ಬೆಂಗಳೂರು : ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳ ತರಬೇತಿ ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳು ಪ್ರತಿಕೂಲ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಸಾಮಾರ್ಥ್ಯವನ್ನು ಹೊಂದಿರಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳನ್ನು ಬೆಳೆಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ.
2024-25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ಪ್ರತಿ ಶಾಲೆಗೆ ಘಟಕ ವೆಚ್ಚ ರೂ.9000/-ರಂತೆ ಒಟ್ಟು 5419 ಶಾಲೆಗಳಿಗೆ ಒಟ್ಟು ರೂ.487.71 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.
ಉದ್ದೇಶಗಳು:
* ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಅಭಿವೃದ್ಧಿ ಪಡಿಸುವುದು.
ವಿದ್ಯಾರ್ಥಿನಿಯರಲ್ಲಿ ಸ್ವರಕ್ಷಣಾ ಕೌಶಲ್ಯಗಳನ್ನು ಬೆಳೆಸಿ, ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು.
ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸ ಕೈಗೊಳ್ಳುವಂತೆ ಪ್ರೇರೇಪಿಸುವುದು.
ಅನುಷ್ಠಾನ ಮತ್ತು ನಿರ್ವಹಣೆ
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸ್ಥಳೀಯ ಸ್ವರಕ್ಷಣಾ ಕೌಶಲ್ಯಗಳ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ಮುಖ್ಯೋಪಾಧ್ಯಾಯರ/ದೈಹಿಕ ಶಿಕ್ಷಣ ಶಿಕ್ಷಕರ ನೇತೃತ್ವದಲ್ಲಿ ತರಬೇತಿ ನೀಡುವುದು.
ಶಾಲಾ ಮುಖ್ಯೋಪಾಧ್ಯಾಯರು ಅಕ್ಟೋಬರ್ ಮಾಹೆಯ ಕೊನೆಯ ವಾರದೊಳಗೆ ಅರ್ಹ ತರಬೇತುದಾರರನ್ನು ಆಯ್ಕೆ ಮಾಡಿಕೊಂಡು ಎಸ್‌ಡಿಎಂಸಿ ಸಭೆಯಲ್ಲಿ ಕರೆಸಿ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರ ಹಿತರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ಸ್ವ-ರಕ್ಷಣಾ ತರಬೇತಿಯನ್ನು ಯಾವುದೇ ರೀತಿಯ ದೂರು ಬಾರದಂತ ಪರಿಣಾಮಕಾರಿಯಾಗಿ ಮಕ್ಕಳಿಗೆ ತರಬೇತಿ ನೀಡುವಂತೆ ಮಾರ್ಗದರ್ಶನ ನೀಡುವುದು.
ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಪರೀಕ್ಷೆಯನ್ನು ಸ್ಥಳೀಯ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಿ, ಅನಾರೋಗ್ಯ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವುದು.
ಪಠ್ಯ ವಿಷಯ ಬೋಧನೆ ಹಾಗೂ ಕಲಿಕೆಗೆ ತೊಂದರೆಯಾಗದಂತ ಅನುಬಂಧ-01ರಲ್ಲಿ ನೀಡಿರುವ ಕೌಶಲಗಳನ್ನು ತರಬೇತಿ ನೀಡಲು ವೇಳಾಪಟ್ಟಿಯಲ್ಲಿ ಅವಧಿಗಳ ಹಂಚಿಕೆ ಮಾಡಿ ತರಬೇತುದಾರರಿಗೆ ನೀಡುವುದು.
ಶಾಲೆಗಳಲ್ಲಿ ಸ್ವರಕ್ಷಣಾ ತರಬೇತಿ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವುದು. ದೈಹಿಕ ಶಿಕ್ಷಕರು ಮಕ್ಕಳಿಗೆ ( ಸ್ವರಕ್ಷಣಾ ತರಬೇತಿ ನೀಡುವ ಸಂದರ್ಭದಲ್ಲಿ ಸಕ್ರಿಯವಾಗಿ ಹಾಜರಿರತಕ್ಕದ್ದು.
ದೈಹಿಕ ಶಿಕ್ಷಣ, ಸಂಗೀತ, ಕರಕುಶಲ, ಚಿತ್ರಕಲೆ ಇತ್ಯಾದಿ ವಿಷಯಗಳಿಗೆ ನಿಗಧಿಪಡಿಸಿರುವ ಅವಧಿಗಳನ್ನು ಬಳಸಿಕೊಂಡು ತರಬೇತಿಯನ್ನು ನೀಡಲು ಅವಕಾಶ ಕಲ್ಪಿಸುವುದು.
* ವಿದ್ಯಾರ್ಥಿನಿಯರ ಸ್ವರಕ್ಷಣಾ ಚಟುವಟಿಕೆ ಪೂರ್ಣಗೊಂಡ ನಂತರ ನಷ್ಟವಾಗಿರುವ ವಿಷಯಗಳ ಬೋಧನೆಯನ್ನು ವಿಶೇಷ ತರಗತಿಗಳನ್ನು ನಡೆಸಿ ಸರಿದೂಗಿಸುವುದು.
ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವಾಗ ಬಾಲಕರಿಗೆ ಬೇರೆ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಶಾಲೆಗಳ ಮುಖ್ಯ ಶಿಕ್ಷಕರು ತರಬೇತುದಾರರ ಹಾಜರಾತಿ ಹಾಗೂ ಸಂಭಾವನೆ ನೀಡಿದ ಮಾಹಿತಿಯನ್ನು ಶಾಲೆಗಳಲ್ಲಿ ನಿರ್ವಹಿಸುವುದು.
ತರಬೇತುದಾರರು ತರಬೇತಿ ನೀಡಿದ ಬಗ್ಗೆ ಫೋಟೋ ಸಹಿತ ವರದಿಯನ್ನು ಮುಖ್ಯ ಶಿಕ್ಷಕರಿಗೆ ನೀಡುವುದು.
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನೆಗೊಳಿಸಿ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕ್ರಮ ವಹಿಸುವುದು ಮುಖ್ಯ ಶಿಕ್ಷಕರ ಅಧ್ಯ ಕರ್ತವ್ಯವಾಗಿದೆ.
ಅನುದಾನದ ನಿರ್ವಹಣೆ – ತರಬೇತುದಾರರ ಗೌರವ ಧನ
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ನವೆಂಬರ್ 2024 ರಿಂದ ಕರಾಟೆ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ನೀಡುವುದು. ತರಬೇತುದಾರರಿಗೆ ಎಲ್ಲಾ ವೆಚ್ಚಗಳು ಸೇರಿ ಪ್ರತಿ ಶಾಲೆಗೆ ರೂ.9000/-ಗಳನ್ನು ಗೌರವ ಧನವಾಗಿ ನಿಗದಿಪಡಿಸಲಾಗಿದೆ. ಈ ಅನುದಾನವನ್ನು ತರಬೇತಿದಾರರಿಗೆ ನೀಡುವುದು ಹಾಗೂ ಸಂಭಾವನೆ ನೀಡಿದ ಬಗ್ಗೆ ದಾಖಲೆಯನ್ನು ನಿರ್ವಹಿಸಿ ಲೆಕ್ಕ ತಪಾಸಣೆ ಸಂದರ್ಭದಲ್ಲಿ ಒದಗಿಸುವುದು.
ತರಬೇತಿ ಅನುಪಾಲನೆ ಹಾಗೂ ದಾಖಲೀಕರಣ
ಸ್ವ-ರಕ್ಷಣಾ ತರಬೇತುದಾರರು ತರಬೇತಿಯನ್ನು ಪೂರೈಸಿದ ನಂತರ ಶಾಲೆಯ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿನಿಯರು ಸ್ವ-ರಕ್ಷಣಾ ಕೌಶಲವನ್ನು ಅಭ್ಯಾಸ ಮಾಡುವಂತ ದೈಹಿಕ ಶಿಕ್ಷಣ ಶಿಕ್ಷಕರು ಅಥವಾ ತರಬೇತಿ ಹೊಂದಿದ ಶಾಲೆಯ ಇತರ ಶಿಕ್ಷಕರು ಕ್ರಮ ವಹಿಸುವುದು.
ಉಪನಿರ್ದೇಶಕರು (ಆಡಳಿತ)ರವರು ಜಿಲ್ಲಾ ಹಂತದಲ್ಲಿ ಶಾಲಾ ಕಾಲೇಜುಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು, ಸದರಿ ಮಾಹಿತಿಯನ್ನು 2025-26ನೇ ಸಾಲಿನ ಕ್ರಿಯಾ ಯೋಜನೆಗೆ ಮಾಹಿತಿಯನ್ನು MoE ಗೆ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸಿದ ಬಗ್ಗೆ ಶಾಲೆಗಳಿಂದ ಫೋಟೋಸಹಿತ ಮಾಹಿತಿಯನ್ನು ಕ್ರೂಢೀಕರಿಸಿ ರಾಜ್ಯ ಕಛೇರಿಗೆ ಇಮೇಲ್ ಮಾಡುವುದು. sskgender2024@gmail.com ಸದರಿ ಚಟುವಟಿಕೆಗೆ ಅನುಮೋದನೆಯಾದ ಅನುದಾನದ ವಿವರಗಳು ಈ ಕೆಳಗಿನಂತಿದೆ.