Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಲಿದೆ ಈ 11 ಪ್ರಮುಖ ನಿಯಮಗಳು |New Rules from March 1

01/03/2026 4:55 AM

ಗಮನಿಸಿ : ಮಾ.1ರಿಂದ ಹೊಸ ನಿಯಮಗಳು ಜಾರಿ, ಅಡುಗೆಮನೆಯಿಂದ ಪ್ರಯಾಣದವರೆಗೆ ನಿಮ್ಮ ನೇರ ಪರಿಣಾಮ!

28/02/2026 10:05 PM

BREAKING : ‘ಹಾರ್ಮುಜ್ ಜಲಸಂಧಿ’ ಮುಚ್ಚುವುದಾಗಿ ಇರಾನ್ ಘೋಷಣೆ, ಹಡಗು ಸಂಚಾರ ರದ್ದು

28/02/2026 9:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರಿಗೆ ಮುಖ್ಯ ಮಾಹಿತಿ : `HRMS ESS’ ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ!
KARNATAKA

BIG NEWS : ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರಿಗೆ ಮುಖ್ಯ ಮಾಹಿತಿ : `HRMS ESS’ ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ!

By kannadanewsnow5718/09/2024 7:30 PM
vidhana soudha
vidhana soudha

ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್‌ನ ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್‌ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್‌ಅನ್ನು ಸಿದ್ಧಪಡಿಸಿದೆ. ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

1) ವೇತನ ಚೀಟಿ (Pay Slip) ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು.

2) ರಜೆ ಬಾಕಿ (Leave Balance) ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.

3) ಸಾಲ/ಮುಂಗಡ (Loan/Advance) ನೌಕರರು ಸಾಲ/ಮುಂಗಡದ ವಿವರಗಳನ್ನು ವೀಕ್ಷಿಸಬಹುದು.

4) ಕಡಿತದ ವಿವರಗಳು (Deduction Details) ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.

5) ವಿಮೆ (Insurance) ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.

6) ಇ-ಸೇವಾ ಪುಸ್ತಕ (Service Register Book) ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬಹುದು.

7) ಹೆಚ್‌ಆರ್‌ಎಂಎಸ್ ಟಿಕೆಟ್ (Ticket Status) ನೌಕರರು ಹೆಚ್‌ಆರ್‌ಎಂಎಸ್‌ನಲ್ಲಿ ಸೃಜಿಸಿದ ಟಿಕೇಟ್‌ನ ವಿವರಗಳನ್ನು ವೀಕ್ಷಿಸಬಹುದು.
8) ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ) ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.

9) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)

> ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್ ಪೋರ್ಟಲ್‌ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ

ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.

10) ಕೆಜಿಐಡಿ ವಿಮಾ ಪತ್ರಗಳ ಪರಿಶೀಲನೆ

ಈ ಪರದೆಯಲ್ಲಿ ಸಿಬ್ಬಂದಿಗಳು ತಮ್ಮ ಕೆಜಿಐಡಿ ವಿಮಾ ಪತ್ರಗಳ ಹೆಚ್‌ಆರ್‌ಎಂಎಸ್‌ ನಲ್ಲಿನ | ಮಾಹಿತಿ ಹಾಗೂ ಕೆಜಿಐಡಿಯಲ್ಲಿನ ಮಾಹಿತಿಯನ್ನು ವೀಕ್ಷಿಸಬಹುದು. ಸಿಬ್ಬಂದಿಗಳು ಎರಡು ಅಂಕಣಗಳನ್ನು ಪರಿಶೀಲಿಸಿ ತಾಳ ಮಾಡಿ ಸರಿಯಾಗಿದ್ದಲ್ಲಿ ಸರಿಯಾಗಿ ಕಂಡು ಬಂದಿದೆ ಎಂಬ ಚೆಕ್ ಬಾಕ್ಸ್‌ ಅನ್ನು ಕ್ಲಿಕ್ ಮಾಡಿ ಉಳಿಸಬೇಕು (Save). ಒಂದು ವೇಳೆ ಯಾವುದಾದರೂ ವಿಮಾ ಮಾಹಿತಿಯು ತಪ್ಪಾಗಿದ್ದಲ್ಲಿ ಅದನ್ನು ಸೂಚಿಸಬಹುದಾಗಿದೆ. ಅದಲ್ಲದೇ ಯಾವುದಾದರೂ ವಿಮಾ ವಿವರಗಳು ಬಿಟ್ಟುಹೋದಲ್ಲಿ ಅದನ್ನು ಸೇರಿಸಬಹುದು. ಕೊನೆಯದಾಗಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಇ-ಸಹಿ ಯನ್ನು ಮಾಡಬೇಕು.

11) ಪ್ರಮುಖ ಲಿಂಕ್‌ಗಳು

ರಾಜ್ಯ ಸರ್ಕಾರದ ಪ್ರಮುಖ ಜಾಲತಾಣವಾದ ಕೆಜಿಐಡಿ, ಮಹಾಲೇಖಪಾಲರು-ಸಾಭನಿ, ಖಜಾನೆ-2, ಎನ್‌ಎಸ್‌ಡಿಎಲ್, ಮಹಾಲೇಖಪಾಲರು-ಜಿಇ, ಹೆಚ್‌ಆರ್‌ಎಂಎಸ್ ಅಪ್ಲಿಕೇಷನ್ ಗಳ ಪ್ರಮುಖ ಲಿಂಕ್‌ಗಳನ್ನು ಒದಗಿಸಲಾಗಿದೆ.

ಮುಂದುವರೆದು, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.

ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ដ មួយ ជ. ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ. ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.

 

BIG NEWS : ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರಿಗೆ ಮುಖ್ಯ ಮಾಹಿತಿ : `HRMS ESS' ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ! BIG NEWS: Important Information for all officers/employees of the State Government : Registration on 'HRMS ESS' portal is mandatory!
Share. Facebook Twitter LinkedIn WhatsApp Email

Related Posts

ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ

28/02/2026 9:27 PM2 Mins Read

BREAKING: ಬೆಂಗಳೂರಲ್ಲಿ ಘೋರ ದುರಂತ: ನೀರಿನ ಸಂಪು ಸ್ವಚ್ಛಗೊಳಿಸಲು ಇಳಿದ ಮೂವರು ಉಸಿರುಗಟ್ಟಿ ಸಾವು

28/02/2026 9:25 PM1 Min Read

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ

28/02/2026 8:39 PM2 Mins Read
Recent News

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಲಿದೆ ಈ 11 ಪ್ರಮುಖ ನಿಯಮಗಳು |New Rules from March 1

01/03/2026 4:55 AM

ಗಮನಿಸಿ : ಮಾ.1ರಿಂದ ಹೊಸ ನಿಯಮಗಳು ಜಾರಿ, ಅಡುಗೆಮನೆಯಿಂದ ಪ್ರಯಾಣದವರೆಗೆ ನಿಮ್ಮ ನೇರ ಪರಿಣಾಮ!

28/02/2026 10:05 PM

BREAKING : ‘ಹಾರ್ಮುಜ್ ಜಲಸಂಧಿ’ ಮುಚ್ಚುವುದಾಗಿ ಇರಾನ್ ಘೋಷಣೆ, ಹಡಗು ಸಂಚಾರ ರದ್ದು

28/02/2026 9:58 PM

ಇರಾನ್ ಉದ್ವಿಗ್ನತೆಯ ಮಧ್ಯೆ ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳಿಗೆ ಬೆಂಬಲ ಘೋಷಿಸಿದ ಪಾಕಿಸ್ತಾನ

28/02/2026 9:54 PM
State News
KARNATAKA

ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ

By kannadanewsnow0928/02/2026 9:27 PM KARNATAKA 2 Mins Read

ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು…

BREAKING: ಬೆಂಗಳೂರಲ್ಲಿ ಘೋರ ದುರಂತ: ನೀರಿನ ಸಂಪು ಸ್ವಚ್ಛಗೊಳಿಸಲು ಇಳಿದ ಮೂವರು ಉಸಿರುಗಟ್ಟಿ ಸಾವು

28/02/2026 9:25 PM

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ

28/02/2026 8:39 PM

ನಾಳೆ ಹಾಸ್ಟೆಲ್ ಪ್ರವೇಶಕ್ಕೆ ಪರೀಕ್ಷೆ: 2.31 ಲಕ್ಷ ಮಕ್ಕಳು ಪರೀಕ್ಷೆ ಬರೆಯುವ ನಿರೀಕ್ಷೆ

28/02/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.