Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಟೆಲಿಕಾಂ ದೈತ್ಯ `ಒಡಿಡೋ’ ಮೇಲೆ ಸೈಬರ್ ದಾಳಿ : ಲಕ್ಷಾಂತರ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು !

13/02/2026 6:18 AM

BIG NEWS : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `IPL’ ಪಂದ್ಯಾವಳಿ ನಡೆಸಲು ಸರ್ಕಾರ ಅಸ್ತು !

13/02/2026 6:11 AM

BIG NEWS: ರಾಜ್ಯ ಸರ್ಕಾರ ‘ಗ್ರಾಮ ಪಂಚಾಯ್ತಿ’ಗಳಿಗೆ ನೇಮಿಸಿರುವ ‘ಆಡಳಿತಾಧಿಕಾರಿ ಕರ್ತವ್ಯ’ಗಳೇನು? ಇಲ್ಲಿದೆ ಮಾಹಿತಿ

13/02/2026 6:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `IPL’ ಪಂದ್ಯಾವಳಿ ನಡೆಸಲು ಸರ್ಕಾರ ಅಸ್ತು !
KARNATAKA

BIG NEWS : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `IPL’ ಪಂದ್ಯಾವಳಿ ನಡೆಸಲು ಸರ್ಕಾರ ಅಸ್ತು !

By kannadanewsnow5713/02/2026 6:11 AM

ಬೆಂಗಳೂರು: ಮಾರ್ಚ್.6ರಂದು ಕರ್ನಾಟಕ ಬಜೆಟ್ ಅನ್ನು ದಾಖಲೆಯ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಲು ಡೇಟ್ ನಿಗದಿಯಾಗಿದೆ. ಇದಲ್ಲದೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿಸೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇನ್ನೂ ಬೆಂಗಳೂರಿನ ಹೃದಯ ಭಾಗದಲ್ಲಿರುವಂತ ರೇಸ್ ಕೋರ್ಸ್ ಸ್ಥಳಾಂತರಕ್ಕೂ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ ಎಲ್ಲಾ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ರಾಜ್ಯ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಸಂಪುಟ ಸಭೆಯ ನಿರ್ಧಾರಗಳನ್ನು ಮಾಹಿತಿ ನೀಡಿದರು. ಹೆಚ್ ಪಿವಿ ಲಸಿಕೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ. 14 ವರ್ಷ ಹೆಣ್ಣುಮಕ್ಕಳಿಗೆ ನೀಡುವ ಲಸಿಕೆ ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲಾಗುತ್ತದೆ. ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಜೀನ್ ಬ್ಯಾಂಕ್ ಅನ್ನು 11.12 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಪ್ರತಿ ಬೆಳೆಗೆ ಒಂದು ಜೀನ್ ಇರುತ್ತದೆ. ದೇಶಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.

ದ್ರಾಕ್ಷಾರಸ ಶಿತಲೀಕರಣ ಘಟಕದ ನಿರ್ಮಾಣ. ತಿಕೋಟಾದಲ್ಲಿ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಒಟ್ಟು 12.40 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬಳ್ಳಾರಿ ವಿಮ್ಸ್ ಆವರಣದಲ್ಲಿ 200 ಬೆಡ್ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 330.50 ಕೋಟಿ ಮೊತ್ತದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಶಿಷ್ಟಾಚಾರ ನಿಯಮಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಶಾಸಕರನ್ನ ಅಧ್ಯಕ್ಷರನ್ನಾಗಿ ಮಾಡುವ ನಿಯಮ ಇದಾಗಿದೆ. ನ್ಯಾಯಾಲಯಗಳ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಇದಾಗಿದೆ. ಕಲ್ಲುಗಣಿ ಗುತ್ತಿಗೆ ಒತ್ತುವರಿಗೆ ದಂಡಕ್ಕೆ ನಿರ್ಧರಿಸಲಾಗಿದೆ. ಒನ್ ಟೈಮ್ ಸೆಟಲ್ ಮೆಂಟ್ ಗೆ ಅವಕಾಶ ನೀಡಲಾಗುತ್ತಿದೆ. ಗಣಿ ನಿಯಮಗಳಿಗೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ರಾಯಲ್ಟಿ ಪೇ ಮಾಡದೆ ಅಕ್ರಮ ಸಾಗಾಟ. ಇಲ್ಲವೇ ಒತ್ತುವರಿ ಮಾಡಿಕೊಂಡವರಿಗೆ ಪೆನಾಲ್ಟಿ ವಿಧಿಸಲಾಗುತ್ತದೆ. ಒಟಿಎಸ್ ಮೂಲಕ ಸೆಟಲ್ ಮೆಂಟ್ ಮಾಡಬೇಕು. ಒಂದೇ ಬಾರಿಗೆ ದಂಡ ಕಟ್ಟಿದರೆ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ ಎಂದರು.

ಜಿಬಿಎ ವ್ಯಾಪ್ತಿಯ 4 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎಬಿಎಆರ್ ಕೆ ಯೋಜನೆಯಡಿ 2ಎ ಚಿಕಿತ್ಸಾ ವಿಧಾನಕ್ಕೆ ವಿನಾಯ್ತು ನೀಡಲು ನಿರ್ಧರಿಸಲಾಗಿದೆ. ಸೇಂಟ್ ಜಾನ್ಸ್, ರಾಮಯ್ಯ, ಕಿಮ್ಸ್,ಅಂಬೇಡ್ಕರ್ ಕಾಲೇಜುಗಳಿಗೆ ಅನ್ವಯಿಸಲಿದೆ ಎಂದು ತಿಳಿಸಿದರು.

ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಮಾರ್ಚ್.6ರಿಂದ ಬಜೆಟ್ ಅಧಿವೇಶ ನಡೆಯಲಿದೆ. ಮಾರ್ಚ್.6ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಮಾರ್ಚ್.27ರವರೆಗೆ ಬಜೆಟ್ ಅಧಿವೇಶ ನಡೆಯಲಿದೆ. 14 ದಿನಗಳ ಕಾಲ ಬಜೆಟ್ ಅಧಿವೇಶ ನಡೆಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಚನ್ನರಾಯಪಟ್ಟಣ ಭೂಮಿ ಗೊಂದಲ ವಿಚಾರವಾಗಿ ಮಾತನಾಡಿದಂತ ಅವರು, ಚನ್ನರಾಯಪಟ್ಟಣದ ರೈತರ ಭೂಮಿ ಶಾಶ್ವತ ಎಂದು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಹಸಿರುವಲಯವಾಗಿಯೇ ಮುಂದುವರಿಯಲಿದೆ. ಈ ಹಿಂದೆ ಕೆಐಎಡಿಬಿ ಭೂಸ್ವಾಧೀನ ಮಾಡಿತ್ತು. ನಂತರ ರೈತರು ಪ್ರತಿಭಟನೆ ನಡೆಸಿದ್ದರು ಎಂದರು.

ಕೊನೆಗೂ ಬೆಂಗಳೂರಿನ ರೇಸ್ ಕೋರ್ಸ್ ಶಿಫ್ಟ್ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನಿಂದ ಕುಣಿಗಲ್ ಗೆ ರೇಸ್ ಕೋರ್ಸ್ ಶಿಫ್ಟ್ ಆಗಲಿದೆ. ಕುಣಿಗಲ್ ನ ಸ್ಟಡ್ ಫಾರ್ಮ್ ಗೆ ಶಿಫ್ಟ್ ಮಾಡಲಾಗುತ್ತಿದೆ. ಶಿಫ್ಟ್ ನಲ್ಲಿ ಉದ್ಯಾನ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಲೀಸ್ ಅವಧಿ ಮುಕ್ತಾಯ,ಬಾಡಿಗೆಯೂ ಪರಿಷ್ಕರಣೆ ಆಗಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ರೇಸ್ ಕೋರ್ಸ್ ಸ್ಥಳಾಂತರ ಮಾಡಲಾಗುತ್ತಿದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆ. 1 ರಿಂದ  10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು 104 ಕೋಟಿ ವೆಚ್ಚದಲ್ಲಿ ಖರೀದಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ವಿದ್ಯಾವಿಕಾಸ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ವಿತರಣೆಗೆ ನಿರ್ಧರಿಸಲಾಗಿದೆ. 4 ಸಾರಿಗೆ ನಿಗಮಗಳಿಂದ ಮಹಿಳೆಯರಿಗೆ ವಿತರಣೆ ಮಾಡಲಿದೆ. ಸ್ಮಾರ್ಟ್ ಕಾರ್ಡ್ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ಆಡಿಸಲು ಅನುಮತಿಸಲು ಒಪ್ಪಿಗೆ ನೀಡಿದೆ. ಆರ್ ಸಿಬಿ ಪಂದ್ಯಗಳನ್ನ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ. ಕೆಲವು ಷರತ್ತುಗಳು ವಿಧಿಸಿ ಅವಕಾಶ ನೀಡಲಾಗಿದೆ. ಷರತ್ತುಗಳ ವಿಧಿಸುವ ಅವಕಾಶ ಗೃಹ ಇಲಾಖೆಗೆ ನೀಡಲಾಗಿದೆ. ನಾಳೆ, ನಾಡಿದ್ದು ಗೃಹ ಇಲಾಖೆಯಿಂದ ಆದೇಶ ಹೊರಬೀಳಲಿದೆ. ನ್ಯಾ.ಕುನ್ಹಾ ಕಮಿಟಿ ಗಮನದಲ್ಲಿರಿಸಿಕೊಂಡು ಆದೇಶ ಮಾಡಲಿದೆ. ಗೇಟ್ ಗಳ ಅಗಲಕ್ಕೆ ಶಿಫಾರಸು ಮಾಡಿತ್ತು. ಉದ್ಘಾಟನಾ ಪಂದ್ಯಗಳಿಗೆ ಅವರು ಆಸಕ್ತರಿದ್ದಾರೆ ಎಂದರು.

ಎಸ್ ಐಆರ್ ಬಗ್ಗೆ ಗಂಭೀರ ಚರ್ಚಯಾಗಿದೆ. ಕಾನೂನಾತ್ಮಕ ವಿಚಾರಗಳ‌ ಚರ್ಚೆಯಾಗಿದೆ. ಆಳವಾದ ಅಧ್ಯಯನದ ಅಗತ್ಯವಿದೆ. ವರದಿ ನೀಡುವಂತೆ ಕಾನೂನು ಇಲಾಖೆಗೆ ಸೂಚಿಸಿದೆ. ನಮ್ಮ ಇಲಾಖೆ ಅಧ್ಯಯನ ಮಾಡಿ ವರದಿ ಸಲ್ಲಿಸಲಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

 

BIG NEWS: Good news for `RCB' fans: Government agrees to hold `IPL' tournament in Bengaluru!
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯ ಸರ್ಕಾರ ‘ಗ್ರಾಮ ಪಂಚಾಯ್ತಿ’ಗಳಿಗೆ ನೇಮಿಸಿರುವ ‘ಆಡಳಿತಾಧಿಕಾರಿ ಕರ್ತವ್ಯ’ಗಳೇನು? ಇಲ್ಲಿದೆ ಮಾಹಿತಿ

13/02/2026 6:10 AM2 Mins Read

BIG NEWS : ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್: ಮಾ.6ರಂದು ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡನೆ | Karnataka Budget 2026

13/02/2026 5:58 AM3 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ಭೂ ಆಧಾರ್’ ಯೋಜನೆಯಡಿ ಪಹಣಿ ಜತೆಗೆ ಸ್ಕೆಚ್, ಮ್ಯುಟೇಷನ್ ಸೇರಿ ಈ ಎಲ್ಲಾ ದಾಖಲೆಗಳು ಲಭ್ಯ.!

13/02/2026 5:52 AM4 Mins Read
Recent News

BREAKING : ಟೆಲಿಕಾಂ ದೈತ್ಯ `ಒಡಿಡೋ’ ಮೇಲೆ ಸೈಬರ್ ದಾಳಿ : ಲಕ್ಷಾಂತರ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು !

13/02/2026 6:18 AM

BIG NEWS : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `IPL’ ಪಂದ್ಯಾವಳಿ ನಡೆಸಲು ಸರ್ಕಾರ ಅಸ್ತು !

13/02/2026 6:11 AM

BIG NEWS: ರಾಜ್ಯ ಸರ್ಕಾರ ‘ಗ್ರಾಮ ಪಂಚಾಯ್ತಿ’ಗಳಿಗೆ ನೇಮಿಸಿರುವ ‘ಆಡಳಿತಾಧಿಕಾರಿ ಕರ್ತವ್ಯ’ಗಳೇನು? ಇಲ್ಲಿದೆ ಮಾಹಿತಿ

13/02/2026 6:10 AM

ಬ್ಯಾಂಕ್‌ ಗಳು ಗ್ರಾಹಕರ ಒಪ್ಪಿಗೆ ಇಲ್ಲದೇ ವಿಮೆ -ಕ್ರೆಡಿಟ್ ಕಾರ್ಡ್‌ಗಳನ್ನು ಮಾರಾಟ ಮಾಡುವಂತಿಲ್ಲ : `RBI’ ಹೊಸ ರೂಲ್ಸ್

13/02/2026 6:09 AM
State News
KARNATAKA

BIG NEWS : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `IPL’ ಪಂದ್ಯಾವಳಿ ನಡೆಸಲು ಸರ್ಕಾರ ಅಸ್ತು !

By kannadanewsnow5713/02/2026 6:11 AM KARNATAKA 3 Mins Read

ಬೆಂಗಳೂರು: ಮಾರ್ಚ್.6ರಂದು ಕರ್ನಾಟಕ ಬಜೆಟ್ ಅನ್ನು ದಾಖಲೆಯ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಲು ಡೇಟ್ ನಿಗದಿಯಾಗಿದೆ. ಇದಲ್ಲದೇ ಬೆಂಗಳೂರಿನ ಚಿನ್ನಸ್ವಾಮಿ…

BIG NEWS: ರಾಜ್ಯ ಸರ್ಕಾರ ‘ಗ್ರಾಮ ಪಂಚಾಯ್ತಿ’ಗಳಿಗೆ ನೇಮಿಸಿರುವ ‘ಆಡಳಿತಾಧಿಕಾರಿ ಕರ್ತವ್ಯ’ಗಳೇನು? ಇಲ್ಲಿದೆ ಮಾಹಿತಿ

13/02/2026 6:10 AM

BIG NEWS : ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್: ಮಾ.6ರಂದು ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡನೆ | Karnataka Budget 2026

13/02/2026 5:58 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ಭೂ ಆಧಾರ್’ ಯೋಜನೆಯಡಿ ಪಹಣಿ ಜತೆಗೆ ಸ್ಕೆಚ್, ಮ್ಯುಟೇಷನ್ ಸೇರಿ ಈ ಎಲ್ಲಾ ದಾಖಲೆಗಳು ಲಭ್ಯ.!

13/02/2026 5:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.