ಮುಂಬೈ : ಮಹಾರಾಷ್ಟ್ರ ಕಾಂಗ್ರೆಸ್ ಎಂಎಲ್ ಸಿ ಭಾಯಿ ಜಗತಾಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗವನ್ನು ‘ನಾಯಿ ಇದ್ದಂತೆ’ ಎಂದು. ಚುನಾವಣಾ ಆಯೋಗ ಮತ್ತು ಎಲ್ಲಾ ಸಂಸ್ಥೆಗಳು ನರೇಂದ್ರ ಮೋದಿಯವರ ಬಂಗಲೆಯ ಹೊರಗೆ ನಾಯಿಗಳಂತೆ ಕುಳಿತಿವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು 45-47 ವರ್ಷ ರಾಜಕೀಯದಲ್ಲಿ ಕಳೆದಿದ್ದೇನೆ. ಮಹಾರಾಷ್ಟ್ರದಲ್ಲಿ ಅಂತಹ ಫಲಿತಾಂಶಗಳು… ಅವರು (ಮಹಾಯುತಿ) ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ, ಅಥವಾ ಕೇಂದ್ರವು ಯಾವುದೇ ಕೆಲಸವನ್ನು ಮಾಡಿಲ್ಲ. ನಾಲ್ಕಾರು ತಿಂಗಳ ಹಿಂದೆ ಲೋಕಸಭೆ ದಿನಾಂಕ ಘೋಷಣೆಯಾಗಿದೆ. ಇದು ಇವಿಎಂಗಳ ಆಟ ಎಂದು ನಾನು ಮೊದಲೇ ಹೇಳಿದ್ದೇನೆ, ಅದರ ಬಗ್ಗೆ ಏನಾದರೂ ಪ್ರಶ್ನೆ ಉದ್ಭವಿಸಿದರೆ ಅದನ್ನು ಆಯೋಗ ಮತ್ತು ಸರ್ಕಾರಕ್ಕೆ ನಾಳೆ ಚರ್ಚಿಸಬೇಕು ಎಂದು ಹೇಳಿದ್ದಾರೆ.
Mumbai: Congress leader and MLC Bhai Jagtap on Maharashtra Election results says, "(Election Commission toh Kutta hai) The Election Commission is like a dog, acting as a dog, sitting outside Narendra Modi ji's bungalow. All the agencies that were created to strengthen our… pic.twitter.com/EMgFlX6jJm
— IANS (@ians_india) November 29, 2024
ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಎಲ್ಲಾ ಸಂಸ್ಥೆಗಳ ಕೆಲಸವಾಗಿದೆ, ದುರದೃಷ್ಟವಶಾತ್ ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ‘ಘಟನೆಗಳು’ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.