ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಎಂಬುದಾಗಿ ಕರೆಯುವಂತ ಯೋಜನೆಯಡಿ ಸರ್ಕಾರಿ ನೌಕರರ ಕುಟುಂಬಸ್ಥರ ನೋಂದಣಿ ಕಡ್ಡಾಯ. ಹಾಗಾದ್ರೇ ಇದಕ್ಕೆ ಏನೆಲ್ಲ ದಾಖಲೆ ಬೇಕು ಅಂತ ಮುಂದೆ ಓದಿ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರರ ಕೆಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಪತ್ನಿ ಅಥವಾ ಪತ್ನಿಯ ಉದ್ಯೋಗದ ವಿವರ, ತಂದೆಯ ವಿವರ, ತಾಯಿ, ಮಲ ತಾಯಿ, ಮಕ್ಕಳ ಮಾಹಿತಿಯನ್ನು ನಮೂದಿಸಬೇಕಾಗಿದೆ.
ಈ ದಾಖಲೆಗಳು ಕಡ್ಡಾಯ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
1.ಸರ್ಕಾರಿ ನೌಕರನ ಹಾಗೂ ಕುಟುಂಬದ ಅರ್ಹ ಸದಸ್ಯರ ಭಾವಚಿತ್ರ – ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ ನೀಡಬೇಕು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಹೊಸ ಭಾವಚಿತ್ರ ಒದಗಿಸಬೇಕು.
2.ಜನ್ಮ ದಿನಾಂಕ ದಾಖಲೆಗಳು
3.ಆಧಾರ್ ಕಾರ್ಡ್ ಗಳು
4.ವೇತನ ಚೀಟಿಗಳು
5.ಕಾನೂನು ದಾಖಲೆಗಳು ಅಂದರೆ ದತ್ತು ವಿವಾಹ ಇತ್ಯಾದಿ ಸಂದರ್ಭಗಳಲ್ಲಿ.