Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM

‘ನೋವು ನಿವಾರಕ’ಗಳ ಅತಿಯಾದ ಬಳಕೆ ನಿಮ್ಮ ಕಿಡ್ನಿಗೆ ಕಂಟಕ ; ಮೌನವಾಗಿ ಹಾನಿ ಮಾಡುತ್ತೆ! ವೈದ್ಯರ ಎಚ್ಚರಿಕೆ

19/03/2026 10:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ʻಸಿʼ ವಲಯಕ್ಕೆ ಪದವೀಧರ ಪ್ರಾಥಮಿಕ ಶಿಕ್ಷಕರು : ಕೌನ್ಸೆಲಿಂಗ್‌ ಮೂಲಕ ಸ್ಥಳ ಹಂಚಿಕೆಗೆ ನಿರ್ದೇಶನ
KARNATAKA

BIG NEWS : ʻಸಿʼ ವಲಯಕ್ಕೆ ಪದವೀಧರ ಪ್ರಾಥಮಿಕ ಶಿಕ್ಷಕರು : ಕೌನ್ಸೆಲಿಂಗ್‌ ಮೂಲಕ ಸ್ಥಳ ಹಂಚಿಕೆಗೆ ನಿರ್ದೇಶನ

By kannadanewsnow5718/06/2024 7:45 AM

ಬೆಂಗಳೂರು : 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಉಪನಿರ್ದೇಶಕರ ಕಛೇರಿಯಲ್ಲಿ ತಾತ್ಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರಿಗೆ ಸಿ ವಲಯದ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಷಯದನ್ವಯ, 2022-23 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು ( 6 ರಿಂದ 8 ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಕೆಲವೊಂದು ಜಿಲ್ಲೆಗಳಲ್ಲಿ ಸಿ ವಲಯದ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ)ಗಳ ಕಛೇರಿಯಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ತದನಂತರ ಉಲ್ಲೇಖ 13 ರಂತೆ ಉಪನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡಿರುವ ಶಿಕ್ಷಕರು ಸೇವೆಯನ್ನು ಶಾಲೆಗಳಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ಅಗತ್ಯತೆಗನುಸಾರ ನಿಯೋಜಿಸಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಇವರಿಗೆ ಸೂಚಿಸಲಾಗಿತ್ತು.

ಉಲ್ಲೇಖ 15 ರ ಜ್ಞಾಪನದಲ್ಲಿ ಉಪನಿರ್ದೇಶಕರು ಕಛೇರಿಯನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಂಡು ಪ್ರಸ್ತುತ ಅಗತ್ಯ ಶಾಲೆಗಳಿಗೆ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ 718 ಶಿಕ್ಷಕರುಗಳಿಗೆ ಸಿ ವಲಯದ ಲಭ್ಯ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಮಾಡಿ ಆದೇಶಿಸಲಾಗಿದೆ.

ಇನ್ನು 609 ಅಭ್ಯರ್ಥಿಗಳು ಸಿ ವಲಯದಲ್ಲಿ ಹುದ್ದೆ ಲಭ್ಯವಿಲ್ಲದ ಕಾರಣ ಅವಕಾಶ ಕಲ್ಪಿಸಲಾಗಿಲ್ಲ. ಪ್ರಸುತ ಸ್ಥಳ ನಿಯುಕ್ತಿ ವೇಳಾ ಪಟ್ಟಿ ಪ್ರಕ್ರಿಯೆ ಮುಂದುವರಿಸಲು ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ, ಉಲ್ಲೇಖ 16 ರಂತೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಶಾಲೆಗಳಿಗೆ ನಿಯೋಜಿಸ್ಪಟ್ಟಿರುವ ಶಿಕ್ಷಕರುಗಳಿಗೆ ವೇತನ ಮತ್ತು ಇತರೆ ಸೇವಾ ಸೌಲಭ್ಯಗಳನ್ನು ನೀಡುವ ಸಂಬಂಧ ಜಿಲ್ಲಾವ್ಯಾಪ್ತಿಯ ಸಿ ವಲಯದ ಶಾಲೆಗಳಲ್ಲಿನ ಲಭ್ಯ ಖಾಲಿ ಹುದ್ದೆಗಳ ಪ್ರಕಟಣೆಯನ್ನು ದಿನಾಂಕ 03.07.2024 ಮಾಡುವುದು, ಅದರಂತೆ, ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆಗೆ ದಿನಾಂಕ: 04.07-2024 ರಂದು ಪೂರ್ವಾಹ್ನ 11.30 ಗಂಟೆಗೆ ಜಿಲ್ಲಾವಾರು ನಡೆಯುವ ಸ್ಥಳ ಆಯ್ಕೆಗೆ ಆಯಾ ಉಪನಿರ್ದೇಶಕರ ಕಛೇರಿಯಿಂದ ಈ ಹಿಂದಿನ ದಿನಾಂಕಗಳಲ್ಲಿ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್‌ನ ಪೂರ್ವ ತಯಾರಿಗೆ ಸಂಬಂಧಪಟ್ಟಂತೆ ಉಲ್ಲೇಖ 10 ರಲ್ಲಿನ ಜ್ಞಾಪನದಲ್ಲಿ ನೀಡಲಾದ ವಿಸ್ತ್ರತ ಸೂಚನೆಗಳಂತೆಯೇ ಅಗತ್ಯ ಕ್ರಮಗಳನ್ನು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದಂತೆ ಕೈಗೊಂಡು ಯಶಸ್ವಿಯಾಗಿ ಪೂರೈಸತಕ್ಕದ್ದು.

ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಎಲ್ಲಾ ಶಿಕ್ಷಕರುಗಳು ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ವಿಷಯವನ್ನು ಉಪನಿರ್ದೇಶಕರ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳ ಹಂಚಿಕೆ ಪಡೆದು ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲಾ ಶಿಕ್ಷಕರುಗಳಿಗೆ ಉಪನಿರ್ದೇಶಕರು ದಿನಾಂಕ 01.07.2024 ರಂದು ಲಿಖಿತವಾಗಿ ಸೂಕ್ತ ಸೂಚನೆಯನ್ನು ಜಾರಿ ಮಾಡಿ ಸ್ವೀಕೃತಿ ಪಡೆದುಕೊಳ್ಳುವುದು.

ಉಲ್ಲೇಖ 14 ರಂತೆ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ ಅರ್ಜಿ ಸಂಖ್ಯೆ 27984-388/2023 ಪ್ರಕರಣದಲ್ಲಿನ ಮಧ್ಯಂತರ ಆದೇಶ ದಿನಾಂಕ 30.01.2024 & 22.01.2024 ಪ್ರಕಾರ ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಸದರಿ ವಿಶೇಷ ಅನುಮತಿ ಅರ್ಜಿಯಲ್ಲಿ ಅಂತಿಮ ತೀರ್ಪಿಗೆ ಒಳಪಟ್ಟಿರುವ ವಿಷಯವನ್ನು ನೇಮಕಾತಿ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರ ಪ್ರತಿ ಅಭ್ಯರ್ಥಿಗೆ ಲಿಖಿತವಾಗಿ ತಿಳಿಸಿ ಸ್ವೀಕೃತಿ ಪಡೆದಿರುವುದನ್ನು ಪುನ‌ರ್ ಉಚ್ಛರಿಸಿದೆ.

ಈ ಹಿಂದೆ ಕೌನ್ಸಿಲಿಂಗ್ ಪುಕ್ರಿಯೆಯಲ್ಲಿ ಭಾಗವಹಿಸಿ ಮತ್ತು ನೇಮಕಾತಿ ಆದೇಶಗಳನ್ನು ನೀಡದಿರುವ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತೀವು ಎಚ್ಚರಿಕೆ ವಹಿಸಲು ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸುತ್ತಾ ಉಪನಿರ್ದೇಶಕರ ಕಛೇರಿಯಲ್ಲಿ ಹಾಜಗಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸುವುದು.

ನೇಮಕಾತಿ ಪ್ರಾಧಿಕಾರಿಯವರಾದ ಆಯಾ ಉಪನಿರ್ದೇಶಕರೇ ಇಡೀ ಕೌನ್ಸಿಲಿಂಗ್ ಪ್ರಕ್ರಿಯೆಗೆ ಮತ್ತು ತತ್ಪರಿಣಾಮಗಳಿಗೆ ಪೂರ್ಣ ಜವಾಬ್ದಾರರಾಗಿದ್ದು, ಅತ್ಯಂತ ಜಾಗರುಕತೆಯಿಂದ ಮತ್ತು ಪಾರದರ್ಶಕವಾಗಿ ಗೊಂದಲಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲು ಮತ್ತೊಮ್ಮೆ ಕಟ್ಟುನಿಟ್ಟಾಗಿ ಸೂಚಿಸಿದೆ.

BIG NEWS : Graduate Primary Teachers for 'C' Zone : Direction for allotment of space through counselling BIG NEWS : ʻಸಿʼ ವಲಯಕ್ಕೆ ಪದವೀಧರ ಪ್ರಾಥಮಿಕ ಶಿಕ್ಷಕರು : ಕೌನ್ಸೆಲಿಂಗ್‌ ಮೂಲಕ ಸ್ಥಳ ಹಂಚಿಕೆಗೆ ನಿರ್ದೇಶನ
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM2 Mins Read

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM1 Min Read

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM1 Min Read
Recent News

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM

‘ನೋವು ನಿವಾರಕ’ಗಳ ಅತಿಯಾದ ಬಳಕೆ ನಿಮ್ಮ ಕಿಡ್ನಿಗೆ ಕಂಟಕ ; ಮೌನವಾಗಿ ಹಾನಿ ಮಾಡುತ್ತೆ! ವೈದ್ಯರ ಎಚ್ಚರಿಕೆ

19/03/2026 10:14 PM

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM
State News
KARNATAKA

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

By kannadanewsnow5720/03/2026 4:45 AM KARNATAKA 2 Mins Read

ಬೆಂಗಳೂರು : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಪ್ರಾಧಿಕಾರದಿಂದ…

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM

BREAKING: ಬೆಂಗಳೂರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

19/03/2026 9:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.