ಬೆಂಗಳೂರು : ಪ್ರೌಡಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (4)(5)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಪತ್ರಗಳಲ್ಲಿ 1978 ರಿಂದ 2003ರ ವರೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರಿಯು ರಾಜ್ಯದ 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರಾಗಿದ್ದು. 2003ನೇ ಸಾಲಿನಿಂದ ನೇಮಕಾತಿ ಪ್ರಾಧಿಕಾರಿಗಳು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾಗಿರುತ್ತಾರೆ. ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮುಂಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳು 35 ಶೈಕ್ಷಣಿಕ ಜಿಲ್ಲೆಗಳಾಗಿರುವುದರಿಂದ ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಈ ಕಛೇರಿಗೆ ಒದಗಿಸಲು ದಿನಾಂಕಗಳನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.
ಅದರಂತೆ ನಿಗಧಿಪಡಿಸಿದ ದಿನಾಂಕಗಳಂದು ಸಹ ನಿರ್ದೇಶಕರು, ವಿಭಾಗೀಯ ಕಛೇರಿ/ಉಪನಿರ್ದೇಶಕರು ಶೈಕ್ಷಣಿಕ ಜಿಲ್ಲೆಗಳು/ಸಿಬ್ಬಂದಿಗಳು ಈ ಕಛೇರಿಗೆ ಭೇಟಿ ನೀಡಿ, ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2 ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಕ್ರೂಢೀಕರಿಸಲು ಸ್ಪಷ್ಟಿಕರಣವನ್ನು ಪಡೆದಿರುತ್ತಾರೆ. ಯಾವುದೇ ವಿಭಾಗೀಯ ಕಛೇರಿಗಳು/ಜಿಲ್ಲೆಗಳು ಮಾಹಿತಿ ಸಲ್ಲಿಸಿರುವುದಿಲ್ಲ, ನೇರ ನೇಮಕಾತಿ ಮಾಹಿತಿಯನ್ನು 1984 ರಿಂದ ಮುಂಬಡ್ತಿಗಳನ್ನು 1978ರಿಂದ ಮಾಹಿತಿಯನ್ನು ಕ್ಯೂಢೀಕರಿಸಲು ಕಾಲವಕಾಶ ನೀಡುವಂತೆ ಕೋರಿಕೆಗಳನ್ನು ಸಲ್ಲಿಸಿರುತ್ತಾರೆ.