ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಅರೆಕಾಲಿಕ ಪಿ.ಹೆಚ್‌ಡಿ ವ್ಯಾಸಂಗ ಮಾಡಲು ಅನುಮತಿ ನೀಡಿ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಅರೆಕಾಲಿಕ ಪಿ.ಹೆಚ್‌ಡಿ ವ್ಯಾಸಂಗ ಮಾಡಲು ಅನುಮತಿ ನೀಡುವ ಸಂಬಂಧ ಪ್ರಸ್ತಾವನೆಗಳು ಸ್ವೀಕೃತಗೊಂಡಿದ್ದು, ಅದರಂತೆ ಈ ಕೆಳಕಂಡ ಕಾಲೇಜಿನ ಉಪನ್ಯಾಸಕರುಗಳಿಗೆ ಉಲ್ಲೇಖ-(1) ರ ಸರ್ಕಾರದ ಪತ್ರದಲ್ಲಿನ ನಿಬಂಧನೆಗೊಳಪಡಿಸಿ, ಅರೆಕಾಲಿಕ ಪಿ.ಹೆಚ್.ಡಿ ವ್ಯಾಸಂಗವನ್ನು ಕೈಗೊಳ್ಳಲು ಕೆಳಕಂಡ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.
ಷರತ್ತುಗಳು :
1. ಕಾಲೇಜಿನಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ / ವಿದ್ಯಾರ್ಥಿಗಳ ಬೋಧನಾ ಕಾರ್ಯಕ್ಕೆ ಅಡಚಣೆಯಾಗದಂತೆ ಕ್ರಮವಹಿಸುವುದು.
2. ಸರ್ಕಾರದ/ಇಲಾಖೆಯ ಮೇಲೆ ಯಾವುದೇ ರೀತಿಯ ಆರ್ಥಿಕ ಹೊರೆಯಿಲ್ಲದೆ ಮತ್ತು ವರ್ಗಾವಣೆಯಾದಲ್ಲಿ ಅಥವಾ ವರ್ಗಾವಣೆಯನ್ನು ಪರಿಷ್ಕರಿಸಲು ಹಾಗೂ ದೀರ್ಘಾವಧಿ ರಜೆ ಸಲ್ಲಿಸಲು ಅನ್ವಯಿಸುವುದಿಲ್ಲ.