ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇ – ಖಾತಾ ಮತ್ತು ಹೊಸ ಖಾತೆಗಾಗಿ ಸ್ವೀಕರಿಸಲಾದ ಒಟ್ಟು 31,274 ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಹೊಸ ಮಾದರಿಯಲ್ಲಿ ಇ-ಖಾತಾ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಕೆಲವೊಂದು ಸಮಸ್ಯೆ ಉಂಟಾಗುತ್ತಿದ್ದು, ಹಳೆ ಪದ್ಧತಿಯಲ್ಲೇ ಇ-ಖಾತಾ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಗೋಪಾಲಯ್ಯ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿದ್ದು, ಇ-ಖಾತಾ ಮತ್ತು ಹೊಸ ಖಾತಾ ಅರ್ಜಿಗಳನ್ನು ವಿವರಿಸಲು ಹೊಸ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಹೊಸ ಮಾದರಿಯಲ್ಲಿ ಇ-ಖಾತಾ ನೀಡುತ್ತಿರುವುದು ಸಾರ್ವಜನಿಕರಿಗೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿಧಾನಸಭೆಯ ಇನ್ನಿತರ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಹೀಗಾಗಿ ಹಳೇ ಪದ್ದತಿಯಲ್ಲೇ ಇ-ಖಾತೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇ – ಖಾತಾ ಮತ್ತು ಹೊಸ ಖಾತೆಗಾಗಿ ಸ್ವೀಕರಿಸಲಾದ ಒಟ್ಟು 31,274 ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಹೊಸ ಮಾದರಿಯಲ್ಲಿ ಇ-ಖಾತಾ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಕೆಲವೊಂದು ಸಮಸ್ಯೆ ಉಂಟಾಗುತ್ತಿದ್ದು, ಹಳೆ ಪದ್ಧತಿಯಲ್ಲೇ ಇ-ಖಾತಾ ನೀಡಲಾಗುವುದು.
• ಬೆಳಗಾವಿ ಚಳಿಗಾಲದ… pic.twitter.com/HEzulUIfFg
— DIPR Karnataka (@KarnatakaVarthe) December 9, 2025








