Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತೈಲ ಬಿಕ್ಕಟ್ಟಿನ ನಡುವೆ ಭಾರತಕ್ಕೆ ಭಾರಿ ನೆರವು: ವೆನೆಜುವೆಲಾದಿಂದ ಬರಲಿದೆ 1.2 ಕೋಟಿ ಬ್ಯಾರೆಲ್ ಕಚ್ಚಾ ತೈಲ!

07/04/2026 6:49 PM

ಬರೀ ‘ಮರೆವು’ ಮಾತ್ರವಲ್ಲ ಡಿಮೆನ್ಶಿಯಾ ಲಕ್ಷಣ: ಮರೆಗುಳಿತನಕ್ಕೂ ಮುನ್ನ ಕಾಣಿಸಿಕೊಳ್ಳುವ ಈ 3 ಎಚ್ಚರಿಕೆ ಸಂಕೇತಗಳ ಬಗ್ಗೆ ಇರಲಿ ಜಾಗ್ರತೆ!

07/04/2026 6:44 PM

ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ಕಣ್ಣು: ಮಾಸಿಕ $4.5 ಬಿಲಿಯನ್ ‘ಜಾಕ್‌ಪಾಟ್’ಗಾಗಿ ಜಾಗತಿಕ ಮಟ್ಟದ ಒತ್ತಡ!

07/04/2026 6:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ `ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್’ : ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಎಲ್ಲಾ `ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್’ : ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಮಹತ್ವದ ಆದೇಶ.!

By kannadanewsnow5722/12/2024 2:50 PM

ಬೆಂಗಳೂರು: 2024-25ನೇ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನು ಅನುಷ್ಠಾನಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, 2024-25ನೇ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನು ಅನುಷ್ಠಾನಗೊಳಿಸುವ ಕುರಿತು ಮಾರ್ಗದರ್ಶನವನ್ನು ನೀಡಲಾಗಿರುತ್ತದೆ. ಆದಾಗ್ಯೂ ಶಾಲಾ ಹಂತದಲ್ಲಿ ಅನುಷ್ಠಾನ ಸಂಬಂಧ ನಿರ್ವಹಿಸಬೇಕಾದ ಕ್ರಮಗಳು, ವಿಜ್ಞಾನ ಪ್ರಯೋಗಾಲಯ ಉಪಕರಣಗಳ ಖರೀದಿ ಪ್ರಕ್ರಿಯೆಯನ್ನು ಸಮರ್ಪಕವಾದ ರೀತಿಯಲ್ಲಿ ಅನುಸರಿಸದೇ ಇರುವುದನ್ನು ಗಮನಿಸಲಾಗಿದೆ. ಈ ಕುರಿತು ಡಯಟ್ ನೋಡಲ್ ಅಧಿಕಾರಿಗಳು, ಡಯಟ್ ಪ್ರಾಂಶುಪಾಲರು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಿದ. ಪ್ರಯೋಗಾಲಯ ಅನುಷ್ಠಾನದಲ್ಲಿ ಗಮನಿಸಲಾದ ವ್ಯತ್ಯಯಗಳನ್ನು ಈ ಕೆಳಗಿನಂತೆ ಸರಿಪಡಿಸಲು ತಿಳಿಸಿದೆ.

ಪಠ್ಯಕ್ರಮದ ಪ್ರಯೋಗಗಳಿಗೆ ಅನುಗುಣವಾಗಿ ಎಲ್ಲಾ ವಿದ್ಯಾರ್ಥಿಗಳು ಪ್ರಯೋಗಗಳಲ್ಲಿ ತೊಡಗಿಕೊಳ್ಳಲು ಅವಕಾಶವಾಗುವಂತೆ ಖರೀದಿಸಬೇಕಾದ ಉಪಕರಣಗಳ ಪಟ್ಟಿಯನ್ನು ಸಿದ್ಧಪಡಿಸದಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಶಾಲಾ ಹಂತದಲ್ಲಿ 8, 9 ಮತ್ತು 10ನೇ ತರಗತಿಗಳ ವಿಜ್ಞಾನ ವಿಷಯದ ಪಠ್ಯಕ್ರಮದಲ್ಲಿನ ಪ್ರಯೋಗಗಳಿಗೆ ಹೊಂದಿಕೆಯಾಗುವ ಪ್ರಯೋಗಗಳನ್ನು ನಿರ್ವಹಿಸಲು ಅನುವಾಗುವಂತೆ ಉಪಕರಣಗಳನ್ನು ಖರೀದಿಸಲು ಕ್ರಮವಹಿಸುವುದು. (ಈಗಾಗಲೇ ನೀಡಲಾಗಿರುವ ಅನುಬಂಧ-2ನ್ನು ಅವಲೋಕಿಸಿ ಉಪಕರಣಗಳ ಪಟ್ಟಿಯನ್ನು ಅಂತಿಮಗೊಳಿಸುವುದು)

ಶಾಲೆಗಳಲ್ಲಿ ನಿಯಮಾನುಸಾರ ದರಪಟ್ಟಿ ಪ್ರಕಟಿಸದೇ ಇರುವುದನ್ನು ಗಮನಿಸಲಾಗಿದ್ದು, ಶಾಲಾ ಮುಖ್ಯ ಶಿಕ್ಷಕರು ದರಪಟ್ಟಿ ಪ್ರಕಟಣೆ, ವಿಧಿಸಬೇಕಾದ ಷರತ್ತುಗಳು, ಕಾರ್ಯಾದೇಶವನ್ನು ನಿಯಮಾನುಸಾರ ನೀಡುವಂತೆ ಕ್ರಮವಹಿಸುವುದು.
ಉಲ್ಲೇಖಿತ ಸರ್ಕಾರಿ ಆದೇಶಗಳಲ್ಲಿ ಸೂಚಿಸಿರುವ ಘಟಕ ವೆಚ್ಚದಂತೆ ಅನುದಾನವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸುವುದು. ಯಾವುದೇ ಕಾರಣಕ್ಕೂ, ಪ್ರಯೋಗಾಲಯ ಸಂಬಂಧಿತ ಕಾಮಗಾರಿ ಹಾಗೂ ಪ್ರಯೋಗಾಲಯ ಸಂಬಂಧಿತ ಇತರೆ ವೆಚ್ಚಗಳಿಗಾಗಿ (ಉದಾಹರಣೆಗೆ ಪ್ರಯೋಗಾಲಯ ಸುಣ್ಣ ಬಣ್ಣ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಕರ್ಟನ್ ಅಳವಡಿಕೆ ಇತ್ಯಾದಿಗಳಿಗೆ) ಅನುದಾನ ಬಳಕೆ ಮಾಡುವಂತಿಲ್ಲ.
ಶಾಲೆಗಳು ತಮ್ಮ ಶಾಲೆಯ ಡಿಡಿಓ ಕೋಡ್ ನ್ನು ತಮ್ಮ ವ್ಯಾಪ್ತಿಯ ಖಜಾನೆಗೆ (ತಾಲ್ಲೂಕು/ಜಿಲ್ಲೆ) ಲೆಕ್ಕ ಶೀರ್ಷಿಕೆ 4202-01-201-1-04-180ಗೆ ಮ್ಯಾಪ್ ಮಾಡಿಕೊಳ್ಳಲು ಕ್ರಮವಹಿಸುವುದು. ಮ್ಯಾಪಿಂಗ್ ಮಾಡಿದ ನಂತರ ಬಿಲ್ಲುಗಳನ್ನು ಕೇಂ ಮಾಡಲು ಸಾಧ್ಯವಾಗುತ್ತದೆ. ನಂತರ ಖರೀದಿಸಿದ ಉಪಕರಣಗಳಿಗೆ ಮೊತ್ತವನ್ನು ಪಾವತಿಸಬಹುದಾಗಿರುತ್ತದೆ.

K2 ಮೂಲಕ ಪಾವತಿಸಬೇಕಾದ ಕ್ರಮಗಳನ್ನರಿತು ಸಕಾಲದಲ್ಲಿ ಪಾವತಿಯಾಗುವಂತೆ ಕ್ರಮವಹಿಸುವುದು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡದೇ ಅನುದಾನವು ವ್ಯಪಗತವಾಗದಂತೆ ಕ್ರಮವಹಿಸುವುದು. ನಿಗದಿತ ಅವಧಿಯಲ್ಲಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಅನುಷ್ಠಾನಗೊಳಿಸಿ ಪ್ರಯೋಗಾಲಯ ಸೌಲಭ್ಯ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವ ಮೂಲಕ ಉತ್ತಮ ಕಲಿಕೆಗೆ ಅನುವು ಮಾಡಿಕೊಡುವುದು. ಈ ಎಲ್ಲಾ ಅಂಶಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಿಳಿಸಿದೆ.

BIG NEWS : ರಾಜ್ಯದ `ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್' : ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಮಹತ್ವದ ಆದೇಶ.! BIG NEWS: 'Good news for high school students' in the state: Govt orders setting up of science laboratory facilities
Share. Facebook Twitter LinkedIn WhatsApp Email

Related Posts

ಆಟೋ ಎಲ್‌ಪಿಜಿ, ಸಿಎನ್‌ಜಿ ದರ ಏರಿಕೆ ಮಾಡೋ ಎಚ್ಚರ! ನಿಮ್ಮ ವಿರುದ್ಧ ಕೇಸ್ ಫಿಕ್ಸ್!

07/04/2026 5:33 PM1 Min Read

ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ

07/04/2026 5:28 PM1 Min Read

ನಾಳೆಯಿಂದ ‘ತಾಳಗುಪ್ಪ–ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಆಧುನಿಕ ಎಲ್ಎಚ್’ಬಿ ಬೋಗಿಗಳ ಅಳವಡಿಕೆ

07/04/2026 5:23 PM1 Min Read
Recent News

ತೈಲ ಬಿಕ್ಕಟ್ಟಿನ ನಡುವೆ ಭಾರತಕ್ಕೆ ಭಾರಿ ನೆರವು: ವೆನೆಜುವೆಲಾದಿಂದ ಬರಲಿದೆ 1.2 ಕೋಟಿ ಬ್ಯಾರೆಲ್ ಕಚ್ಚಾ ತೈಲ!

07/04/2026 6:49 PM

ಬರೀ ‘ಮರೆವು’ ಮಾತ್ರವಲ್ಲ ಡಿಮೆನ್ಶಿಯಾ ಲಕ್ಷಣ: ಮರೆಗುಳಿತನಕ್ಕೂ ಮುನ್ನ ಕಾಣಿಸಿಕೊಳ್ಳುವ ಈ 3 ಎಚ್ಚರಿಕೆ ಸಂಕೇತಗಳ ಬಗ್ಗೆ ಇರಲಿ ಜಾಗ್ರತೆ!

07/04/2026 6:44 PM

ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ಕಣ್ಣು: ಮಾಸಿಕ $4.5 ಬಿಲಿಯನ್ ‘ಜಾಕ್‌ಪಾಟ್’ಗಾಗಿ ಜಾಗತಿಕ ಮಟ್ಟದ ಒತ್ತಡ!

07/04/2026 6:32 PM

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ: ಏರ್ ಇಂಡಿಯಾ ಟಿಕೆಟ್ ದರ ಏರಿಕೆ ಫಿಕ್ಸ್; ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾರಿ ಹೊಡೆತ!

07/04/2026 6:10 PM
State News
KARNATAKA

ಆಟೋ ಎಲ್‌ಪಿಜಿ, ಸಿಎನ್‌ಜಿ ದರ ಏರಿಕೆ ಮಾಡೋ ಎಚ್ಚರ! ನಿಮ್ಮ ವಿರುದ್ಧ ಕೇಸ್ ಫಿಕ್ಸ್!

By kannadanewsnow0907/04/2026 5:33 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಆಟೋ ಎಲ್‌ಪಿಜಿ (LPG) ಮತ್ತು ಸಿಎನ್‌ಜಿ (CNG) ಬಂಕ್‌ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ…

ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ

07/04/2026 5:28 PM

ನಾಳೆಯಿಂದ ‘ತಾಳಗುಪ್ಪ–ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಆಧುನಿಕ ಎಲ್ಎಚ್’ಬಿ ಬೋಗಿಗಳ ಅಳವಡಿಕೆ

07/04/2026 5:23 PM

BIG NEWS: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಹಿನ್ನಲೆ: ಏಪ್ರಿಲ್.9ರಂದು ‘ಸರ್ಕಾರಿ ರಜೆ’ ಘೋಷಣೆ

07/04/2026 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.