Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪುಲ್ಪುರಿ’ಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡ್ತಿದ್ದೀರಾ.? ಅಯ್ಯೋ, ಈ ಒಂದು ತಪ್ಪು ಕ್ಯಾನ್ಸರ್’ಗೆ ಕಾರಣವಾಗ್ಬೋದು!

03/02/2026 5:13 PM

BREAKING : ಉದ್ವಿಗ್ನತೆ ನಡುವೆ ಫೆ.28ರವರೆಗೆ ಭಾರತದಿಂದ ಇರಾನ್’ಗೆ ವಿಮಾನ ಸೇವೆ ರದ್ದು

03/02/2026 4:50 PM

ಸಾಗರದ ‘ಮಾರಿ ಜಾತ್ರೆ’ಗೆ ನಿರೀಕ್ಷೆಗೂ ಮೀರಿ ಹರಿದುಬಂದು ಭಕ್ತರು: ಮೊದಲ ದಿನ ಅಪ್ ಡೇಟ್ ಇಲ್ಲಿದೆ ಓದಿ

03/02/2026 4:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಇನ್ಮುಂದೆ ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು ಫಿಕ್ಸ್ : ಸರ್ಕಾರದಿಂದ ಮಹತ್ವದ ಮಸೂದೆ ಮಂಡನೆ
KARNATAKA

BIG NEWS : ರಾಜ್ಯದಲ್ಲಿ ಇನ್ಮುಂದೆ ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು ಫಿಕ್ಸ್ : ಸರ್ಕಾರದಿಂದ ಮಹತ್ವದ ಮಸೂದೆ ಮಂಡನೆ

By kannadanewsnow5712/12/2025 6:49 AM

ಬೆಳಗಾವಿ : ವಿಧಾನಸಭೆಯಲ್ಲಿ ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ತಡೆ, ನಿಷೇಧ ಮತ್ತು ಪರಿಹಾರ ಮಸೂದೆ-2025 ಮಂಡಿಸಲಾಗಿದ್ದು, ಈ ಮಸೂದೆ ಅನ್ವಯ ಇನ್ಮುಂದೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, 1 ಲಕ್ಷ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಈ ಮಸೂದೆಯಂತೆ ಇನ್ನು ಮುಂದೆ ಸಾಮಾಜಿಕ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ ಹಾಗೂ ಪಂಚಾಯ್ತಿ ನಡೆಸಿದವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುವುದು.‌ ಬಹಿಷ್ಕಾರಕ್ಕೆ ಒತ್ತಡ ಹೇರಿ ಪರೋಕ್ಷವಾಗಿ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ.

ಬಹಿಷ್ಕಾರಕ್ಕೆ ಒತ್ತಡ ಹೇರುವ ಮೂಲಕ ನಿರ್ಧಾರಕ್ಕೆ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಈ ಕುರಿತು ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ ಎಂದು ಮಸೂದೆಯಲ್ಲಿ ಉಲ್ಲೇಖಿಸಿದೆ. ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು.

ಯಾವುದೆಲ್ಲ ನಿಷೇಧ?

1) ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದು

2) ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು

3) ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು

4) ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು

5) ಸಾಮಾಜಿಕ–ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು, ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು

6) ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿಪಡಿಸುವುದು, ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು

7) ಮಾನವ ಹಕ್ಕುಗಳನ್ನು ನಿರಾಕರಿಸುವುದು ಹಾಗೂ ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದನ್ನು ಈ ಪ್ರಸ್ತಾಪಿತ ಮಸೂದೆಯಡಿ ನಿಷೇಧಿಸಲಾಗಿದೆ.

3 years in prison will be fixed: Government introduces an important bill a fine of 1 lakh BIG NEWS: From now on if social boycott is imposed in the state
Share. Facebook Twitter LinkedIn WhatsApp Email

Related Posts

ಸಾಗರದ ‘ಮಾರಿ ಜಾತ್ರೆ’ಗೆ ನಿರೀಕ್ಷೆಗೂ ಮೀರಿ ಹರಿದುಬಂದು ಭಕ್ತರು: ಮೊದಲ ದಿನ ಅಪ್ ಡೇಟ್ ಇಲ್ಲಿದೆ ಓದಿ

03/02/2026 4:44 PM4 Mins Read

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

03/02/2026 1:36 PM2 Mins Read

BIG NEWS : ಅಬಕಾರಿ ಮಂತ್ರಿಗಳಿಗೆ ತಿಂಗಳು, ತಿಂಗಳು ಕಮಿಷನ್ ಕೊಡಬೇಕು : ಸದನದಲ್ಲಿ ಆರ್.ಅಶೋಕ್ ಬಾಂಬ್!

03/02/2026 1:28 PM1 Min Read
Recent News

‘ಪುಲ್ಪುರಿ’ಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡ್ತಿದ್ದೀರಾ.? ಅಯ್ಯೋ, ಈ ಒಂದು ತಪ್ಪು ಕ್ಯಾನ್ಸರ್’ಗೆ ಕಾರಣವಾಗ್ಬೋದು!

03/02/2026 5:13 PM

BREAKING : ಉದ್ವಿಗ್ನತೆ ನಡುವೆ ಫೆ.28ರವರೆಗೆ ಭಾರತದಿಂದ ಇರಾನ್’ಗೆ ವಿಮಾನ ಸೇವೆ ರದ್ದು

03/02/2026 4:50 PM

ಸಾಗರದ ‘ಮಾರಿ ಜಾತ್ರೆ’ಗೆ ನಿರೀಕ್ಷೆಗೂ ಮೀರಿ ಹರಿದುಬಂದು ಭಕ್ತರು: ಮೊದಲ ದಿನ ಅಪ್ ಡೇಟ್ ಇಲ್ಲಿದೆ ಓದಿ

03/02/2026 4:44 PM

Good News ; ಕೇಂದ್ರದಿಂದ ‘ತೂಕ ಆಧಾರಿತ ಆಭರಣ’ ನಿಯಮ ಜಾರಿ, ವಿದೇಶದಿಂದ ಒಬ್ಬರು 6 ಲಕ್ಷ ರೂ.ವರೆಗೆ ಸುಂಕ ರಹಿತ ‘ಚಿನ್ನ’ ತರ್ಬೊದು!

03/02/2026 4:42 PM
State News
KARNATAKA

ಸಾಗರದ ‘ಮಾರಿ ಜಾತ್ರೆ’ಗೆ ನಿರೀಕ್ಷೆಗೂ ಮೀರಿ ಹರಿದುಬಂದು ಭಕ್ತರು: ಮೊದಲ ದಿನ ಅಪ್ ಡೇಟ್ ಇಲ್ಲಿದೆ ಓದಿ

By kannadanewsnow0903/02/2026 4:44 PM KARNATAKA 4 Mins Read

ಶಿವಮೊಗ್ಗ : ಸಾಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ದೇವಿಯ 9 ದಿನಗಳ ಜಾತ್ರೆಗೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆಯಿತು.…

BIG UPDATE : ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್

03/02/2026 1:36 PM

BIG NEWS : ಅಬಕಾರಿ ಮಂತ್ರಿಗಳಿಗೆ ತಿಂಗಳು, ತಿಂಗಳು ಕಮಿಷನ್ ಕೊಡಬೇಕು : ಸದನದಲ್ಲಿ ಆರ್.ಅಶೋಕ್ ಬಾಂಬ್!

03/02/2026 1:28 PM

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರನ್ನು ಕೋಣೆಗೆ ಕರೆದು ‘ಲೈಂಗಿಕ ಕಿರುಕುಳ’ ಆರೋಪ : ಖಾಸಗಿ ಶಾಲಾ ಶಿಕ್ಷಕ ಅರೆಸ್ಟ್

03/02/2026 1:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.