ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯುನ್ಮಾನ ನಾಗರೀಕ ವಿತರಣಾ ನಿರ್ದೇಶನಾಲಯವು ನಿಗಧಿಪಡಿಸಲಾಗಿರುವ ಶುಲ್ಕವನ್ನು ಪಾವತಿಸಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಸೃಜನೆಗೆ ಅರ್ಜಿ ಸಲ್ಲಿಸಬಹುದು.
ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಜೋಡಣೆಗೊಳಿಸಲಾಗಿದ್ದು, ಇ-ಆಸ್ತಿ ತಂತ್ರಾಂಶದಲ್ಲಿ ಏಪ್ರಿಲ್ 2024 ರ ನಂತರದ ನೋಂದಾಯಿತ ದಾಖಲೆಗಳು ಮತ್ತು ಋಣಭಾರರಾಹಿತ್ಯ ಪ್ರಮಾಣ ಪತ್ರಗಳನ್ನು ಜೋಡಣೆ ಮಾಡಲಾಗಿದ್ದು ವೀಕ್ಷಿಸಬಹುದು. ಸಾರ್ವಜನಿಕರು ಖಾತಾ ಸೃಜನೆಗೆ ಅರ್ಜಿ ಸಲ್ಲಿಸುವಾಗ ದಿನಾಂಕ: 01-04-2024 ರ ನಂತರದ ನೋಂದಾಯಿತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಿಡ್ ಮಾಡುವ ಅವಶ್ಯಕತೆ ಇರುವುದಿಲ್ಲ.
ನೋಂದಾಯಿತ ಪತ್ರ ಮತ್ತು ಋಣಭಾರರಾಹಿತ್ಯ ಪ್ರಮಾಣ ಪತ್ರಗಳ ಸಂಖ್ಯೆಯನ್ನು ದಾಖಲಿಸಿ, ವಿವರಗಳನ್ನು ಪರಿಶೀಲಿಸಿ ಸರಿಯಿರುವ ಬಗ್ಗೆ ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು. ಇ-ಆಸ್ತಿ ತಂತ್ರಾಂಶದಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಇ-ಆಸ್ತಿ ಖಾತಾ ದಾಖಲೆಗಳನ್ನು ಪಡೆಯಲು ಅರ್ಜಿಸಲ್ಲಿಸಬಹುದು.