ಕಲಬುರ್ಗಿ: ಒಂದೆಡೆ ಕಾಂಗ್ರೆಸ್ 40% ಸರ್ಕಾರ ಎಂಬುದಾಗಿ ರಾಜ್ಯ ಸರ್ಕಾರದ ವಿರುದ್ಧ ಸರಣಿ ಕಿಡಿಕಾರುತ್ತಿದೆ. ಮತ್ತೊಂದೆಡೆ ಗುರುವಾರ ಸದನದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರದ ಸಚಿವರೊಬ್ಬರ ಅಕ್ರಮವನ್ನು ದಾಖಲೆ ಸಹಿತ ಬಹಿರಂಗ ಪಡಿಸೋದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ ಮೂಲಕ UPI ಪಾವತಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ! | UPI payments through credit cards

ಬುಧವಾರ ಕಲಬುರ್ಗಿ ವಿಮಾನ ನಿಲ್ದಾಣದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸರ್ಕಾರದ ಸಚಿವರೊಬ್ಬರು ನಿಯಮ ಉಲ್ಲಂಘಿಲಸಿ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವನ್ನು ಎಸಗಿದ್ದಾರೆ. ಅದರ ಬಗ್ಗೆ ನಾಳೆ ದಾಖಲೆ ಸಹಿತ ಸದನದಲ್ಲಿಯೇ ಬಹಿರಂಗ ಪಡಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

BIGG NEWS : ಬೆಂಗಳೂರಿಗರೇ ಗಮನಿಸಿ : ಇಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ|Power Cut

ಗುರುವಾರದವರೆಗೆ ಕಾಯಿರಿ. ಯಾವ ಸಚಿವರು, ಅವರ ಹೆಸರು ಏನು ಎಂಬುದು ಸದನದಲ್ಲಿಯೇ ಬಹಿರಂಗವಾಗಲಿದೆ. ನಾನು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಇಲ್ಲ. ಅಲ್ಲದೇ ಹಿಟ್ ಅಂಡ್ ರನ್ ಕೆಲಸವನ್ನು ಮಾಡ್ತಾ ಇಲ್ಲ ಎಂದರು. ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದಂತ ಆ ಸಚಿವರಿಗೆ ಸದನದಲ್ಲಿಯೇ ಅವರ ಅಕ್ರಮಗಳನ್ನು ದಾಖಲೆಗಳ ಸಹಿತ ಬಹಿರಂಗ ಪಡಿಸಿ, ಉತ್ತರ ನೀಡಲಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳ ದಾಖಲೆ ಬಿಡುಗಡೆ ಮಾಡುವೆ ಎಂದು ಹೇಳಿದರು.

Share.
Exit mobile version