ಬೆಂಗಳೂರು : ಈ ಸಲದ ಆರ್ಥಿಕ ವರ್ಷದ ಅಂತ್ಯದಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಇ-ಆಫೀಸ್ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಜ್ಯ ಸರ್ಕಾರ ರೈತರ ಪರವಾಗಿದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರೈತರ ಹಿತಾಸಕ್ತಿಗಾಗಿ ಹಾಗೂ ರೈತರು ಸರ್ಕಾರಿ ಕಛೇರಿಗೆ ಅಲೆದಾಡುವ ಸಮಯ ಉಳಿಸುವುದಕ್ಕಾಗಿ ಇ-ಆಡಳಿತ ವ್ಯವಸ್ಥೆಯನ್ನು ಮತ್ತಷ್ಟೂ ಚುರುಕುಗೊಳಿಸಿರುವುದು ಅನ್ನದಾತರಿಗೆ ಅನುಕೂಲವಾಗಲಿದೆ. ಇ-ಆಡಳಿತ ಇಲಾಖೆಯು ರಾಜ್ಯ ದತ್ತಾಂಶ ಕೇಂದ್ರ, ರಾಜ್ಯವ್ಯಾಪಿ ವಲಯ ಜಾಲ, ನೇರ ನಗದು ವರ್ಗಾವಣೆ ವೇದಿಕೆ, ಕುಟುಂಬ, ರೈತರ ದತ್ತಾಂಶ (FRUITS), ಸೇವಾ ಸಿಂಧು, ಸಕಾಲ, ಕರ್ನಾಟಕ ಒನ್, ಗ್ರಾಮ ಒನ್ ಮುಂತಾದ ನಿರ್ಣಾಯಕ ಸೇವೆಗಳನ್ನು ನಿರ್ವಹಿಸುತ್ತಿವೆ. ಸರ್ಕಾರ ಇಂತಹ ಪ್ರಮುಖ ಸಾಧನೆಗಳನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಬರುವಂತೆ ಈ ವರ್ಷದಿಂದ ಜಾರಿ ಮಾಡಿದೆ ಎಂದರು.
ಸರ್ಕಾರ ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲಾ ತಾಲ್ಲೂಕು ಮಟ್ಟದ ಕಚೇರಿಗಳು, 395 ನಾಡಕಚೇರಿಗಳು ಮತ್ತು 427 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲಾಗಿದೆ. ಈ ಸಲದ ಆರ್ಥಿಕ ವರ್ಷದ ಅಂತ್ಯದಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಈ ವ್ಯವಸ್ಥೆಯನ್ನು ಸರ್ಕಾರ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಜೊತೆಗೆ ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ಇಲಾಖೆಗಳಿಗೆ ಸಂಭಂದಿಸಿದಂತೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಜಾರಿ ಮಾಡಿದೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಸಂಬಂಧಿಸಿದ ಎಲ್ಲಾ ಟೆಂಡರ್ ಸಂಬಂಧಿತ ಚಟುವಟಿಕೆಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಹಲವು ಯೋಜನೆ ಜಾರಿ ಮಾಡು ಮೂಲಕ ನಾಡಿನ ರೈತರ ಹಿತಾಸಕ್ತಿ ಕಾಪಾಡುತ್ತಿದ್ದಾರೆ ಎಂದರು.