ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಸಿಬ್ಬಂದಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಏಪ್ರಿಲ್ 17 ರ ನಾಳೆಯಿಂದ ವರ್ಗಾವಣೆಗೆ ಕೌನ್ಸೆಲಿಂಗ್ ಆರಂಭವಾಗಲಿದೆ.
ಹೌದು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಮಾಡುವ ಸಂಬಂಧ ಕೌನ್ಸೆಲಿಂಗ್ ಪ್ರಕ್ರಿಯೆ ಏ. 17 ರಿಂದ ಮೇ 13ರವರೆಗೆ ನಡೆಯಲಿದೆ. ಈ ಸಂಬಂಧ ಪಂಚಾಯತ್‌ರಾಜ್ ಆಯುಕ್ತಾಲಯ ಅಧಿಸೂಚನೆ ಹೊರಡಿಸಿದೆ. ವರ್ಗಾವಣೆ ಬಯಸುವವರ ಆನ್ ಲೈನ್ ಮೂಲಕ ಏ. 17ರಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಒಟ್ಟಾರೆ ಶೇ.15ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ ಕಡ್ಡಾಯ ಹಾಗೂ ಸಾಮಾನ್ಯ ವರ್ಗಾವಣೆ ಶೇ. 9, ಒಂಟಿ ಮಹಿಳೆ, ಪತಿ, ಪತ್ನಿ ಪ್ರಕರಣ ಶೇ. 3, ಏಕ ಪೋಷಕರು, ಹಾಗೂ 12 ವರ್ಷ ಒಳಗೆ ಇರುವ ಮಕ್ಕಳು ಅಥವಾ ಪತಿ ಅಥವಾ ಪತ್ನಿ ಅಂಗವಿಕಲರಾಗಿದಲ್ಲಿ, ಇಲ್ಲವೇಮಕ್ಕಳು ಗಂಭೀರವಾದ ಅಂಗವಿಕಲತೆಯಿಂದ ಬಳಲುತ್ತಿದ್ದರೆ ಅಂತಹ ನೌಕರರಿಗೆ ಶೇ.1 ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಹಾಗೂ ಗಂಭೀರವಾದ ಅಂಗವಿಕಲತೆ ಇರುವ ಪ್ರಕರಣಗಳಿಗೆ ತಲಾ 1ರಷ್ಟು ವರ್ಗಾವಣೆಗೆ ಅವಕಾಶ ನೀಡಲಾಗಿದೆ.