ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಸೇರಿ 10 ಜನರ ಬೆರಳಚ್ಚು ಹೋಲಿಕೆಯಾಗಿದೆ ಎನ್ನಲಾಗಿದೆ.
ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ನಟ ದರ್ಶನ್ ಸೇರಿ ಇತರೆ 10 ಆರೋಪಿಗಳ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಪಟ್ಟಣಗೆರೆ ಶೆಡ್, ಶವ ಎಸೆದ ಜಾತ, ಶವ ಸಾಗಿಸಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಸಿಕ್ಕ ಬೆರಳಚ್ಚಿಗೂ ಆರೋಪಿಗಳ ಬೆರಳಚ್ಚು ಒಂದೇ ಆಗಿದೆ ಎನ್ನಲಾಗಿದೆ.
ಇನ್ನು ರೇಣುಕಾಸ್ವಾಮಿ ದೇಹ, ಬಟ್ಟೆ ಮೇಲೂ ಬೆರಳಚ್ಚು ಸಂಗ್ರಹಿಸಿದ್ದ ಎಫ್ ಎಸ್ ಎಲ್ ಇದೀಗ ವರದಿ ನೀಡಿದ್ದು, ರೇಣುಕಾಸ್ವಾಮಿ ಬಟ್ಟೆ ಹಾಗೂ ದೇಹದ ಮೇಲೆ ಆರೋಪಿಗಳ ಫಿಂಗರ್ ಪ್ರಿಂಟ್ ಹೋಲಿಕೆ ಕಂಡುಬಂದಿದೆ ಎನ್ನಲಾಗಿದೆ.