ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಸೈಬರ್ ಕಮಾಂಡ್ ಘಟಕವನ್ನು (Cyber Command Unit) ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಪತ್ರಗಳಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆಯು ಮಾನವನ ಜೀವನ ಶೈಲಿಯನ್ನು ಅತ್ಯಂತ ಸರಳೀಕರಣಗೊಳಿಸಿದ್ದು, ದೈನಂದಿನ ಜೀವನದಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದಾಗಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ರಾಬರಿ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಸೈಬರ್ ಅಪರಾಧಗಳು ವರದಿಯಾಗುತ್ತಿದ್ದು, ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಪ್ರಕರಣಗಳಾಗಿದ್ದು, ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಒಟ್ಟಾರೆಯಾಗಿ 52,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮಂಚೂಣಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರಾಜ್ಯದಲ್ಲಿ ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ (Cyber Crimes Prevention Unit) ಅನ್ನು ಸೃಜಿಸುವ ಅವಶ್ಯಕತೆ ಕಂಡುಬರುತ್ತದೆಂದು ತಿಳಿಸಿರುತ್ತಾರೆ.
ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 43 ಸಿ.ಇ.ಎನ್ (ಸೈಬರ್, ಎಕನಾಮಿಕ್ಸ್ & ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರುಪದನಾಮೀಕರಿಸಿ ಹಾಗೂ ಪ್ರಸ್ತುತ ಡಿಜಿಪಿ, ಸಿ.ಐ.ಡಿ ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಟ್ಟದ ವ್ಯಾಪ್ತಿಯನ್ನು ಹೊಂದಿರುವ ಸೈಬರ್ ಅಪರಾಧ ಪೊಲೀಸ್ ಠಾಣೆ ಹಾಗೂ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಬೆಂಗಳೂರು ನಗರ ವ್ಯಾಪ್ತಿಯನ್ನು ಒಳಗೊಂಡಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳನ್ನು ಒಟ್ಟಾರೆ 45 ಪೊಲೀಸ್ ಠಾಣೆಗಳನ್ನು ಪ್ರಸ್ತಾಪಿತ ಸೈಬರ್ ಅಪರಾಧ ತಡೆ ಘಟಕದ (Cyber Crimes Prevention Unit) ಅಧೀನಕ್ಕೆ ಒಳಪಡಿಸುವಂತೆ ಕೋರಿರುತ್ತಾರೆ.
ಸಿ.ಇ.ಎನ್ ಪೊಲೀಸ್ ಠಾಣೆಗಳಲ್ಲಿ ಕೆಳಕಂಡ ನಿಯಮ/ಅಧಿನಿಯಮಗಳಡಿಯಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ವಹಿಸಲು ಸರ್ಕಾರದ ಅಧಿಸೂಚನೆಗಳನ್ವಯ ಅಧಿಕಾರ ನೀಡಲಾಗಿದೆ ಎಂದು ತಿಳಿಸಿರುತ್ತಾರೆ:-
1. The Karnataka State Excise Act, 1965 (Karnataka Act, 21 of 1966).
2. The Lotteries Act, 1964 and the Karnataka State Lottery Rules, 1999.
3. The Unlawful Activities Prevention Act, 1967 (Central Act, 37 of 1967).
4. The Karnataka Control of Organized Crime Act, 2000 (Karnataka Act, 1 of 2002).
5. The Information Technology Act, 2000 along with conspiracies and abetment to commit the same.
6. IPC offences of 420, 409, 467, 468, 471, 489 (A-E) wherein amount involved Rs.50 lakhs and above.
7. The Protection of Interest of Depositors in Financial Institution Act, 1999 to the tune of Rs.1.00 Crore and above.
8. Cases under Banning of unregulated Deposits Scheme Act, 2019 (Central Act, 21 of 2019).
9. All cases relating to human trafficking offences under Section 370 IPC.
ಕರ್ನಾಟಕ ರಾಜ್ಯದಲ್ಲಿ “ಸೈಬರ್ ಅಪರಾಧ ತಡೆ ಘಟಕ” (Cyber Crimes Prevention Unit) ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ 193 ವಿವಿಧ ದರ್ಜೆಯ ಹುದ್ದೆಗಳನ್ನು ಸೃಜಿಸಲು ವಾರ್ಷಿಕವಾಗಿ ಅಂದಾಜು ರೂ.12,93,90,307/-ಗಳ ಆವರ್ತಕ ವೆಚ್ಚ ಹಾಗೂ ರೂ.62,25,00,000/-ಅನಾವರ್ತಕ ವೆಚ್ಚ ತಗುಲುವುದಾಗಿ ತಿಳಿಸಿ “ಸೈಬರ್ ಅಪರಾಧ ತಡೆ ಘಟಕ” (Cyber Crimes Prevention Unit) ವನ್ನು ಸ್ಥಾಪಿಸಿ ಮಂಜೂರಾತಿ ನೀಡುವಂತೆ ಕೋರಿರುತ್ತಾರೆ.
ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಯಾವುದೇ ಹೊಸ ಹುದ್ದೆಗಳ ಸೃಜನೆ ಇಲ್ಲದೆ, ಈಗಾಗಲೇ ಇರುವ ಹುದ್ದೆಗಳನ್ನು ಬಳಸಿಕೊಂಡು ಮತ್ತು ಹೆಚ್ಚಿನ ಆರ್ಥಿಕ ಹೊರೆ ಇಲ್ಲದೇ ರಾಜ್ಯದಲ್ಲಿ ಹೊಸದಾಗಿ ಸೈಬರ್ ಕಮಾಂಡ್ ಘಟಕವನ್ನು ಸ್ಥಾಪಿಸುವುದು ಸೂಕ್ತವೆಂದು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಸೈಬರ್ ಕಮಾಂಡ್ ಘಟಕ (Cyber Command Unit)ವನ್ನು ಕೆಳಕಂಡಂತೆ ಸ್ಥಾಪಿಸಿ ಆದೇಶಿಸಿದೆ:-
1) ಸಿಐಡಿ ವಿಭಾಗದಲ್ಲಿನ ಡಿಜಿಪಿ, ಮಾದಕ ವಸ್ತು ಮತ್ತು ಸೈಬರ್ ಅಪರಾಧ ಹುದ್ದೆಯನ್ನು ಬೇರ್ಪಡಿಸಿ, ಡಿ.ಜಿ., ಸೈಬರ್ ಕಮಾಂಡ್ ಎಂದು ಪದನಾಮೀಕರಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದೆ.
2) ಸೈಬರ್ ಕಮಾಂಡ್ ಘಟಕವು ಈಗಾಗಲೇ ಅಸ್ತಿತ್ವದಲ್ಲಿರುವ ಹುದ್ದೆಗಳು, ಕಾರ್ಯನಿರ್ವಹಿಸುತ್ತಿರುವ ಕಛೇರಿ ಹಾಗೂ ಮೂಲಸೌಕರ್ಯಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದೆ.