ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು- 2024ರನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು ಕುರಿತು ಮಾಹಿತಿ ಇಲ್ಲಿದೆ.
ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು
ಗ್ರಾಮ ಸಭೆ ದಿನಾಂಕದಿಂದ 7 ದಿನಗಳಿಗೆ ಮೊದಲು ಗ್ರಾಮ ಸಭಾ ನೋಟಿಸ್ ಹೊರಡಿಸಬೇಕು.
ಪ್ರತಿ ಕಂದಾಯ ಗ್ರಾಮ ಹಾಗೂ ಅದರ ಉಪಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ 4 ಬಾರಿ ಕರೆಯಬೇಕು.
ಗ್ರಾಮ ಸಭೆಯ ಕರಪತ್ರ / ನೋಟಿಸ್ ನಲ್ಲಿ
ಸಭೆಯ ದಿನಾಂಕ, ಸ್ಥಳ, ವೇಳೆ, ಅಧ್ಯಕ್ಷತೆ, ಸಭೆಯಲ್ಲಿ ಚರ್ಚಿಸುವ ವಿಷಯಗಳ (ಅಜೆಂಡಾ) ಪಟ್ಟಿಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಸಾಮಾನ್ಯ ಗ್ರಾಮ ಸಭೆಗಳು ಏಪ್ರಿಲ್ 24 ಮತ್ತು ಅಕ್ಟೋಬರ್ 02ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.
ವಿಶೇಷ ಗ್ರಾಮ ಸಭೆಗಳು ಆಗಸ್ಟ್-15 ಮತ್ತು ಜನವರಿ 26ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.
ಗ್ರಾಮ ಸಭಾದಲ್ಲಿರುವ ಒಟ್ಟು ಮತದಾರರ ಶೇ.10ರಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆ ಗ್ರಾಮ ಸಭೆ ನಡೆಸಲು ಕೋರಂ ಆಗಿರುತ್ತದೆ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮನೆಗಳು ಕಡಿಮೆ ಇರುವ ಕಾರಣ, ಸಮೀಪದ ಕಂದಾಯ ಗ್ರಾಮಗಳನ್ನು ಸೇರಿಸಿ ಒಟ್ಟಾಗಿ ಗ್ರಾಮ ಸಭೆ ನಡೆಸಬೇಕು.
ಗ್ರಾಮ ಸಭೆಯ ಪ್ರಕ್ರಿಯೆಗಳನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ನಿರ್ವಹಿಸಿ, ಗ್ರಾಮ ಸಭೆಯ ವರದಿಯನ್ನು ಇಂದೀಕರಿಸುವುದು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು-2024, ದಿನಾಂಕ:30.01.2025ರಲ್ಲಿ ಜಾರಿಗೆ ಬಂದಿದ್ದು, ಇದರ ಉಪಬಂಧಗಳನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವುದು ಹಾಗೂ ನಡೆಸುವುದು ಕಡ್ಡಾಯವಾಗಿರುತ್ತದೆ.