ಬೆಂಗಳೂರು : 2025-26ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಟಿನ್ ಪ್ಯಾಡ್ಗಳನ್ನು ಹಾಗೂ ಮುಟ್ಟಿನ ಕಪ್ ಗಳನ್ನು ಖರೀದಿಸಲು ಮತ್ತು ವಿತರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಕ್ರಮಸಂಖ್ಯೆ (1)ರಲ್ಲಿ ಓದಲಾದ ಆದೇಶದಲ್ಲಿ 2025-26ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್ಗಳಲ್ಲಿ ನೋಂದಾಯಿಸಲಾದ ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ ವಿತರಿಸಲು 2,35,74,084 ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು (ಒಂದು ಯೂನಿಟ್ = 10 ಪ್ಯಾಡ್ಗಳು) ಪ್ರತಿ ಯೂನಿಟ್ಗೆ ಅಂದಾಜು ರೂ.30.47/- ರಂತೆ ಒಟ್ಟು ರೂ.71.83 (ಎಪ್ಪತ್ತೊಂದು ಕೋಟಿ ಎಂಭತ್ತ ಮೂರು ಲಕ್ಷ ರೂಪಾಯಿಗಳು ಮಾತ್ರ) ಕೋಟಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್ಎಂಎಸ್ಸಿಎಲ್) ಮುಖಾಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ ಹಾಗೂ ನಿಯಮಾವಳಿಗಳನ್ವಯ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ.
ಮೇಲೆ ಕ್ರಮಸಂಖ್ಯೆ (2) ರಲ್ಲಿ ಓದಲಾದ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಇವರ ಕಡತದಲ್ಲಿ 9, 10 ನೇ ತರಗತಿ ಹಾಗೂ 1 & 2ನೇ ಪಿ.ಯು.ಸಿ ಹೆಣ್ಣು ಮಕ್ಕಳಿಗೆ 12 ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಖರೀದಿಸಿ, ಪೂರೈಸುವ ಬದಲು 6 ಯೂನಿಟ್ ಸ್ಯಾನಿಟರಿ ನ್ಯಾಪ್ಟಿನ್ ಗಳನ್ನು ಹಾಗೂ ಉಳಿದ 6 ತಿಂಗಳಿಗೆ 1 ಮುಟ್ಟಿನ ಕಪ್ಗಳನ್ನು ವಿತರಿಸಲು ಉದ್ದೇಶಿಸಲಾಗಿರುವುದರಿಂದ ಸದರಿ 9,44,466 ಫಲಾನುಭವಿಗಳಿಗೆ 6 ತಿಂಗಳಿಗೆ ಅಗತ್ಯವಿದ್ದ ಒಟ್ಟು 56,66,796 ಯೂನಿಟ್ ಸ್ಯಾನಿಟರಿ ನ್ಯಾಪಿನ್ ಪ್ಯಾಡ್ಗಳು ಹಾಗೂ ಅದಕ್ಕೆ ತಗಲುವ ಮೊತ್ತ ರೂ. 1726.67 ಲಕ್ಷಗಳ ಉಳಿತಾಯವಾಗುತ್ತದೆ ಹಾಗೂ 9,44,466 ಫಲಾನುಭವಿಗಳಿಗೆ 6 ತಿಂಗಳಿಗೆ ಒಂದು ಮುಟ್ಟಿನ ಕಪ್ರಂತೆ ಒಟ್ಟು 10,38,912 ಮುಟ್ಟಿನ ಕಪ್ಗಳ ಖರೀದಿಗೆ ತಗಲುವ ಅಂದಾಜು ವೆಚ್ಚ ರೂ. 65.34 ರಂತೆ ಒಟ್ಟು 678.82 ಲಕ್ಷಗಳಾಗಿರುವುದಾಗಿ ತಿಳಿಸುತ್ತಾ, 2025-26ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ 1,79,07,288 ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಅಂದಾಜು ಘಟಕ ಮೊತ್ತ ರೂ. 30.47/- (Unit = 10 ಪ್ಯಾಡ್ ಗಳು) ರಂತೆ ಹಾಗೂ 10,38,912 ಮುಟ್ಟಿನ ಕಪ್ಗಳನ್ನು ಅಂದಾಜು ಘಟಕ ಮೊತ್ತ ರೂ. 65.34/- ರಂತೆ ಒಟ್ಟು ರೂ,61,35,17,575/- ಗಳಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (KSMSCL) ಮುಖಾಂತರ KTPP ಕಾಯ್ದೆಯನುಸಾರ ಟೆಂಡರ್ ಮೂಲಕ ಖರೀದಿಸಿ, ವಿತರಿಸಲು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಲಾಗಿದೆ. ಸದರಿ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ.
ಮುಂದುವರೆದು, ಸರ್ಕಾರದ ಕಡತ ಸಂಖ್ಯೆ: e-1822636 ರಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಂದ ಸ್ವೀಕೃತವಾದ ಪ್ರಸ್ತಾವನೆಯಲ್ಲಿ ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿತರಿಸಲು ಆಗಸ್ಟ್ 2025 ರಿಂದ ದಾಸ್ತಾನು ಕೊರತೆಯಿದ್ದರಿಂದ KSMSCL ನಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರಬರಾಜು ಪ್ರಾರಂಭವಾಗುವವರೆವಿಗೂ 6 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಹೆಣ್ಣು ಮಕ್ಕಳು ಒಟ್ಟು 19,64,507 ಹದಿಹರೆಯದ ಹೆಣ್ಣು ಮಕ್ಕಳಿಗೆ 3 ತಿಂಗಳ ಅವಧಿಗೆ ಸ್ಯಾನಿಟರಿ ನ್ಯಾಪ್ಟಿನ್ ಪ್ಯಾಡ್ಗಳನ್ನು ರೂ.1011.47 ಕೋಟಿಗಳ ಅನುದಾನದಲ್ಲಿ ಜಿಲ್ಲಾ ಹಂತದಲ್ಲಿ ಸ್ಥಳೀಯ ಖರೀದಿಯ ಮೂಲಕ ಖರೀದಿಸಿ, ವಿತರಿಸಲು ಅನುಮತಿ ನೀಡುವಂತೆ ಕೋರಲಾಗಿತ್ತು.
ಮೇಲೆ ಕ್ರಮಸಂಖ್ಯೆ (3) ರಲ್ಲಿ ಓದಲಾದ ಆದೇಶದಲ್ಲಿ ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿತರಿಸಲು ಆಗಸ್ಟ್ 2025 ರಿಂದ ದಾಸ್ತಾನು ಕೊರತೆಯಿದ್ದರಿಂದ KSMSCL ನಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರಬರಾಜು ಪ್ರಾರಂಭವಾಗುವವರೆವಿಗೂ 6 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಹೆಣ್ಣು ಮಕ್ಕಳು ಒಟ್ಟು 19,64,507 ಹದಿಹರೆಯದ ಹೆಣ್ಣು ಮಕ್ಕಳಿಗೆ 3 ತಿಂಗಳ ಅವಧಿಗೆ ಸ್ಯಾನಿಟರಿ ನ್ಯಾಪ್ಟಿನ್ ಪ್ಯಾಡ್ಗಳನ್ನು ರೂ.10.00 ಕೋಟಿಯಲ್ಲಿ ಜಿಲ್ಲಾ ಹಂತದಲ್ಲಿ ಸ್ಥಳೀಯ ಖರೀದಿಯ ಕಾಯ್ದೆ ಮತ್ತು ನಿಯಮಗಳನ್ನು ಅನುಸರಿಸಿ న్యానిటరీ న్యాప్మినా ಮೂಲಕ KTTP ಪ್ಯಾಡ್ಗಳನ್ನು ಖರೀದಿಸಿ, ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್ಗಳಲ್ಲಿ ನೋಂದಾಯಿಸಲಾದ ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ ವಿತರಿಸಲು 2,35,74,084 ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು (ಒಂದು ಯೂನಿಟ್ = 10 ಪ್ಯಾಡ್ಗಳು) ಪ್ರತಿ ಯೂನಿಟ್ಗೆ ಅಂದಾಜು ರೂ.30.47/- ರಂತೆ ಒಟ್ಟು ರೂ.71.83 (ಎಪ್ಪತ್ತೊಂದು ಕೋಟಿ ಎಂಭತ್ತ ಮೂರು ಲಕ್ಷ ರೂಪಾಯಿಗಳು ಮಾತ್ರ) ಕೋಟಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್ಎಂಎಸ್ಸಿಎಲ್) ಮುಖಾಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ ಹಾಗೂ ನಿಯಮಾವಳಿಗಳನ್ನಯ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾದ ಆದೇಶ ಸಂಖ್ಯೆ: ಆಕುಕ 138 ಎಫ್.ಪಿ.ಇ 2025, ದಿನಾಂಕ:09.09.2025 ನ್ನು ಮಾರ್ಪಡಿಸಿ, 2025-26 ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್ಗಳಲ್ಲಿ ನೋಂದಾಯಿಸಲಾದ 6 ರಿಂದ 8 ನೇ ತರಗತಿಯ ಹೆಣ್ಣುಮಕ್ಕಳಿಗೆ 9 ತಿಂಗಳ ಅವಧಿಗೆ ಸ್ಯಾನಿಟರಿ ಪ್ಯಾಡ್ಗಳನ್ನು (1 ಯೂನಿಟ್ = 10 ಪ್ಯಾಡ್ಗಳ ಅಂದಾಜು ಮೊತ್ತ ರೂ.30.47) ಹಾಗೂ 9, 10ನೇ ತರಗತಿ ಹಾಗೂ 1 ಮತ್ತು 2ನೇ ಪದವಿಪೂರ್ವ ಹೆಣ್ಣು ಮಕ್ಕಳಿಗೆ 3 ತಿಂಗಳ ಅವಧಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಹಾಗೂ ಉಳಿದ ಅವಧಿಗೆ 1 ಮುಟ್ಟಿನ ಕಪ್ ( 5 .65.34) 3 2 10,38,912 .51,35,17,575/-ವೆಚ್ಚದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್ಎಂಎಸ್ಸಿಎಲ್) ಮುಖಾಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ ಹಾಗೂ ನಿಯಮಾವಳಿಗಳನ್ವಯ ಖರೀದಿಸಿ ವಿತರಿಸಲು ಸಚಿವ ಸಂಪುಟದ ಅನುಮೋದನೆಯನ್ನು ಬಾಕಿಯಿಟ್ಟು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಷರತ್ತು:-ಅನುದಾನದ ಪೂರೈಕೆಗೆ ಸಂಬಂಧಿಸಿದಂತೆ, ಟೆಂಡರ್ ಪ್ರಕ್ರಿಯೆಯಲ್ಲಿ ಸೇವಾದಾರರಿಂದ ಸಂಗ್ರಹಿಸಲಾದ ಬಿಲ್ಲುಗಳನ್ನು ಆಧರಿಸಿ, ಸೂಕ್ತವಾದ ಹಣಕಾಸಿನ ರಕ್ಷಣೆಯನ್ನು ಒದಗಿಸಲಾಗುವುದು.









