ಬೆಂಗಳೂರು : 80 ವರ್ಷ ಪೂರೈಸಿದ ಮತ್ತು ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡುವ ವಿಧಾನವನ್ನು ಸರಳೀಕೃತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ (1) ರ ಆದೇಶದಲ್ಲಿ, ದಿನಾಂಕ:01.07.1993 ಕ್ಕಿಂತ ಮುಂಚಿತವಾಗಿ ನಿವೃತ್ತರಾದವರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ : ಪ್ರಕರಣಗಳಲ್ಲಿ 80 ರಿಂದ 85, 85 ರಿಂದ 90 ಮತ್ತು 95 ವರ್ಷ ವಯಸ್ಸು ಮೀರಿದವರಿಗೆ ದಿನಾಂಕ 01.04.2006 ರಿಂದ ಜಾರಿಗೆ ಬರುವಂತೆ ಕ್ರಮವಾಗಿ ಅವರ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 20, ಶೇಕಡ 30 ಮತ್ತು ಶೇಕಡ 50 ರಷ್ಟು ಪಿಂಚಣಿಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
2. ಮೇಲೆ ಓದಲಾದ (2)ರ ಅಧಿಕೃತ ಜ್ಞಾಪನದಲ್ಲಿ, ಪಿಂಚಣಿದಾರ/ಕುಟುಂಬ ಪಿಂಚಣಿದಾರನ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿ.ಪಿ.ಓ.) ದಲ್ಲಿ ಲಭ್ಯವಿಲ್ಲದಿದ್ದಲ್ಲಿ ಪಿಂಚಣಿ ಪಾವತಿ ಪ್ರಾಧೀಕಾರವು ಈ ಬಗ್ಗೆ ಸಂಬಂಧಪಟ್ಟ ಪಿಂಚಣಿದಾರ/ಕುಟುಂಬ ಪಿಂಚಣಿದಾರರಿಗೆ ತಿಳಿಸಿ, ಅವರಿಂದ ಈ ಕೆಳಕಂಡ ಯಾವುದಾದರು’ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿ/ಎಂ.ಎಲ್.ಎ. ರವರಿಂದ ದೃಢೀಕರಿಸಿಕೊಂಡು ಪಡೆಯತಕ್ಕದ್ದು ಎಂದು ತಿಳಿಸಿದ್ದು, ನಂತರ ಸಂಬಂಧಿಸಿದ ದಾಖಲೆಯನ್ನು ಮಹಾಲೇಖಪಾಲರ ಕಛೇರಿಗೆ ಕಳುಹಿಸಿ, ಅವರಿಂದ ಔಪಚಾರಿಕ ಪ್ರಾಧೀಕರಣವನ್ನು ಪಡೆದು, ದಿ:13.10.2010ರ ಆದೇಶದ ಪ್ರಕಾರ ಹೆಚ್ಚುವರಿ ಪಿಂಚಣಿ/ಕುಟುಂಬ ಪಿಂಚಣಿಯನ್ನು ಪಾವತಿಸಲು ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಲಾಗಿರುತ್ತದೆ:-
1. ಎಸ್.ಎಸ್.ಎಲ್.ಸಿ. ಸರ್ಟಿಫಿಕೇಟ್ (ಹುಟ್ಟಿದ ದಿನಾಂಕ ಒಳಗೊಂಡಂತೆ)
2. ಪ್ಯಾನ್ ಕಾರ್ಡ್
3. ಪಾಸ್ ಪೋರ್ಟ್
4. ಡ್ರೈವಿಂಗ್ ಲೈಸೆನ್ಸ್ (ಹುಟ್ಟಿದ ದಿನಾಂಕ ಒಳಗೊಂಡಿದ್ದರೆ)
5. ಎಲೆಕ್ಷನ್ ಐ.ಡಿ.ಕಾರ್ಡ್
3. ಮೇಲೆ ಓದಲಾದ (3)ರ ಸರ್ಕಾರದ ಆದೇಶದಲ್ಲಿ, 80 ವರ್ಷ ಪೂರೈಸಿದ ಹಾಗೂ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿದ ಸರ್ಕಾರಿ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ದಿನಾಂಕ:01.1.2019ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ನಿವೃತ್ತಿ ವೇತನ /ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡಿ ಆದೇಶಿಸಲಾಗಿದೆ ಹಾಗೂ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು 80 ವರ್ಷ ಪೂರೈಸಿದ ಅಥವಾ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿದಾಗ ಹೆಚ್ಚುವರಿ ಪಿಂಚಣಿ ಮೊತ್ತವನ್ನು ಸದರಿ ಆದೇಶದಲ್ಲಿ ಸೂಚಿಸಿರುವ ದರದಂತೆ ಪಾವತಿಸಲು ಆದೇಶಿಸಲಾಗಿರುತ್ತದೆ.
4. ಪ್ರಸ್ತುತ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿ.ಪಿ.ಓ.) ದಲ್ಲಿ ಲಭ್ಯವಿಲ್ಲದಿರುವ ಸಂದರ್ಭದಲ್ಲಿ, ಕುಟುಂಬ ಪಿಂಚಣಿದಾರರರಿಗೆ ಹೆಚ್ಚುವರಿ ಪಿಂಚಣಿ ಮಂಜೂರು ಮಾಡಲು ಇರುವ ವಿಧಾನವನ್ನು ಸರಳೀಕರಣಗೊಳಿಸುವ ಕುರಿತು ಸ್ವೀಕೃತವಾಗುತ್ತಿರುವ ಮನವಿಗಳನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
80 ವರ್ಷ ಪೂರೈಸಿರುವ ಹಾಗೂ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಲು ಪಿಂಚಣಿ ಪಾವತಿ ಆದೇಶ (ಪಿಪಿಒ) ದಲ್ಲಿ ಜನ್ಮ ದಿನಾಂಕವು ಲಭ್ಯವಿಲ್ಲದಿದ್ದಲ್ಲಿ ಈ ಕೆಳಕಂಡಂತೆ ಕ್ರಮಕೈಗೊಳ್ಳಲು ಆದೇಶಿಸಿದೆ:
1. ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್/262/2024, ದಿನಾಂಕ:28.08.2024 ರ ಕಂಡಿಕೆ 11.1 ರಲ್ಲಿ ಸೂಚಿಸಿರುವಂತೆ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ದಿನಾಂಕ:11.01.2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯನ ಪರಿಷ್ಕೃತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತಕ್ಕದ್ದು.
2. ಕುಟುಂಬ ಪಿಂಚಣಿಯನ್ನು ಮಾತ್ರ ಪಡೆಯುತ್ತಿರುವ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ(ಪಿ.ಪಿ.ಓ.)ದಲ್ಲಿ ಲಭ್ಯವಿಲ್ಲದಿದ್ದಲ್ಲಿ, ಅವರು ಕುಟುಂಬ ಪಿಂಚಣಿ ಪಡೆಯುತ್ತಿರುವ ಸಾರ್ವಜನಿಕ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿರ್ವಹಿಸಿರುವ KYC ಯಲ್ಲಿ, ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಆಇ(ವಿ) 27 ಪಿಇಎನ್ 2007. ದಿನಾಂಕ:06.01.2011 ರಲ್ಲಿ ಸೂಚಿಸಿರುವ ದಾಖಲೆಗಳು ಲಭ್ಯವಿದ್ದಲ್ಲಿ, ಸದರಿ ದಾಖಲೆಗಳಲ್ಲಿ ಲಭ್ಯವಿರುವ ಜನ್ಮ ದಿನಾಂಕವನ್ನು ಪರಿಗಣಿಸಿ, ಸದರಿ ಮಾಹಿತಿಯನ್ನು ಖಜಾನೆಗಳಿಗೆ ನೀಡಲು ಬ್ಯಾಂಕುಗಳು ಕ್ರಮ ಕೈಗೊಳ್ಳುವುದು. ಖಜಾನೆಗಳು, ಖಜಾನೆ-2ರ ಪಿಂಚಣಿ ಡೇಟಾಬೇಸ್‌ನಲ್ಲಿ ಹಾಗೂ ಖಜಾನೆಗಳ ಕೆ.ಟಿ.ಸಿ. ವಹಿ-45 ರಲ್ಲಿ ವಿವರಗಳನ್ನು ದಾಖಲಿಸಿ ಮತ್ತು ದೃಢೀಕರಿಸಿ, ಮಾಹಿತಿಯನ್ನು ಮಹಾಲೇಖಪಾಲರಿಗೆ ನೀಡುವುದು.
3. ಮೇಲ್ಕಂಡ (2)ರ ಅವಕಾಶ ಅನ್ವಯವಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಖಜಾನೆಗಳು ದಿನಾಂಕ:06.01.2011ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸೂಚಿಸಿರುವ ವಿಧಾನವನ್ನು ಅನುಸರಿಸುವಂತೆ ತಿಳಿಸಿದೆ.