ಬೆಂಗಳೂರು :ಮದುವೆಯಾಗುವ ಭರವಸೆ ನೀಡಿ ಯುವತಿ ಯೊಂದಿಗೆ ಸಹ ಜೀವನ ನಡೆಸಿದ್ದರಿಂದ ಹುಟ್ಟಿದ ಮಗನಿಗೆ ಮಾಸಿಕ 3 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಮಗನಿಗೆ ಜೀವನಾಂಶ ಪಾವತಿಸಲು ಒಪ್ಪದೆ ಮೊಂಡುವಾದ ಮಾಡಿದ್ದ ತುಮಕೂರು ಜಿಲ್ಲೆಯ ರಮೇಶ್ (48) ಎಂಬುವವರಿಗೆ ಹೈಕೋರ್ಟ್ ಈ ಆದೇಶ ಮಾಡಿದೆ. ಮಗ ರಕ್ಷಿತ್ಗೆ ಮಾಸಿಕ ಮೂರು ಸಾವಿರ ರೂ.. ಜೀವನಾಂಶ ಪಾವತಿಸುವಂತೆ 2018ರಲ್ಲಿ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್ಗೆ ರಮೇಶ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಮಗ ರಕ್ಷಿತ್ಗೆ ಮಾಸಿಕ ಮೂರು ಸಾವಿರ ರೂ.. ಜೀವನಾಂಶ ಪಾವತಿಸುವಂತೆ ಹೇಳಿದೆ.
ಡಿಎನ್ಎ ಪರೀಕ್ಷೆಯಲ್ಲಿ ರಕ್ಷಿತ್, ರಮೇಶ್ ಪುತ್ರ ಎಂಬುದು ಸಾಬೀತಾಗಿದೆ. ಹಾಗಾಗಿ ಮಗನ ಜೀವನ ನಿರ್ವಹಣೆ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ. ಎಲ್ಲಾ ಪರಿಗಣಿಸಿಯೇ ಮಗನಿಗೆ ಮಾಸಿಕ ಮೂರು ಸಾವಿರ ರೂ.. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸಲು ಸಕಾರಣವಿಲ್ಲ ಎಂದು ಆದೇಶಿಸಿದೆ.