ಧಾರವಾಡ : ಕೈಮಗ್ಗ ಮತ್ತು ಜವಳಿ ಇಲಾಖೆಯು 2025-26 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಕೈಮಗ್ಗ ಉದ್ಯಮಿಗಳಿಗೆ ಸಹಾಯಧನ ಯೋಜನೆಯಡಿಯಲ್ಲಿ ನೋಂದಾಯಿತ, ಕಾರ್ಯನಿರತ ಕೈಮಗ್ಗ ನೇಕಾರ ಸಂಘಗಳಿಂದ ಸಹಾಯಧನ ಬೇಡಿಕೆಗಾಗಿ ಅರ್ಜಿ (ಪ್ರಸ್ತಾವನೆಗಳನ್ನು) ಆಹ್ವಾನಿಸಲಾಗಿದೆ.
ಆಸಕ್ತ ಕೈಮಗ್ಗ ನೇಕಾರ ಸಂಘಗಳು ಏಪ್ರಿಲ್ 19, 2025 ರೊಳಗಾಗಿ ಧಾರವಾಡ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ (ಪ್ರಸ್ತಾವನೆ) ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:0836–2448834 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.