ದಾವಣಗೆರೆ : ದಾವಣಗೆರೆಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಒಪಿಎಸ್ ಮರು ಸ್ಥಾಪನೆ ಸೇರಿ ಹಲವು ನಿರ್ಣಗಳಿಗೆ ಬೆಂಬಲ ಸೂಚಿಸಲಾಗಿದೆ.
ಈ ಕೆಳಕಂಡ ನಿರ್ಣಯಗಳಿಗೆ ಬೆಂಬಲ ಸೂಚಿಸಲಾಗಿದೆ.
NPS ರದ್ದು ಪಡಿಸಿ OPS ಮರುಸ್ಥಾಪನೆಗೆ ಮೊದಲ ಆದ್ಯತೆ ಮೇರೆಗೆ ಯಾವುದೇ ರೀತಿಯ ಹೋರಾಟಕ್ಕೆ ಬೆಂಬಲ.
ನಗದು ರಹಿತ ಚಿಕಿತ್ಸೆ ಆದಷ್ಟು ಬೇಗನೆ ಜಾರಿಗೆ ತರಲು ಒತ್ತಾಯ.
2026ಕ್ಕೆ ಕೇಂದ್ರ ಮಾದರಿ ವೇತನಕ್ಕೆ ಹೋರಾಟ ರೂಪಿಸುವುದು.
ಪ್ರಾಥಮಿಕ ಶಾಲಾ ಶಿಕ್ಷಕರ(PST) C&R ತಿದ್ದುಪಡಿ ಹೋರಾಟಕ್ಕೆ ಬೆಂಬಲಿಸವುದು.
ಬಾಕಿ ಉಳಿದಿರುವ ವೈಧ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಲು ಕ್ರಮ.
ಹಬ್ಬದ ಮುಂಗಡ ಹಣ 25000 ರಿಂದ 50000 ರೂಗಳಿಗೆ ಹೆಚ್ಚಿಸಲು ಕ್ರಮ.
ನಿವೃತ್ತಿ ಸಮಯದ ಗಳಿಕೆ ರಜೆಗಳನ್ನು 300 ರಿಂದ 340 ಕ್ಕೆ ಹೆಚ್ಚಿಸಲು ಕ್ರಮ.
ಮರಣ ಉಪಲಬ್ಧ ಹಣವನ್ನು 15000ಗಳಿಂದ 25000 ಹೆಚ್ಚಿಸುವುದು.
ಕೇಂದ್ರ ಸಂಘದದಿಂದ ಪ್ರತಿ ಜಿಲ್ಲಾ ಶಾಖೆಯು ತಾಲೂಕ ಶಾಖೆಯ ಎಲ್ಲಾ ನೌಕರಿಗೆ ಕ್ಯಾಲೆಂಡರ್ ವಿತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಅಲ್ಲವೇ ಕೇಂದ್ರ ಸಂಘಕ್ಕೆ ಮತ್ತು ಜಿಲ್ಲಾ ಸಂಘಕ್ಕೆ ವಂತಿಗೆ ರೂಪದಲ್ಲಿ ಸಲ್ಲಿಸುವ ಹಣವನ್ನು ಕಡಿತಗೊಳಿಸಿ ತಾಲೂಕ( 200, 150+25+25) ಮಟ್ಟದಲ್ಲಿ ಉಳಿಸಿಕೊಳ್ಳುವ ವಿಷಯಕ್ಕೆ ವಿನಂತಿಸಿಕೊಳ್ಳಲಾಯಿತು.
ಇನ್ನು ಹಲವಾರು ವಿಷಯಗಳ ಕುರಿತು ಚರ್ಚಿಸಿ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರ ಸಂಘ ನೌಕರರ ಪರವಾಗಿ ಸದಾ ಕಾರ್ಯನಿರ್ವಹಿಸುತ್ತಿದೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಭರವಸೆ ನೀಡಿದ್ದಾರೆ.