ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಯುಪಿಐ ಮೂಲಕವೇ ಇನ್ಮುಂದೆ ಆಸ್ತೆ ತೆರಿಗೆ ಪಾವತಿಸಬಹುದು.
ನಿಮ್ಮ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಥವಾ ಬಾಪೂಜಿ ಸೇವಾ ಕೇಂದ್ರದ ವೆಬೈಟ್ ಮೂಲಕ ಪಾವತಿಸಿ. ಅಥವಾ Google Pay, PhonePe, Paytm ಅಥವಾ BHIM ಆ್ಯಪ್ ಮೂಲಕ ತೆರಿಗೆ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ https://bsk.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ.
ಮೊಬೈಲ್ ಆ್ಯಪ್ ಈ ರೀತಿ ಬಳಸಿ
ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಅಪ್ಲಿಕೇಷನ್ ಇದೀಗ ಅಂಡ್ರಾಯ್ಡ್ ಮೊಬೈಲ್’ಗಳಲ್ಲಿ ಲಭ್ಯವಿದೆ.
ನಿಮ್ಮ ಅಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ Bapuji Seva Kendra ಎಂದು ಸರ್ಚ್ ಮಾಡಿ ಮತ್ತು ಅಪ್ಲಿಕೇಷನ್ ಡೌನ್ಹೋಡ್ ಮಾಡಿ
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿ ಲಾಗಿನ್‌ಆಗಿ ಮತ್ತು ಬಾಪೂಜಿ ಸೇವಾ ಕೇಂದ್ರದ ಸೇವೆಗಳನ್ನು ಪಡೆಯಿರಿ
ನಿಮ್ಮ ಆಸ್ತಿ ರಸೀದಿ ಪಡೆಯಲು ಹೀಗೆ ಮಾಡಿ
1. https://bsk.karnataka.gov.in ಗೆ ಭೇಟಿ ನೀಡಿ
2. ಸೇವೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ
3. ಆಸ್ತಿ ಸಂಬಂಧಿತ ವಿಭಾಗದಲ್ಲಿ ರಶೀದಿ ಡೌನ್ಲೋಡ್ ಮಾಡಿ ಆಯ್ಕೆಯನ್ನು ಸೆಲ್ಕಟ್ ಮಾಡಿ
4. ಆಸ್ತಿ ತೆರಿಗೆ ಆಯ್ಕೆ ಮಾಡಿ ಮತ್ತು ನಿಮ್ಮ ಆಸ್ತಿ ಐಡಿ ಸಂಖ್ಯೆ ನಮೂದಿಸಿ
5. ಈಗ ನಿಮ್ಮ ಆಸ್ತಿ ರಶೀದಿಯನ್ನು ಡೌನ್ಲೋಡ್ ಮಾಡಬಹುದು.