ಬೆಂಗಳೂರು : 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 01 ಜೊತೆ ಶೂ ಮತ್ತು 2 ಜೊತೆ ಸಾಕ್ಸ್ ಗಳನ್ನು ಒದಗಿಸಲು ಲೆಕ್ಕಶೀರ್ಷಿಕೆ:2202-01-109-0-03ಯ ಉಪ ಶೀರ್ಷಿಕೆ -221 ರಡಿ ಒಟ್ಟು ರೂ. 600.00 ಲಕ್ಷಗಳನ್ನು ಪುನರ್ವಿನಿಯೋಗದ ಮೂಲಕ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.68ಲಕ್ಷ ವಿದ್ಯಾರ್ಥಿಗಳಿಗೆ 2025-26ನೇ ປໍ ຜ :2202-01-109-0-03 Vidya Vikasa Scheme for Students Incentive for Students ರಡಿ ನಿಗಧಿಪಡಿಸಿರುವ ರೂ.41000.00 ಲಕ್ಷಗಳ ಅನುದಾನದಿಂದ ರೂ.11188.00 ಲಕ್ಷಗಳ ವೆಚ್ಚದಲ್ಲಿ ಉಚಿತವಾಗಿ 01 ಜೊತೆ ಶೂ ಮತ್ತು 02 ಜೊತೆ ಸಾಕ್ಷ್ಯಳನ್ನು ಒದಗಿಸಲು ಹಾಗೂ ಸದರಿ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು 2025-26ನೇ ಸಾಲಿನ : 2202-01-109-0-03 Vidya Vikasa Scheme for Students Incentive for Students ರಡಿ ಬಿಡುಗಡೆಗೊಳಿಸಲಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಅದಕ್ಕನುಗುಣವಾಗಿ ಅನುದಾನವನ್ನು ಭರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರಿಗೆ ಆದೇಶಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ 2025-26ನೇ ಸಾಲಿಗೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಒದಗಿಸಲಾದ ರೂ.41000.00 ಲಕ್ಷಗಳ (ನಲವತ್ತೊಂದು ಸಾವಿರ ಲಕ್ಷ ರೂಪಾಯಿಗಳು ಮಾತ್ರ) ಅನುದಾನದ ಪೈಕಿ, 2025-26ನೇ ಸಾಲಿನ ಪಠ್ಯಪುಸ್ತಕ ಮುದ್ರಣ ಮತ್ತು ಸರಬರಾಜು ಕಾರ್ಯಕ್ಕಾಗಿ ರೂ.20417.00 ಲಕ್ಷಗಳ (ಇಪ್ಪತ್ತು ಸಾವಿರದ ನಾಲ್ಕುನೂರ ಹದಿನೇಳು ಲಕ್ಷ ರೂಪಾಯಿಗಳು ಮಾತ್ರ) ಅನುದಾನವನ್ನು ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರಿಗೆ ಅನುಮತಿ ನೀಡಿ ಆದೇಶಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ 2025-26ನೇ ಸಾಲಿನ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ, ರಾಜ್ಯವಲಯದ ಯೋಜನೆಗಳು/ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಿಗದಿಪಡಿಸಿರುವ ಅನುದಾನದಲ್ಲಿ ಜುಲೈ-2025 ರಿಂದ ಸೆಪ್ಟೆಂಬರ್-2025 ರವರೆಗಿನ ಮೂರು ತಿಂಗಳ ಅನುದಾನ ರೂ.7934.51 ಲಕ್ಷಗಳನ್ನು (ಏಳು ಸಾವಿರದ ಒಂಬೈನೂರಾ ಮೂವತ್ತು ನಾಲ್ಕು ಲಕ್ಷದ ಐವತ್ತೊಂದು ಸಾವಿರಗಳು ಮಾತ್ರ) ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು, ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅನುಮತಿ ನೀಡಿ ಆದೇಶಿಸಿದ ಹಾಗೂ ದಿನಾಂಕ: 19.09.2025ರ ತಿದ್ದುಪಡಿ ಆದೇಶದಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ರೂ. 31604.51 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿದ್ದುಪಡಿಗೊಳಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4) 2025-26ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾವಿಕಾಸ ಯೋಜನೆಯ 01 ನೇ ಜೊತೆ ಸಮವಸ್ತ್ರಕ್ಕೆ ರೂ.84.73 ಕೋಟಿ ಅನುದಾನ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಇಲಾಖೆಯ ಕೋರಿಕೆಯಂತೆ, 2025-26 ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ, ಬಟ್ಟೆ ಸರಬರಾಜು ಮಾಡಿದ ಕೆ.ಹೆಚ್.ಡಿ.ಸಿ ಹಾಗೂ ಇ-ಟೆಂಡರ್ ಅರ್ಹತೆ ಪಡೆದು ಸರಬರಾಜು ಮಾಡಿರುವ ಸಂಸ್ಥೆಗಳಿಗೆ ಒಟ್ಟು ರೂ.83.07 ಕೋಟಿ (ಎಂಬತ್ತೂರು ಕೋಟಿ ಏಳು ಲಕ್ಷಗಳು) ಅನುದಾನವನ್ನು ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (5) 2025-26 ನೇ ಸಾಲಿನಲ್ಲಿ ಶೂ ಸಾಕ್ಸ್ ವಿತರಣೆಗಾಗಿ ಲೆಕ್ಕಶೀರ್ಷಿಕೆ : 2202-01-109-0-03 ರ ಉಪ ಲೆಕ್ಕಶೀರ್ಷಿಕೆ 133 ಯಲ್ಲಿ ಪ್ರಸ್ತುತ ಲಭ್ಯವಿರುವ ರೂ. 682.78 ಲಕ್ಷಗಳಲ್ಲಿ ರೂ.600.00 ಲಕ್ಷಗಳನ್ನು ಉಪ ಲೆಕ್ಕಶೀರ್ಷಿಕೆ 221 ಕ್ಕೆ ಮರುಹೊಂದಾಣಿಕೆ ಮಾಡಿಕೊಡುವಂತೆ ಕೋರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ಪ್ರಸ್ತಾವನೆಯನ್ನು ಏಕ ಕಡತದಲ್ಲಿ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (6) 2025-26ನೇ ಸಾಲಿಗೆ ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವಂತೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 01 ಜೊತೆ ಶೂ ಮತ್ತು 2 ಜೊತೆ ಸಾಕ್ಸ್ಗಳನ್ನು ಒದಗಿಸಲು ಲೆಕ್ಕಶೀರ್ಷಿಕೆ 2202-01-109-0-03-221-ಸಾಮಗ್ರಿ ಮತ್ತು ដថក ថ. 600.00 (Rupees six hundred lakh only) ಲಕ್ಷಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಲು ಮಂಜೂರಾತಿ ನೀಡಲಾಗಿದೆ.









