Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’

17/03/2026 7:31 PM

BREAKING: ಲೈಂಗಿಕ ಕಿರುಕುಳ ಆರೋಪದಡಿ ‘ಮೂಡಬಿದ್ರೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್’ ಸಸ್ಪೆಂಡ್

17/03/2026 7:24 PM

ಜಿಯೋ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಗುಡ್ ನ್ಯೂಸ್; ಯುಪಿಐ ಆಧಾರಿತ ನಗದು ಹಿಂಪಡೆಯುವ ಸೇವೆ ಪರಿಚಯ

17/03/2026 7:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶದ ಇತಿಹಾಸದಲ್ಲೇ ಇದೇ ಮೊದಲು : ದಲಿತರ ಮೇಲಿನ ದೌರ್ಜನ್ಯ ಕೇಸ್ ನಲ್ಲಿ 98 ಆರೋಪಿಗಳಿಗೆ `ಜೀವಾವಧಿ’ ಶಿಕ್ಷೆ
KARNATAKA

BIG NEWS : ದೇಶದ ಇತಿಹಾಸದಲ್ಲೇ ಇದೇ ಮೊದಲು : ದಲಿತರ ಮೇಲಿನ ದೌರ್ಜನ್ಯ ಕೇಸ್ ನಲ್ಲಿ 98 ಆರೋಪಿಗಳಿಗೆ `ಜೀವಾವಧಿ’ ಶಿಕ್ಷೆ

By kannadanewsnow5725/10/2024 9:00 AM

ಕೊಪ್ಪಳ: ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಬಂಧಿತರಾಗಿದ್ದಂತ 101 ಆರೋಪಿಗಳಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಕೋರ್ಟ್ ಆದೇಶಿಸಿದೆ. ಈ ಮೂಲಕ ಈ ಪ್ರಕರಣ ದೇಶದ ಇತಿಹಾಸದಲ್ಲೇ ಇಷ್ಟು ಜನರಿಗೆ ಒಂದೇ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಮೊದಲು.

ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದು, ಮರಕುಂಬಿ ಗ್ರಾಮ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದಂತ 101 ಆರೋಪಿಗಳಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ. ಮೂವರು ಆರೋಪಿಗಳಇಗೆ ಐದು ವರ್ಷ ಕಠಿಣ ಶಿಕ್ಷೆಯನ್ನು ತಲಾ 2 ಸಾವಿರ ದಂಡವನ್ನು ವಿಧಿಸಿದ್ದಾರೆ. ಇನ್ನೂ ಜೀವಾವಧಿ ಶಿಕ್ಷೆಗೆ ಒಳಗಾದಂತ 98 ಅಪರಾಧಿಗಳಿಗೆ ತಲಾ 5 ಸಾವಿರ ದಂಡವನ್ನು ವಿಧಿಸಿದ್ದಾರೆ.

2014ರ ಆಗಸ್ಟ್ 28 ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 21 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 21 ರಂದು 101 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದರು. ಇಂದು ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಗಂಗಾವತಿ ನಗರದಲ್ಲಿ ಪವರ್ ಸಿನಿಮಾ ನೋಡಲು ಮಂಜುನಾಥ ಎಂಬಾತ ತನ್ನ ಸ್ನೇಹಿತರ ಜೊತೆ ಹೋಗಿದ್ದರು. ಮರಕುಂಬಿ ನಿವಾಸಿಯಾಗಿದ್ದ ಮಂಜುನಾಥ ಎಂಬಾತನ ಮೇಲೆ ಹಲ್ಲೆಯಾಗಿತ್ತು. ಬಳಿಕ ತಮ್ಮದೇ ಊರಿನ ದಲಿತರು ಹಲ್ಲೆ ಮಾಡಿಸಿದ್ದಾರೆ ಎಂದು ಮಂಜುನಾಥ ಗ್ರಾಮದ ಜನರಿಗೆ ಹೇಳಿದ್ದ. ಬಳಿಕ ಮಂಜುನಾಥನ ಪರವಾಗಿ ಗ್ರಾಮದ ಜನರು ದಲಿತರ ಮೇಲೆ ಹಲ್ಲೆ ಮಾಡಿದ್ದರು. ಅನೇಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಹಲ್ಲೆ ಮಾಡಲಾಗಿತ್ತು. ಈ ಕುರಿತು ಭೀಮೇಶ್ ಎಂಬುವವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.

BIG NEWS : ದೇಶದ ಇತಿಹಾಸದಲ್ಲೇ ಇದೇ ಮೊದಲು : ದಲಿತರ ಮೇಲಿನ ದೌರ್ಜನ್ಯ ಕೇಸ್ ನಲ್ಲಿ 98 ಆರೋಪಿಗಳಿಗೆ `ಜೀವಾವಧಿ' ಶಿಕ್ಷೆ BIG NEWS: For the first time in the history of the country: 98 accused have been sentenced to life imprisonment in the case of atrocities on Dalits
Share. Facebook Twitter LinkedIn WhatsApp Email

Related Posts

GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’

17/03/2026 7:31 PM2 Mins Read

BREAKING: ಲೈಂಗಿಕ ಕಿರುಕುಳ ಆರೋಪದಡಿ ‘ಮೂಡಬಿದ್ರೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್’ ಸಸ್ಪೆಂಡ್

17/03/2026 7:24 PM1 Min Read

ಹೆಚ್.ಡಿ.ದೇವೇಗೌಡರ ಮನವಿಗೆ ಕೇಂದ್ರದ ಸ್ಪಂದನೆ: ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಗ್ರೀನ್ ಸಿಗ್ನಲ್

17/03/2026 7:18 PM1 Min Read
Recent News

GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’

17/03/2026 7:31 PM

BREAKING: ಲೈಂಗಿಕ ಕಿರುಕುಳ ಆರೋಪದಡಿ ‘ಮೂಡಬಿದ್ರೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್’ ಸಸ್ಪೆಂಡ್

17/03/2026 7:24 PM

ಜಿಯೋ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಗುಡ್ ನ್ಯೂಸ್; ಯುಪಿಐ ಆಧಾರಿತ ನಗದು ಹಿಂಪಡೆಯುವ ಸೇವೆ ಪರಿಚಯ

17/03/2026 7:22 PM

‘ಕಲ್ಲಂಗಡಿ’ ತಿಂದರೆ ನಿಮ್ಮ ಹೃದಯಕ್ಕೆ ಏನಾಗುತ್ತೆ ಗೊತ್ತಾ? ಆಘಾತಕಾರಿ ಸಂಗತಿಗಳು ಇಲ್ಲಿವೆ!

17/03/2026 7:20 PM
State News
KARNATAKA

GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’

By kannadanewsnow0917/03/2026 7:31 PM KARNATAKA 2 Mins Read

ಬೆಂಗಳೂರು: ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಳ್ಳಿಗಳ…

BREAKING: ಲೈಂಗಿಕ ಕಿರುಕುಳ ಆರೋಪದಡಿ ‘ಮೂಡಬಿದ್ರೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್’ ಸಸ್ಪೆಂಡ್

17/03/2026 7:24 PM

ಹೆಚ್.ಡಿ.ದೇವೇಗೌಡರ ಮನವಿಗೆ ಕೇಂದ್ರದ ಸ್ಪಂದನೆ: ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಗ್ರೀನ್ ಸಿಗ್ನಲ್

17/03/2026 7:18 PM

BMTCಗೆ ರಾಷ್ಟ್ರ ಮಟ್ಟದ ‘ತ್ರಿವಳಿ’ ಪ್ರಶಸ್ತಿ ಗರಿ: ‘ನ್ಯಾಷನಲ್ ಮೊಬೈಲಿಟಿ ಅವಾರ್ಡ್ಸ್-2026’ ಗೌರವ

17/03/2026 7:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.