ಬೆಂಗಳೂರು : ಇಇ.ಡಿ.ಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರವನ್ನು ಸರಿಯಾಗಿ ಇಂದೀಕರಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯದನ್ವಯ ಹಾಗೂ ಉಲ್ಲೇಖ 1 ಮತ್ತು 2 ಕ್ಕೆ ಸಂಬಂಧಿಸಿದಂತೆ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಎಲ್ಲಾ ನೌಕರರ ಸೇವಾ ವಿವರವನ್ನು ತಪ್ಪಿಲ್ಲದಂತೆ ಡಿ.ಡಿ.ಓಗಳು ಇಂದೀಕರಿಸಲು ಉಲ್ಲೇಖಿತ ಜ್ಞಾಪನ ಹಾಗೂ ಈ ಕಛೇರಿಯಿಂದ ನಡೆಸುತ್ತಿದ್ದ VC ಸಭೆಗಳಲ್ಲಿ ಕೂಡ ತಿಳಿಸಲಾಗಿತ್ತು ಉಲ್ಲೇಖ 3 ರಂತೆ ದಿನಾಂಕ:22.08.2025ರಂದು ಅಂತಿಮವಾಗಿ ಇ.ಇ.ಡಿಎಸ್ ನಲ್ಲಿ ಇದ್ದಂತ ನೌಕರರ ಮಾಹಿತಿಯನ್ನು ವರ್ಗಾವಣೆಗೆ ಸಂಯೋಜಿಸುತ್ತಿದ್ದು ಈ ದಿನಾಂಕದ ನಂತರ ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸುವ ಯಾವುದೇ ಶಿಕ್ಷಕರ ಸೇವಾ ಮಾಹಿತಿಯನ್ನು ವರ್ಗಾವಣೆಗೆ ಪರಿಗಣಿಸುವುದಿಲ್ಲ ಹಾಗೂ ಶಿಕ್ಷಕರ ವರ್ಗಾವಣೆಯಲ್ಲಿ ಇ.ಇ.ಡಿ.ಎಸ್ ನಲ್ಲಿರುವ ಸೇವಾ ವಿವರಕ್ಕೆ ಸಂಬಂದಿಸಿದಂತೆ ಯಾವುದೇ ನೌಕರರಿಗೆ ಸಮಸ್ಯೆಗಳಾದಲ್ಲಿ ಡಿ.ಡಿ.ಓಗಳು ನೇರಹೊಣೆಗಾರರೆಂದು ತಿಳಿಸಿದೆ.