ಬೆಂಗಳೂರು : ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ಪರಿಶಿಷ್ಟ ಜಾತಿಯ ನೌಕರರ ಮಾಹಿತಿಯನ್ನು ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಹೆಚ್ ಎನ್ ನಾಗಮೋಹನ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದ್ದು, ಸದರಿ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಸರ್ಕಾರಕ್ಕೆ ಜರೂರಾಗಿ ವರದಿ ಸಲ್ಲಿಸಬೇಕಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆ/ನಿಗಮ/ಮಂಡಳಿ/ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಪರಿಶಿಷ್ಟ ಜಾತಿಯ ಅಧಿಕಾರಿ/ನೌಕರರ ಉಪಜಾತಿಗಳ ಬಗ್ಗೆ ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಬಗ್ಗೆ ನಿಗಧಿತ ನಮೂನೆಗಳಲ್ಲಿ ಮಾಹಿತಿಯನ್ನು ಪಡೆಯಲು Format ನ್ನು ಸಿದ್ಧಪಡಿಸಿ Online ಮೂಲಕ ಸಲ್ಲಿಸಲು Web Portal ನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದನ್ನು ಸಮಾಜ ಕಲ್ಯಾಣ ಇಲಾಖೆಯ Website www.sw.kar.nic.in ನಲ್ಲಿ host ಮಾಡಲಾಗಿದ್ದು, ಈ ಮಾಹಿತಿಯನ್ನು ಸಂಗ್ರಹಿಸಿ web portal ನಲ್ಲಿ Update ಮಾಡಲು ಪ್ರತಿ ಇಲಾಖೆಯಲ್ಲಿ ತಾಂತ್ರಿಕ ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸಿ ಸದರಿಯವರ ಹೆಸರು, ಹುದ್ದೆಯ ಪದನಾಮ, ಮೋಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು 2-ಉಲ್ಲೇಖ[1]ರ ಪ್ರಕಾರ ಸೂಚಿಸಿರುತ್ತಾರೆ justicengmdasinquirycommission@gmail.com ಗೆ ಸಲ್ಲಿಸಲು ಸೂಚಿಸಿರುತ್ತಾರೆ.
ಆದಕಾರಣ ಶಾಲಾ ಶಿಕ್ಷಣ ಇಲಾಖೆಯ ಪರಿಶಿಷ್ಟ ಜಾತಿಯ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದವಾರು ನೌಕರರ ಉಪಜಾತಿಯ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಯ Website www.sw.kar.nic.in ನಲ್ಲಿ ಅಭಿವೃದ್ಧಿಗೊಳಿಸಿರುವ web portal ನಲ್ಲಿ ನಮೂದಿಸಲು ಈ ಇಲಾಖೆಯಿಂದ ನೇಮಕಗೊಂಡ ನೋಡಲ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಉಲ್ಲೇಖ [2]ರಪಕಾರ ಕೋರಿರುತ್ತಾರೆ.
ಸದರಿ ಪತ್ರದ ಜೊತೆಗೆ ನಮೂನೆ-1 ಹಾಗೂ ಒಟ್ಟು 05 ಅನುಬಂಧಗಳಿದ್ದು, ನಮೂನೆ-1 ರಲ್ಲಿ ಪ್ರತಿಯೊಬ್ಬ ಪರಿಶಿಷ್ಟ ಜಾತಿಯ ಅಧಿಕಾರಿ/ಸಿಬ್ಬಂದಿಗಳಿಂದ ಪ್ರತ್ಯೇಕವಾಗಿ ಮಾಹಿತಿಯನ್ನು ಪಡೆದು ಕ್ರೋಢೀಕರಿಸಿ, ಅನುಬಂಧ 1ರಿಂದ 5 ರ ನಮೂನೆಗಳನ್ನು ಭರ್ತಿ ಮಾಡಿ ಇಲಾಖೆಯ ಒಟ್ಟಾಗಿ ವೃಂದವಾರು ಸಂಖ್ಯೆಯನ್ನು ಮಾತ್ರ web portal ನಲ್ಲಿ Update ಮಾಡಲು ಸೂಚಿಸಿರುತ್ತಾರೆ.
ಪ್ರಯುಕ್ತ ಉಲ್ಲೇಖಿತ ಪತ್ರ ಹಾಗೂ ನಮೂನೆ/ಅನುಬಂಧಗಳನ್ನು ಈ ಪತ್ರಕ್ಕೆ ಲಗತ್ತಿಸಿ ಕಳುಹಿಸುತ್ತಾ, ಉಲ್ಲೇಖಿತ ಪತ್ರಗಳಲ್ಲಿ ಸೂಚಿಸಿರುವಂತೆ, ತಮ್ಮ ಜಿಲ್ಲೆಯ ಎಲ್ಲ ವೃಂದಗಳ ಪರಿಶಿಷ್ಟ ಜಾತಿಯ ಅಧಿಕಾರಿ/ನೌಕರರ ಮಾಹಿತಿಯನ್ನು ಪಡೆದು ಅನುಬಂಧಗಳಲ್ಲಿ ಭರ್ತಿ ಮಾಡಿ ದೃಢೀಕರಿಸಿ ಸಲ್ಲಿಸಲು ಸೂಚಿಸಿದೆ. ಸದರಿ ಮಾಹಿತಿಯನ್ನು ತುರ್ತಾಗಿ ಸರಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಯಾವುದೇ ರೀತಿಯ ವಿಳಂಬ ನೀತಿ ಅನುಸರಿಸದೇ, ನೆನಪೋಲೆಗಳಿಗೆ ಅವಕಾಶ ನೀಡದೇ ಸದರಿ ಮಾಹಿತಿಯನ್ನು ತುರ್ತಾಗಿ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.
ಸದರಿ ಮಾಹಿತಿಯನ್ನು ನಿಖರವಾದ ಅಂಕಿ ಸಂಖ್ಯೆಗಳೊಂದಿಗೆ ಕಾಲಮಿತಿಯಲ್ಲಿ ಸಲ್ಲಿಸಬೇಕಾಗಿರುವುದರಿಂದ ಈ ಕುರಿತು ತಮ್ಮ ಜಿಲ್ಲಾ ಹಂತದಲ್ಲಿ ತಾಂತ್ರಿಕ ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸಿ, ಅವರ ವಿವರಗಳನ್ನು ಕೂಡಲೇ ಮರುಟಪಾಲಿನಲ್ಲಿ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.