ಬೆಂಗಳೂರು: ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಹಕ್ಕುಪತ್ರ ನೋಂದಣಿ ಸಲುವಾಗಿ ರಜೆ ದಿನವೂ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸೇವೆ ನಿರ್ವಹಿಸಲಿವೆ.
ಹೌದು, ಏಪ್ರಿಲ್ 30 ರ ಇಂದು ಬಸವಜಯಂತಿ, ಮೇ 1(ಕಾರ್ಮಿಕ ದಿನ) ಮತ್ತು ಮೇ 4 (ಭಾನುವಾರ) ರಜೆ ದಿನವೂ ಕೆಲಸ ಮಾಡುವಂತೆ ಹಕ್ಕುಪತ್ರ ನೋಂದಣಿಗೆ ಸಮಯ ವಿಸ್ತರಣೆ ಅವಶ್ಯವಿದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿ, ಉಪ ನೋಂದಣಾಧಿಕಾರಿಗಳ ಕೋರಿಕೆ ಅನುಗುಣವಾಗಿ ಅವಕಾಶ ಮಾಡಿಕೊಡಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ.
ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಲುವಾಗಿ ದಸ್ತಾವೇಜುಗಳನ್ನು ನೋಂದಣಿ ಮಾಡುವುದು ಅತೀ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಮತ್ತು ಸುಗಮವಾಗಿ ಕಚೇರಿ ಕೆಲಸ ನಡೆಸುವ ಸಲುವಾಗಿ ರಜೆ ದಿನಗಳಲ್ಲಿಯೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯುವಂತೆ ಸೂಚನೆ ನೀಡಲಾಗಿದೆ.