ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 111(iv)ರ ಘೋಷಣೆಯಂತೆ “ಓದು ಕರ್ನಾಟಕ” ಯೋಜನೆಯಡಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ ಆದೇಶದಲ್ಲಿ 2024-25ನೇ ಸಾಲಿಗೆ ಪೂರಕವಾಗಿ ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ, ಉರ್ದು ಮತ್ತು ಮರಾಠಿ ಮಾಧ್ಯಮದ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಸಮಗ್ರ ಶಿಕ್ಷಣ ಕರ್ನಾಟಕ-ಯೋಜನಾ ಅನುಮೋದನಾ ಮಂಡಳಿಯಿಂದ 2023-24ರ ‘ನಿಪುಣ್ ಭಾರತ್ ಮಿಷನ್’ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಅನುಮೋದಿತ ರೂ.1242.84 ಲಕ್ಷಗಳಲ್ಲಿ ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು ರೂ.182.00 ಲಕ್ಷಗಳು ಸೇರಿ ಒಟ್ಟು ರೂ.1424.84 ಲಕ್ಷಗಳ ಮಿತಿಯೊಳಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆವತಿಯಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರಲ್ಲಿನ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಭಾಷಣದ ಕಂಡಿಕೆ 111 (iv)ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.
“ಓದು ಕರ್ನಾಟಕ ಯೋಜನೆಯಡಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
ಮೇಲೆ ಓದಲಾದ ಕ್ರಮಾಂಕ (3)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ.
ನಲಿ-ಕಲಿ ಪದ್ಧತಿಯು 1 ರಿಂದ 3ನೇ ತರಗತಿವರೆಗೆ ಜಾರಿಯಲ್ಲಿರುವುದರಿಂದ ಹಾಗೂ ಅದರಿಂದ ಮಕ್ಕಳ ಕಲಿಕಾ ನ್ಯೂನ್ಯತೆ ಹೆಚ್ಚು ಇರುವುದರಿಂದ ಪರಿಹಾರಾತ್ಮಕ ಬೋಧನೆ (Remedial Learning) ಅವಶ್ಯಕತೆ ಇರುತ್ತದೆ. 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 4 ಮತ್ತು 5ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಮತ್ತು ಗಣಿತ ವಿಷಯದ ಮೂಲ ಪರಿಕಲ್ಪನೆಗಳನ್ನು ಶಿಕ್ಷಕರ ಮೂಲಕ ಅರ್ಥೈಸಲಾಗುವುದು. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವೃದ್ಧಿಸಲಾಗುವುದು ಎಂದು ತಿಳಿಸಿರುತ್ತಾರೆ. 1ನೇ ತರಗತಿಯಿಂದ 5ನೇ ತರಗತಿಗಳವರೆಗೆ, ಅನುಕೂಲಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಮತ್ತು ಗಣಿತದ ಮೂಲ ಕ್ರಿಯೆಗಳನ್ನು ಸಾಧಿಸುವಂತೆ ಮಾಡಲು ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಸದರಿ ಓದು ಕರ್ನಾಟಕ ಕಾರ್ಯಕ್ರಮದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ. ಪರಿಹಾರಾತ್ಮಕ ಬೋಧನೆಯನ್ನು 4 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತದ ಪರಿಕಲ್ಪನೆಗಳನ್ನು ಕಲಿಯಲು “ಓದು ಕರ್ನಾಟಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಓದು ಕರ್ನಾಟಕವನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
ಪ್ರಥಮ್ ಸಂಸ್ಥೆಯ ಸಹಯೋಗದೊಂದಿಗೆ 60 ದಿನಗಳ ಅವಧಿಯ ಓದು ಕರ್ನಾಟಕ ಕಾರ್ಯಕ್ರಮವನ್ನು 2023-24ನೇ ಸಾಲಿನ ಪಿ.ಎ.ಬಿ ನಡವಳಿಯ ಕ್ರ.ಸಂ.86ರ ನಿಪುಣ ಭಾರತ ಮೀಷನ್ ಅಡಿಯಲ್ಲಿ ಉಪ ಕಂಡಿಕೆ 86.0.1 ರಲ್ಲಿ ನವೀನ ಶಿಕ್ಷಣಶಾಸ್ತ್ರದ ಅನುಷ್ಠಾನಕ್ಕಾಗಿ ಕಲಿಕಾ ಬೋಧನಾ ಸಾಮಗ್ರಿಗಳನ್ನು ಒದಗಿಸಲು ಅನುಮೋದಿತ ಚಟುವಟಿಕೆಗಳಲ್ಲಿ ಓದು ಕರ್ನಾಟಕ ಕಾರ್ಯಕ್ರಮದ ಕಿಟ್ ಸರಬರಾಜಿಗೆ ಒಟ್ಟು ರೂ.1424.84 ಲಕ್ಷಗಳ ಮೊತ್ತದಲ್ಲಿ 2024-25ನೇ ಸಾಲಿನಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಿಸಲು ದಿನಾಂಕ: 06.11.2024ರಂದು ಸರ್ಕಾರದ ಆದೇಶವಾಗಿರುತ್ತದೆ. ಪರಿಕರಗಳನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಸರಬರಾಜು ಮಾಡಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ರವರ ಹಂತದಲ್ಲಿ ಕಾರ್ಯದೇಶವನ್ನು ನೀಡಲಾಗಿದೆ ಎಂದು ವರದಿಸಿರುತ್ತಾರೆ.
ಈ ಕೆಳಕಂಡಂತೆ ಕಾರ್ಯಕ್ರಮದ ವಿವರವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ನೀಡಿರುತ್ತಾರೆ.