ಬೆಂಗಳೂರು : ಸರ್ಕಾರಿ ನೌಕರ ಕ್ರಿಮಿನಲ್ ಕೇಸ್ ನಲ್ಲಿ ದೋಷಿಯಾದ್ರೆ ಪುನಃ ಸೇವೆಯಲ್ಲಿ ಮುಂದುವರೆಯಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಶಿಕ್ಷೆಗೊಳಗಾಗಿದ್ದ ಹಿನ್ನೆಲೆಯಲ್ಲಿ ತನ್ನನ್ನು ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಉದ್ಯೋಗದಿಂದ ವಜಾಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ನಂಜೇಗೌಡ ಎಂಬಾತ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ನಂಜೇಗೌಡಗೆ 2001ರ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ 2011ರಲ್ಲಿ 2 ವರ್ಷ ಜೈಲಾಗಿತ್ತು. ಶಿಕ್ಷೆ ಪೂರೈಸಿದ ಬಳಿಕ ಮತ್ತೆ ಸೇವೆಗೆ ಸೇರ್ಪಡೆಗೊಳಿಸುವಂತೆ ನಂಜೇಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿಯಾಗಿಜೈಲು ಶಿಕ್ಷೆಗೆ ಒಳಗಾದ ಸರ್ಕಾರಿ ನೌಕರ ಪುನಃ ಸೇವೆಯಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.