ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಜನವರಿ 30 ರಿಂದ ಫೆಬ್ರವರಿ 2 ರವರೆಗೆ ಇ-ಖಾತಾ ಮೇಳ ಆಯೋಜಿಸಲಾಗಿದೆ.
ಹೌದು,ಬಿಬಿಎಂಪಿ ಕಛೇರಿ,ಕುವೆಂಪುನಗರ ವಾರ್ಡ್ , ಸಿಂಗಾಪುರ (ವಾಲ್ಮೀಕಿ ವೃತ್ತ)ದಲ್ಲಿ ದಿನಾಂಕ 30-01-25 ರಿಂದ 02-02-25 ವರೆಗೆ ಸಮಯ : 10:00 AM – 5:00 PM ಆಸ್ತಿ ಖಾತಾ ನೋಂದಣಿಯನ್ನು ಸರಳಗೊಳಿಸುವುದು.
ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಗೆ ಇ-ಖಾತಾ ಇಲ್ಲವೇ? ನಮ್ಮ ಶಿಬಿರಕ್ಕೆ ಬನ್ನಿ ಮತ್ತು ಇ-ಖಾತಾ ಪಡೆಯಿರಿ!
ನೀವು ತರಬೇಕಾದ ದಾಖಲೆಗಳು:
* ನೋಂದಾಯಿತ ಆಸ್ತಿ ಪತ್ರ
* ಎಸ್ಎಎಸ್ ಆಸ್ತಿ ತೆರಿಗೆ ರಶೀದಿ
* ಬೆಸ್ಕಾಂ ಮೀಟರ್ ಸಂಖ್ಯೆ
* ಆಧಾರ್ ಕಾರ್ಡ್
* ಆಸ್ತಿಯ GPS ಫೋಟೋ
* ಆಸ್ತಿ ಫೋಟೋ
* E.C (ಆಪ್ಷನಲ್)
ಸಹಾಯಕ್ಕಾಗಿ:
ಆನ್ಲೈನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಟೀಮ್ ಕೆಬಿಜಿ ಸಿದ್ಧವಾಗಿದೆ. (https://youtu.be/FRLimLizeHM?si=BxG9mgRWBU7RkP3B).
ನಿಮ್ಮ ಆಸ್ತಿಯನ್ನು ಸುಲಭವಾಗಿ ಅಧಿಕೃತಗೊಳಿಸಿ!