ಬೆಂಗಳೂರು : ರಾಜ್ಯದ ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಭಾಗದ ಜನತೆ ಸುಲಭವಾಗಿ ತಮ್ಮ ಜಮೀನಿನ ಇ-ಖಾತೆಯನ್ನು ಪಡೆಯುವಂತೆ ಇ-ಸ್ವತ್ತು ತಂತ್ರಾಂಶ 2.0 ಅನ್ನು ರೂಪಿಸಲಾಗಿದೆ.
ಗ್ರಾಮೀಣ ಭಾಗದ ಆಸ್ತಿ ಮಾಲೀಕರು ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯತಿ ಸೇವೆಗಳ ಶುಲ್ಕ, ಮ್ಯುಟೇಶನ್ ಶುಲ್ಕ ನಿರ್ಧಾರವಾಗುತ್ತದೆ. ಇದು ಗ್ರಾಮೀಣರ ಆಸ್ತಿ ಸಂಬಂಧಿತ ಕೆಲಸಗಳನ್ನು ಸುಗಮಗೊಳಿಸಿದೆ.
ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಖಾತೆ
ಇ-ಸ್ವತ್ತು ತಂತ್ರಾಂಶದ ಪ್ರಯೋಜನಗಳು
ನಿಮ್ಮ ಕೃಷಿಯೇತರ ಜಮೀನಿಗೆ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ.
ಸಾರ್ವಜನಿಕರು ಮನೆಯಲ್ಲಿದ್ದೇ ಆಸ್ತಿ ದಾಖಲೆಗಳನ್ನು ಪಡೆಯಬಹುದು.
ಇ-ಸ್ವತ್ತು ನಮೂನೆಗಳು ನಿಗದಿತ ಕಾಲಾವಧಿಯೊಳಗೆ ಲಭಿಸಲಿವೆ.
ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಯಂಚಾಲಿತ ಅನುಮೋದನೆ ಸಿಗಲಿದೆ.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ
ಇ-ಖಾತಾ ವಿತರಣೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಅವಕಾಶ.
ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಏಕರೂಪದ/ ಮಾದರಿಯ ತೆರಿಗೆ ಹಾಗೂ ಶುಲ್ಕಗಳು ನಿಗದಿ.
ಗ್ರಾಮಪಂಚಾಯಿತಿ ಸೇವೆಗಳ ಶುಲ್ಕ ಹಾಗೂ ಮ್ಯುಟೇಶನ್ ಶುಲ್ಕ ತಂತ್ರಾಂಶದ ಮೂಲಕವೇ ನಿರ್ಧಾರ.
ಇ-ಸ್ವತ್ತು ಪೋರ್ಟ್ ಗೆ ಭೇಟಿ ನೀಡಿ, ಮನೆಯಿಂದಲೇ ಇ-ಖಾತಾ ಪಡೆಯಿರಿ
https://eswathu.karnataka.gov.in/ ಭೇಟಿ ನೀಡಿ. ಇ-ಸ್ವತ್ತು ಸಹಾಯವಾಣಿ – 9483476000








