Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ : ವಾಹನ ಸವಾರರ ಪರದಾಟ!

02/04/2026 4:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಜಮೀನುಗಳ ವಿನ್ಯಾಸ ನಕ್ಷೆ’ ಅನುಮೋದನೆಗೆ ಷರತ್ತು ವಿಧಿಸಿ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ರಾಜ್ಯದಲ್ಲಿ `ಜಮೀನುಗಳ ವಿನ್ಯಾಸ ನಕ್ಷೆ’ ಅನುಮೋದನೆಗೆ ಷರತ್ತು ವಿಧಿಸಿ ಸರ್ಕಾರ ಮಹತ್ವದ ಆದೇಶ

By kannadanewsnow5719/02/2026 8:23 AM

ಬೆಂಗಳೂರು : ಮಹಾಯೋಜನೆ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ನಿಯಮಗಳು, 2025 ರನ್ವಯ ವಿನ್ಯಾಸ ಅನುಮೋದನೆ ಪ್ರಸ್ತಾವನೆಗಳಿಗೆ ಯೋಜನಾ ಪ್ರಾಧಿಕಾರಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರಲ್ಲಿ ಕಂದಾಯ ಇಲಾಖೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95 ಕ್ಕೆ ತಿದ್ದುಪಡಿ ತರಲಾಗಿದ್ದು, ಅದರನ್ವಯ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರಡಿ ಯಲ್ಲಿ, ಸರ್ಕಾರದಿಂದ ಅನುಮೋದನೆಗೊಂಡಿರುವ ಮಹಾಯೋಜನೆಗಳ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಸಂಬಂಧಿಸಿದಂತೆ ಮಹಾಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವ ಭೂ ಉಪಯೋಗಗಳಿಗೆ ಅನುಗುಣವಾಗಿ, ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿರುವುದಿಲ್ಲ. ಆದರೆ ಸದರಿ ಕಾಯ್ದೆಯ, ಕಲಂ 95(7) ರಲ್ಲಿ ನಿಗದಿಪಡಿಸಿದ ಶುಲ್ಕವನ್ನು, ಸಂಬಂಧಪಟ್ಟ ಯೋಜನಾ ಪ್ರಾಧಿಕಾರಗಳಿಂದ ಅಗತ್ಯ ಅನುಮತಿಗಳನ್ನು ಪಡೆಯುವ ಸಂಧರ್ಭದಲ್ಲಿ, ಸ್ವಯಂಘೋಷಣೆಯೊಂದಿಗೆ ಸಂಬಂಧಿತ ಯೋಜನಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು ಎಂಬ ಅವಕಾಶವನ್ನು ಕಲ್ಪಿಸಲಾಗಿದೆ.

ಮೇಲ್ಕಂಡ ತಿದ್ದುಪಡಿ ಕಾಯ್ದೆಗೆ ಅನುಗುಣವಾಗಿ ಉಲ್ಲೇಖ (2) ರನ್ವಯ ಕರ್ನಾಟಕ ಭೂಕಂದಾಯ (ತಿದ್ದುಪಡಿ) ನಿಯಮಗಳು, 2025 ಅನ್ನು ರಚಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಹಾಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ/ಗ್ರೇಟರ್ ಬೆಂಗಳೂರು ಪ್ರಾಧಿಕಾರ /ಮೈಸೂರು ಅಭಿವೃದ್ಧಿ ಪ್ರಾಧಿಕಾರ /ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು/ಪುರಸಭೆ ಯೋಜನಾ ಪ್ರಾಧಿಕಾರಗಳು ವಿನ್ಯಾಸ ಅನುಮೋದನೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಈ ಕೆಳಕಂಡಂತೆ ನಿರ್ದೇಶನ ನೀಡಲಾಗಿದೆ.

1. ಅನುಮೋದಿತ ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 17 ರಡಿಯಲ್ಲಿ ಅರ್ಜಿದಾರರು ವಿನ್ಯಾಸ ನಕ್ಷೆ ಅನುಮೋದನೆಗೆ ಕೋರುವ ಹಂತದಲ್ಲಿಯೇ ವಿನ್ಯಾಸ ನಕ್ಷೆ ಅನುಮೋದನೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ಹೆಚ್ಚುವರಿಯಾಗಿ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ನಿಯಮ 106(C) ರಡಿಯಲ್ಲಿ ಸೂಚಿಸಿರುವಂತೆ Form-21B ರಲ್ಲಿ ನಿಗಧಿಪಡಿಸಿದ ಪ್ರಮಾಣ ಪತ್ರ (Affidavit) ವನ್ನು ಸಹ ಕಡ್ಡಾಯವಾಗಿ ಸಂಬಂಧಪಟ್ಟ ಪ್ರಾಧಿಕಾರಗಳು ಅರ್ಜಿದಾರರಿಂದ ಪಡೆಯತಕ್ಕದ್ದು.

2. ವಿನ್ಯಾಸ ನಕ್ಷೆ ಅನುಮೋದನೆಗಾಗಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ನಿಯಮಾನುಸಾರ ಪರಿಶೀಲಿಸಿ, ಮಹಾಯೋಜನೆಯಲ್ಲಿ ನಿಗಧಿಪಡಿಸಲಾಗಿರುವ ಭೂ ಉಪಯೋಗಗಳಿಗೆ ಅನುಗುಣವಾಗಿದ್ದಲ್ಲಿ ಅದರನ್ವಯ ಪ್ರಸ್ತಾವನೆಯನ್ನು ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಮಂಡಿಸಿ, ಅನುಮೋದಿಸಲು ತೀರ್ಮಾನ ಕೈಗೊಳ್ಳುವುದು.

3. ಪ್ರಾಧಿಕಾರದ ಸಾಮಾನ್ಯ ಸಭೆಯ ತೀರ್ಮಾನದ ನಂತರ, ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 18(1)ರಡಿ ಉತ್ತಮತೆ ಶುಲ್ಕ, ಕಲಂ 18(1A) ರಡಿ ಕೆರೆ ಪುನರುಜ್ಜಿವನ ಶುಲ್ಕ ಮತ್ತು ಕಲಂ 18A(1) ರನ್ವಯ ಸಂಗ್ರಹಿಸಲಾಗುವ ಕರ ಹಾಗೂ ಉಪಕರಗಳನ್ನು ಪಾವತಿಸಲು ಅರ್ಜಿದಾರರಿಗೆ ನೀಡುವ ಶುಲ್ಕ ಪಾವತಿ ನೋಟೀಸ್ನಲ್ಲಿ ಹೆಚ್ಚುವರಿಯಾಗಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಂದಾಯ ಕಾಯ್ದೆ ಕಲಂ 95(7) ರನ್ವಯ ಕಂದಾಯ ಇಲಾಖೆಗೆ ಪಾವತಿಸಬೇಕಾಗಿರುವ ನಿಗಧಿತ ಶುಲ್ಕವನ್ನು ಸಹ ನಮೂದಿಸತಕ್ಕದ್ದು.

4. ಕಂದಾಯ ಕಾಯ್ದೆ ಕಲಂ 95(7)ರನ್ವಯ ಕಂದಾಯ ಇಲಾಖೆಗೆ ಪಾವತಿಸಬೇಕಾಗಿರುವ ನಿಗಧಿತ ಶುಲ್ಕದ ಮೊತ್ತವನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಪ್ರತ್ಯೇಕ ಖಾತೆಯಲ್ಲಿ ಸಂಗ್ರಹಿಸಿ ಕಂದಾಯ ಇಲಾಖೆಗೆ ಹಸ್ತಾಂತರಿಸತಕ್ಕದ್ದು.

5. ಅರ್ಜಿದಾರರು ಸಲ್ಲಿಸುವ ಪ್ರಮಾಣ ಪತ್ರ ಮತ್ತು ಶುಲ್ಕ ಪಾವತಿಯ ಮಾಹಿತಿಗಳ ಜೊತೆಗೆ ಪ್ರಾಧಿಕಾರ ಕೈಗೊಂಡ ಕ್ರಮದ ಮಾಹಿತಿಯನ್ನು ಕಂದಾಯ ಇಲಾಖೆಗೆ ತಿಳಿಸತಕ್ಕದ್ದು.

6. ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 17 ರಡಿ ವಿನ್ಯಾಸ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸದೇ, ಕೇವಲ ಭೂ ಪರಿವರ್ತನೆಗೆ ಸೀಮಿತವಾಗಿ ಅರ್ಜಿ ಸಲ್ಲಿಸುವ ಯಾವುದೇ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಸ್ವೀಕರಿಸತಕ್ಕದ್ದಲ್ಲ.

7. ವಿನ್ಯಾಸ ನಕ್ಷೆ ಅನುಮೋದನೆ ಆದೇಶದಲ್ಲಿ ಈ ಕೆಳಕಂಡ ಷರತ್ತನ್ನು ವಿಧಿಸತಕ್ಕದ್ದು.

“ಜಮೀನಿನ ಮಾಲೀಕರು ಸಲ್ಲಿಸುವ ಕಂದಾಯ ದಾಖಲೆಗಳು/ಪ್ರಮಾಣ ಪತ್ರದ ಆಧಾರದ ಮೇಲೆ ವಿನ್ಯಾಸವನ್ನು ಅನುಮೋದಿಸಿದ್ದು, ಕಂದಾಯ ದಾಖಲೆಗಳು/ ಸಲ್ಲಿಸಿರುವ ಪ್ರಮಾಣ ಪತ್ರದ ವಿವರಗಳು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆಗಳಿದ್ದಲ್ಲಿ ಜಮೀನಿನ ಮಾಲೀಕರೆ ಹೊಣೆಗಾರರಾಗಿದ್ದು, ಇದಕ್ಕೆ ಪ್ರಾಧಿಕಾರವು ಹೊಣೆಗಾರರಾಗಿರುವುದಿಲ್ಲ. ಒಂದು ವೇಳೆ ತಪ್ಪು ಮಾಹಿತಿ / ದಾಖಲೆಗಳನ್ನು ನೀಡಿರುವುದು ಕಂಡುಬಂದಲ್ಲಿ ಪ್ರಾಧಿಕಾರದಿಂದ ನೀಡಲಾದ ಅನುಮೋದನೆಯನ್ನು ಯಾವುದೇ ಮುನ್ಸೂಚನೆ ನೀಡದೇ ರದ್ದುಪಡಿಸಲಾಗುತ್ತದೆ.

BIG NEWS: Government issues important order imposing conditions for approval of `land design map' in the state
Share. Facebook Twitter LinkedIn WhatsApp Email

Related Posts

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM1 Min Read

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM1 Min Read

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ : ವಾಹನ ಸವಾರರ ಪರದಾಟ!

02/04/2026 4:43 PM1 Min Read
Recent News

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ : ವಾಹನ ಸವಾರರ ಪರದಾಟ!

02/04/2026 4:43 PM

ಬೆಂಗಳೂರಿನ ಟೆಕ್ಕಿ ದಂಪತಿಗಳ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: AI ನಿಂದ ಉದ್ಯೋಗ ನಷ್ಟ, ಖಿನ್ನತೆ ಕಾರಣವಂತೆ

02/04/2026 4:38 PM
State News
KARNATAKA

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By kannadanewsnow0902/04/2026 4:48 PM KARNATAKA 1 Min Read

ಶಿವಮೊಗ್ಗ : ನಗರದ ಮಾಚೇನಹಳ್ಳಿಯಲ್ಲಿರುವ 8ನೇ ಪಡೆ, ಕೆ.ಎಸ್.ಆರ್.ಪಿ ಘಟಕದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ…

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ : ವಾಹನ ಸವಾರರ ಪರದಾಟ!

02/04/2026 4:43 PM

ಬೆಂಗಳೂರಿನ ಟೆಕ್ಕಿ ದಂಪತಿಗಳ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: AI ನಿಂದ ಉದ್ಯೋಗ ನಷ್ಟ, ಖಿನ್ನತೆ ಕಾರಣವಂತೆ

02/04/2026 4:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.