ಬೆಂಗಳೂರು : ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English Language Enrichment Course (ELEC) ಜಿಲ್ಲಾ ಹಂತದ ತರಬೇತಿಯನ್ನು ಆಯೋಜಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English Language Enrichment Course (ELEC) ಆಯೋಜಿಸಲು ಅಗತ್ಯವಾಗಿರುವ 102 Mentors (MRP)ಗಳಿಗೆ ರಾಜ್ಯದ 34 ಜಿಲ್ಲೆಗಳ ಡಯಟ್ ನ ELEC ನೋಡಲ್ ಅಧಿಕಾರಿಗಳು (01), ಪ್ರಾಥಮಿಕ ಶಾಲಾಶಿಕ್ಷಕರು (01) ಹಾಗೂ ಸಿ.ಆರ್.ಪಿ (01) ಒಟ್ಟು ಪ್ರತಿ ಜಿಲ್ಲೆಯಿಂದ ಮೂರು (03) ಸಂಪನ್ಮೂಲ ವ್ಯಕ್ತಿಗಳಿಗೆ 09 ವಾರಗಳ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ
ಮುಂದುವರೆದು ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಬೆಂಗಳೂರು ರವರ Mentors ತರಬೇತಿಯನ್ವಯ ಆಯಾ ಜಿಲ್ಲೆಗಳ 03 ಮಾರ್ಗದರ್ಶಕರ(Mentors) ಸಹಯೋಗದೊಂದಿಗೆ Week-1 ಮುಖಾಮುಖಿ ತರಬೇತಿ ಮತ್ತು ವಬಿನಾರ್ಳನ್ನು ಉಲ್ಲೇಖ-3 ರನ್ವಯ ಆಯೋಜಿಸಲಾಗಿದೆ.
ಸರ್ಕಾರದ ಆದೇಶದಂತೆ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಲು ಸಾಧ್ಯವಾಗದ ಕಾರಣದಿಂದ ದಿ: 04-08-2025 ರಿಂದ 08-08-2025 ರವರೆಗೆ ಆಯೋಜಿಸಬೇಕಾಗಿದ್ದ week-9 ಮುಖಾಮುಖಿ ತರಬೇತಿಯನ್ನು ಮುಂದೂಡಲಾಗಿತ್ತು. ಸದರಿ week-9 ಮುಖಾಮುಖಿ ತರಬೇತಿಯನ್ನು ದಿ-24-11-2025 ರಿಂದ 28-11-2025 ರವರೆಗೆ ಆಯೋಜಿಸಲು ಸೂಚಿಸಿದೆ.
Week – 9 ಮುಖಾಮುಖಿ ತರಬೇತಿಯನ್ನು ಆಯೋಜಿಸಲು ದಿನಾಂಕ: 09-05-2025 ರ ಈ ಕಛೇರಿ ಜ್ಞಾಪನ ಪತ್ರದ ಅನುಬಂಧ-1 ರಂತೆ ಜಿಲ್ಲಾವಾರು week-1 ಮತ್ತು week-9 ಮುಖಾಮುಖಿ ತರಬೇತಿಗೆ ಅನುದಾನ ಬಿಡುಗಡೆಮಾಡಲಾಗಿತ್ತು. ಸದರಿ ಅನುದಾನವನ್ನು ಬಳಸಿ, ದಿನಾಂಕ: 09-05-2025 ರ ಈ ಕಛೇರಿ ಜ್ಞಾಪನ ಪತ್ರದನ್ವಯ ಘಟಕ ವೆಚ್ಚ ರೂ.290/- ರಂತೆ ಮಾದರಿ ಬ್ರೇಕ್ಅಪ್ ಅನುಗುಣವಾಗಿ ತರಬೇತಿಯನ್ನು ಪೂರ್ಣಗೊಳಿಸಲು ಸೂಚಿಸಿದೆ.
ತರಬೇತಿಯ ವಿವಿಧ ಹಂತಗಳಲ್ಲಿ ಅನುಸರಿಸಬೇಕಾದ ಕ್ರಮಗಳು.
1. ದಿ-24-11-2025 ರಿಂದ 28-11-2025 ರವರೆಗೆ ಶಿಕ್ಷಕರ Week-9,( ಮುಖಾಮುಖಿ ( F2F) ತರಬೇತಿಯನ್ನು ಆಯೋಜಿಸುವುದು.
2. ರಾಜ್ಯದ 34 ಜಿಲ್ಲೆಗಳಿಂದ ಒಟ್ಟು 1125 ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸುವುದು. (ಅನುಮೋದಿತ ಕ್ರಿಯೋಜನೆಯಲ್ಲಿ ಉಲ್ಲೇಖಿಸಿರುವಂತೆ)
3. ಅಜೀಂ ಪ್ರೇಮ್ ಜೀ ವಿಶ್ವ ವಿದ್ಯಾನಿಲಯದ ಉಪನ್ಯಾಸಕರು ಹಾಗೂ ಡಿ.ಎಸ್.ಇ.ಆರ್.ಟಿ. ಕಛೇರಿಯ ಅಧಿಕಾರಿಗಳಿಂದ ಜಿಲ್ಲಾ ಹಂತದ ತರಬೇತಿಯ ಭೇಟಿ ಮತ್ತು ಅನುಪಾಲನೆ ನಿರ್ವಹಿಸಲಾಗುತ್ತದೆ.
4. ಶುದ್ದ ಕುಡಿಯುವ ನೀರನ್ನು ಒದಗಿಸುವುದು ಮತ್ತು ಶೌಚಾಲಯಗಳ ಶುಚಿತ್ವವನ್ನು ಕಾಪಾಡುವುದು.
5. ನಿರೀಕ್ಷಿತ ಎಲ್ಲಾ ಕಾರ್ಯಗಳಿಗೆ ತಗುಲುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಬ್ರೇಕ್ಅಪ್ ಅನ್ನು ಮಾಡಿಕೊಳ್ಳುವುದು.(ಮಾದರಿ ಬ್ರೇಕ್ ಅಪ್ ಅನುಗುಣವಾಗಿ)
6. ಘಟಕ ವೆಚ್ಚ ರೂ. 290 /- ರಂತೆ ಆಂತರಿಕ ಹೊಂದಾಣಿಕೆ ಮೂಲಕ ಖರ್ಚುವೆಚ್ಚ ಭರಿಸುವುದು.









