Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM

BREAKING : ಮಹಿಳಾ ವಿಶ್ವಕಪ್, ಆಸ್ಟ್ರೇಲಿಯಾ ಏಕದಿನ ಪಂದ್ಯಗಳಿಗೆ 15 ಸದಸ್ಯರ ಬಲಿಷ್ಠ ಭಾರತ ತಂಡ ಪ್ರಕಟ

19/08/2025 4:20 PM

BREAKING: ಧರ್ಮಸ್ಥಳ ಕೇಸ್: ‘SIT ತನಿಖೆ’ ಸ್ವಾಗತಿಸಿದ ‘ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ’

19/08/2025 4:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `SATS’ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ `ಆಧಾರ್’ ಮೌಲೀಕರಣ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
KARNATAKA

BIG NEWS : `SATS’ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ `ಆಧಾರ್’ ಮೌಲೀಕರಣ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

By kannadanewsnow5723/01/2025 5:53 AM

ಬೆಂಗಳೂರು : SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಸಂಬಂಧಿಸಿದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 2 ವರ್ಷಗಳಿಂದ SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದುವರೆಗೂ ರಾಜ್ಯದಲ್ಲಿ ಒಟ್ಟಾರೆ 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕಣ ಮಾತ್ರ ಯಶಸ್ವಿಯಾಗಿ ಪೂರ್ಣಗೊಂಡಿರುತ್ತದೆ, 18 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಇದುವರೆಗೂ ತಂತ್ರಾಂಶದಲ್ಲಿ ಮೌಲೀಕರಿಸಲಾಗಿರುವುದಿಲ್ಲ. ಹಾಗೂ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಲಾಗಿದ್ದರು ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ತಾಳೆಯಾಗದ ಕಾರಣ ಮೌಲೀಕರಣ ವಿಫಲವೆಂದು ಪರಿಗಣಿಸಲಾಗಿದೆ. ಈ ಅಂತರವನ್ನು ಪೂರ್ಣಗೊಳಿಸಲು ಉಲ್ಲೇಖ-4 ರ ಈ ಕಚೇರಿಯ ಸುತ್ತೋಲೆಯಲ್ಲಿ ಶಾಲೆಗಳಲ್ಲಿ ವಿಶಿಷ್ಟ ಆಧಾ‌ರ್ ಶಿಬಿರಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿರುತ್ತದೆ.

ಇದುವರೆಗೂ ಒಟ್ಟಾರೆ 26 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ತಂತ್ರಾಂಶದಲ್ಲಿ ಬಾಕಿಯಿರುವುದರಿಂದ, ವಿವಿಧ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಇತರೆ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯುಂಟಾಗುತ್ತಿದೆ. ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ವಿಳಂಬವಾಗಿರುವುದು ಇಲಾಖೆಗೆ ವಿವಿಧ ಸಂದರ್ಭಗಳಲ್ಲಿ ಮುಜುಗರ ಉಂಟಾಗಿರುತ್ತದೆ. ಆದ್ದರಿಂದ ಇದಕ್ಕೆ ಕಾರಣವಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪರಿಗಣಿಸಲಾಗಿದೆ. ಕೊನೆಯ ಅವಕಾಶವಾಗಿ ಇಂದಿನಿಂದ ಮುಂದಿನ 7 ದಿನಗಳವರೆಗೆ ಅವಕಾಶ ನೀಡಿ ಈ ಕೆಳಗಿನಂತೆ ತುರ್ತಾಗಿ ಕ್ರಮವಹಿಸಲು ಆದೇಶಿಸಿದೆ.

V

ಕೈಗೊಳ್ಳಬೇಕಾದ ಕ್ರಮಗಳು :

1. ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ SATS ತಂತ್ರಾಂಶದ ಅನುಸಾರ ದಾಖಲಾಗಿರುವ ಒಟ್ಟು ಮಕ್ಕಳಲ್ಲಿ ಆಧಾ‌ರ್ ಮೌಲೀಕರಣವಾಗಿರುವ ಮಾಹಿತಿಯನ್ನು ಪರಿಶೀಲಿಸುವುದು.
2. ಇದುವರೆಗೂ ಆಧಾರ್ ಮೌಲೀಕರಣ ಆಗದಿರುವ ವಿದ್ಯಾರ್ಥಿಗಳ ಶಾಲಾವಾರು, ವಿದ್ಯಾರ್ಥಿವಾರು ಪರಿಶೀಲಿಸುವುದು.

3. ಪರಿಶೀಲಿಸಿದ ವಿದ್ಯಾರ್ಥಿಗಳಿಗೆ ಆಧಾರ್ ಇದ್ದು SATS ತಂತ್ರಾಂಶದಲ್ಲಿ ಮೌಲೀಕರಣ ಆಗದೇ ಇದ್ದಲ್ಲಿ, ವಿದ್ಯಾರ್ಥಿಯ ಆಧಾರ್ ಮಾಹಿತಿಯನ್ನು ಪೋಷಕರಿಂದ ಪಡೆದು ತುರ್ತಾಗಿ SATS ತಂತ್ರಾಂಶದಲ್ಲಿ ಮೌಲೀಕರಣ ಮಾಡುವುದು.

4. ನಂತರ ಆಧಾರ್ ಮೌಲೀಕರಣ ಬಾಕಿಯಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾವಾರು, ತಾಲ್ಲೂಕವಾರು, ಶಾಲಾವಾರು ಪಟ್ಟಿ ಮಾಡುವುದು, ಪಟ್ಟಿ ಮಾಡಲಾದ ಮಾಹಿತಿಯನ್ನು EDCS ಸಂಸ್ಥೆಯಿಂದ ರಚಿಸಲಾಗುವ ತಂಡಕ್ಕೆ ಸಲ್ಲಿಸಿ ಸದರಿ ರವರೊಂದಿಗೆ ಸಮನ್ವಯಿಸಿ ಅತೀ ಹೆಚ್ಚು ಬಾಕಿಯಿರುವ ಶಾಲೆಗಳಲ್ಲಿ ವಿಶೇಷ ಆಧಾರ್ ಶಿಬಿರ ಹಮ್ಮಿಕೊಳ್ಳುವುದು. (ಸದರಿ ಕಾರ್ಯಕ್ಕೆ ಒಬ್ಬ ಇಲಾಖೆಯ ನೋಡಲ್ ಅಧಿಕಾರಿಯನ್ನು ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಸಮನ್ಯಹಿಸಲು ರಚಿಸುವುದು)

5. ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಿಯೂ ಆಧಾರ್ ಮತ್ತು SATS ನಲ್ಲಿ ಹೆಸರು ತಾಳೆಯಾಗದೆ ಮೌಲೀಕರಣ ವಿಫಲವಾದ ಪ್ರಕರಣಗಳಲ್ಲಿ ಈ ಕೆಳಕಂಡಂತೆ ಕ್ರಮವಹಿಸುವುದು.

1. ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಯ ಹೆಸರನ್ನು SATS ತಂತ್ರಾಂಶದಲ್ಲಿ ತಿದ್ದುಪಡಿ ಮಾಡಬೇಕಾದ ಕುರಿತು.

ಇಂತಹ ಪ್ರಕರಣಗಳಲ್ಲಿ ಆಧಾರ್‌ನಲ್ಲಿರುವಂತೆ SATS ತಂತ್ರಾಂಶದಲ್ಲಿ ವಿದ್ಯಾರ್ಥಿಯ ಹೆಸರು ಇಂಧೀಕರಣ ಮಾಡುವ ಕುರಿತು ಪೋಷಕರಿಂದ ಒಪ್ಪಿಗೆಯನ್ನು (ಸ್ವಯಂ ಘೋಷಿತ ದೃಢೀಕರಣ) ಪಡೆದು ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಯ ಹೆಸರನ್ನು SATS ತಂತ್ರಾಂಶದಲ್ಲಿ ಶಾಲಾ ಮುಖ್ಯ ಶಿಕ್ಷಕರು ಇಂದೀಕರಿಸುವುದು. (ನಮೂನೆಯನ್ನು ಲಗತ್ತಿಸಿದೆ). ನಂತರ ಉಲ್ಲೇಖ-5 ರ ಸರ್ಕಾರದ ಸುತ್ತೋಲೆಯಂತೆ ಸಂಬಂಧಿಸಿದ ಶಾಲಾ ದಾಖಲಾತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು.

ತಿದ್ದುಪಡಿಯಾದ ನಂತರ ತಪ್ಪದೇ SATS ತಂತ್ರಾಂಶದಲ್ಲಿ ಮತ್ತು ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಲಾಗಿನ್ನಲ್ಲಿ ವಿದ್ಯಾರ್ಥಿಯ ಆಧಾರ್ ಮೌಲೀಕರಣವನ್ನು ಪೂರ್ಣಗೊಳಿಸುವುದು

2. ಶಾಲೆಯ ದಾಖಲೆಗಳಲ್ಲಿ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ಸರಿಯಿದ್ದು ಆಧಾರ್‌ನಲ್ಲಿ ತಿದ್ದುಪಡಿ ಮಾಡಬೇಕಾದ ಕುರಿತು.

ಇಂತಹ ಪ್ರಕರಣಗಳಲ್ಲಿ UIDAI/ಆಧಾರ್ ಸ್ವೀಕಾರಾರ್ಹ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ನಲ್ಲಿ ವಿದ್ಯಾರ್ಥಿಯ ಹೆಸರನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು.

3. ವಿದ್ಯಾರ್ಥಿವೇತನ ಬಗ್ಗೆ SSP ತಂತ್ರಾಶದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ :

1. Designation of Institute Nodal Officers (INO) ನೇಮಕ ಮಾಡಿ SSP Portal Login ನ Access ನೀಡಲಾಗಿರುತ್ತದೆ

2. INO ಲಾಗಿನ್ ಸೃಜನೆಗೆ ಸಂಬಂಧಿಸಿದಂತೆ ಹಾಗೂ eKYC, Biometric ಪೂರ್ಣಗೊಳಿಸುವ ಪ್ರಕ್ರಿಯೆ ಬಗ್ಗೆ, ಶಾಲಾ ಮುಖ್ಯ ಶಿಕ್ಷಕರು ತಾಲ್ಲೂಕು ಹಂತದ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

3. INO ಲಾಗಿನ್‌ನಲ್ಲಿ SATS ದತ್ತಾಂಶದನ್ವಯ ಆಯಾ ಶಾಲೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಒದಗಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, SSP ID (ವಿದ್ಯಾರ್ಥಿಯು ಈಗಾಗಲೇ SSP ಯಲ್ಲಿ ಖಾತೆಯನ್ನು ಸೃಜಿಸಿದ್ದಲ್ಲಿ). Application Submitted (Yes/No) (ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಕೆಯಾಗಿದ್ದಲ್ಲಿ). Aadhar Seeding Status ಮುಂತಾದ ವಿವರಗಳನ್ನು ಒದಗಿಸಲಾಗಿರುತ್ತದೆ.

INO ಲಾಗಿನ್‌ನಲ್ಲಿ ಕೈಗೊಳ್ಳಬೇಕಾದ ಕ್ರಮ :

1. INO ಲಾಗಿನ್‌ನಲ್ಲಿ SATS ದತ್ತಾಂಶದನ್ವಯ ಆಯಾ ಶಾಲೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಒದಗಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, SSP ID (ವಿದ್ಯಾರ್ಥಿಯು ಈಗಾಗಲೇ SSP ಯಲ್ಲಿ ಖಾತೆಯನ್ನು ಸೃಜಿಸಿದ್ದಲ್ಲಿ). Application Submitted (Yes/No) (ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಕೆಯಾಗಿದ್ದಲ್ಲಿ), Aadhar Seeding Status ಮುಂತಾದ ವಿವರಗಳನ್ನು ಒದಗಿಸಲಾಗಿರುತ್ತದೆ.

2. INO ಲಾಗಿನ್ ನಲ್ಲಿ ಒದಗಿಸಲಾದ ಪಟ್ಟಿಯಲ್ಲಿ ಯಾವುದಾದರೂ ವಿದ್ಯಾರ್ಥಿಯ ಹೆಸರು ಬಿತ್ತರವಾಗದೇ ಇದ್ದಲ್ಲಿ ಸದರಿ ಸಮಸ್ಯೆಯನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು SATS ನಲ್ಲಿ ನಮೂದು ಮಾಡಲು ಹಾಗೂ SSP Portal ನಲ್ಲಿ ಅಳವಡಿಸಲು ಕ್ರಮವಹಿಸುವುದು. ಈ ಪ್ರಕ್ರಿಯೆಗೆ ಸಂಬಂಧಪಟ್ಟ ಶಾಲೆಯ Institute Nodal Officer (INO) ಅಧಿಕಾರಿಯು ಖುದ್ದು ನಿರ್ವಹಿಸಬೇಕಾಗಿರುತ್ತದೆ.

3. INO ಲಾಗಿನ್ ನಲ್ಲಿ ಒದಗಿಸಲಾದ ಪಟ್ಟಿಯಲ್ಲಿ ವಿದ್ಯಾರ್ಥಿಯು ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಸದೇ ಇದ್ದಲ್ಲಿ ಸದರಿ ವಿದ್ಯಾರ್ಥಿಯ ವಿದ್ಯಾರ್ಥಿವೇತನ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗೆ ಅಥವಾ ವಿದ್ಯಾರ್ಥಿಯ ಪೋಷಕರಿಗೆ ತಿಳಿಸುವುದು ಸಾಧ್ಯವಾದಲ್ಲಿ ವಿದ್ಯಾರ್ಥಿಯ ಒಮ್ಮತಿಮೇರೆಗೆ ಅಗತ್ಯ ಮಾಹಿತಿಯನ್ನು ಪಡೆದು ತಮ್ಮ ಲಾಗಿನ್ ಮೂಲಕವು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕ್ರಮವಹಿಸುವುದು.

4. INO Aadhar Seeding Status ಒದಗಿಸಲಾಗಿರುತ್ತದೆ. ವಿದ್ಯಾರ್ಥಿಯ ಆಧಾರ್ ಜೋಡಣೆಯಾಗದೇ ಇದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‌ನಲ್ಲಿ ಆಧಾರ್ ಜೋಡಣೆ ಮಾಡಿಸುವ ಸಂಬಂಧ ವಿದ್ಯಾರ್ಥಿಯ ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಹತ್ತಿರದ ಅಂಚೆ ಕಛೇರಿ ಅಧಿಕಾರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಸಲುವಾಗಿ 1PPB ಖಾತೆಯನ್ನು ತೆರೆಯುವಂತೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಂತೆ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸುವುದು.

ಉಲ್ಲೇಖ-3 ರ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ, ಇದುವರೆಗೂ 2.6 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೆ ಬಾಕಿಯಿರುವ ಕುರಿತು ಪ್ರಸ್ತಾಪಿಸಲಾಗಿರುತ್ತದೆ, ಈ ಪಟ್ಟಿಯು Institute Nodal Officers (INO) ಗಳ SSP Portal Login ನಲ್ಲಿ ಲಭ್ಯವಿರುತ್ತದೆ. ಆದ್ದರಿಂದ ರಾಜ್ಯದ ಎಲ್ಲಾ ಶಾಲೆಯ Institute Nodal Officers (INO) / ಮುಖ್ಯ ಶಿಕ್ಷಕರಿಗೆ ತಮ್ಮಲಾಗಿನ್ ಅನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಯ ಪೋಷಕರಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸೂಕ್ತ ಮಾರ್ಗದರ್ಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿ, ಮುಂದಿನ 7 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ.

 

BIG NEWS : `SATS' ತಂತ್ರಾಂಶದಲ್ಲಿ ವಿದ್ಯಾರ್ಥಿಗಳ `ಆಧಾರ್' ಮೌಲೀಕರಣ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.! BIG NEWS: EDUCATION DEPARTMENT ISSUES ORDER TO VALIDATE AADHAAR OF STUDENTS IN SATS SOFTWARE
Share. Facebook Twitter LinkedIn WhatsApp Email

Related Posts

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM1 Min Read

BREAKING: ಧರ್ಮಸ್ಥಳ ಕೇಸ್: ‘SIT ತನಿಖೆ’ ಸ್ವಾಗತಿಸಿದ ‘ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ’

19/08/2025 4:18 PM1 Min Read

BREAKING: ಧರ್ಮಸ್ಥಳ ಕೇಸ್: ವೀರೇಂದ್ರ ಹೆಗಡೆ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:11 PM1 Min Read
Recent News

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM

BREAKING : ಮಹಿಳಾ ವಿಶ್ವಕಪ್, ಆಸ್ಟ್ರೇಲಿಯಾ ಏಕದಿನ ಪಂದ್ಯಗಳಿಗೆ 15 ಸದಸ್ಯರ ಬಲಿಷ್ಠ ಭಾರತ ತಂಡ ಪ್ರಕಟ

19/08/2025 4:20 PM

BREAKING: ಧರ್ಮಸ್ಥಳ ಕೇಸ್: ‘SIT ತನಿಖೆ’ ಸ್ವಾಗತಿಸಿದ ‘ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ’

19/08/2025 4:18 PM

BREAKING: ಧರ್ಮಸ್ಥಳ ಕೇಸ್: ವೀರೇಂದ್ರ ಹೆಗಡೆ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:11 PM
State News
KARNATAKA

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

By kannadanewsnow0919/08/2025 4:32 PM KARNATAKA 1 Min Read

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಹೀಗಾಗಿ ಬೆಂಗಳೂರು ನಗರ ವಿವಿ, ಇನ್ಮುಂದೆ ಡಾ.ಮನಮೋಹನ್…

BREAKING: ಧರ್ಮಸ್ಥಳ ಕೇಸ್: ‘SIT ತನಿಖೆ’ ಸ್ವಾಗತಿಸಿದ ‘ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ’

19/08/2025 4:18 PM

BREAKING: ಧರ್ಮಸ್ಥಳ ಕೇಸ್: ವೀರೇಂದ್ರ ಹೆಗಡೆ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:11 PM

BREAKING: ಇಂದು ಸಂಜೆ 5ಕ್ಕೆ ನಡೆಯಬೇಕಿದ್ದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ 7.30ಕ್ಕೆ ಮುಂದೂಡಿಕೆ

19/08/2025 4:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.