗತಿ. ಇದು ಮಕ್ಕಳ ಕಲಿಕೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 31ರ ಪ್ರಕಾರ ಆಟ ಮಕ್ಕಳ ಹಕ್ಕು. ಅದನ್ನು ನಿರ್ಭಂಧಿಸುವುದು ಮಕ್ಕಳ ಅಭಿವೃದ್ಧಿ ಹೊಂದುವ ಹಕ್ಕಿನ ಉಲ್ಲಂಘನೆ ಯಾಗುತ್ತದೆ ಅದನ್ನು ತಡೆಗಟ್ಟುವ ಬಗ್ಗೆ ಸಂಬಂಧಪಟ್ಟ ವರಿಗೆ ಶಾಲಾ ವೇಳಾಪಟ್ಟಿಯಂತೆ ಆಟದ ಅವಧಿಯನ್ನು ಕಡ್ಡಾಯವಾಗಿ ನಡೆಸಲು ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.
ಪ್ರಸುತ್ತ 2025-26 ನೇ ಸಾಲಿನ ಶಾಲಾ ವೇಳಾಪಟ್ಟಿಯಲ್ಲಿ ನಿಗಧಿಪಡಿದ ದೈಹಿಕ ಶಿಕ್ಷಣದ ಸಮಯವನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ/ ಅನುದನಿತ/ ಅನುದಾನರಹಿತ ಶಾಲೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರುಗಳಿಗೆ ತಿಳಿಸುತ್ತ ತಮ್ಮ ಅಧೀನದಲ್ಲಿ ಬರುವ ಕ್ಷೇತ್ರ ಶಿಣಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ದೈಹಿಕ ಶಿಕ್ಷಣದ ಸಮಯವನ್ನು ಅದಕ್ಕಾಗಿ ಮೀಸಲಿಡುವಂತೆ ನಿರ್ದೇಶನ ನೀಡಲು ಸೂಚಿಸಿದೆ.








