ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1-5 ನೇ ತರಗತಿವರೆಗಿನ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬ ಆಚರಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ಸೂಚಿಸಿದೆ.
ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ‘ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ ಕಥೆಗಳನ್ನು ಹೇಳುವುದು, ಒಳಾಂಗಣ ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತವೆ. ಇಂತಹ ಸಂದರ್ಭಗಳು ಕಾಲ ಕ್ರಮೇಣ ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ.
ಅ) ಕಲಿಕಾ ಹಬ್ಬ ಆಯೋಜನೆಯ ಉಪಯುಕ್ತ ಅಂಶಗಳು:
1. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆ ಕ್ಲಸ್ಟರ್ ಒಳಗಿನ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದಂತಾಗುತ್ತದೆ.
2. ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ. ಮೋಜಿನ ಮತ್ತು ಆಕರ್ಷಕವೆನಿಸುವ ಕಾರ್ಯಕ್ರಮಗಳು ಶಾಲೆಗೆ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮಾತ್ರವಲ್ಲದೆ, ವಿಶೇಷವಾಗಿ ಮೊದಲ ತಲೆಮಾರಿನ ಕಲಿಕಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎದುರು ನೋಡುತ್ತಿರುತ್ತಾರೆ. ಸೃಜನಶೀಲತೆಯ ಮೂಲಕ ಸಾಂಘಿಕ ಸಾಮರ್ಥ್ಯದೊಂದಿಗೆ ಮಕ್ಕಳು ಸಮಾಜೀಕರಣವಾಗುವುದನ್ನು ಕಲಿಕಾ ಹಬ್ಬವು ಪ್ರೋತ್ಸಾಹಿಸುತ್ತದೆ. ಕಲೆ, ಸಂಗೀತ ಮತ್ತು ದೈಹಿಕ ಆಟಗಳೊಂದಿಗೆ ಸಂಯೋಜಿಸಲ್ಪಟ್ಟ FLN ಚಟುವಟಿಕೆಗಳು ಮನೋಜನ್ಮ, ಭಾವನಾತ್ಮಕ ಮತ್ತು ದೈಹಿಕವಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಲು ಒಂದು ಸಾಧನವಾಗಿ ಕೆಲಸ ಮಾಡುವುದು.
3. ವಿಭಿನ್ನ ಕಲಿಕೆಯ ವೇಗ ಅಥವಾ ಶೈಲಿಯನ್ನು ಹೊಂದಿರುವ ಮಕ್ಕಳು ಇಂತಹ ಕಲಿಕಾ ಉತ್ಸವಗಳಲ್ಲಿ ತೊಡಗಿಕೊಂಡಾಗ ವೈವಿಧ್ಯಮಯವಾದ ವಿಧಾನಗಳಿಂದ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ. 1 ರಿಂದ 5 ನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶೃತಿಯನ್ನು ಪಡೆಯಲು ಸಾಧವಿದೆ. ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಸ್ಥಳಾವಕಾಶವನ್ನು ನೀಡುವ ಮೂಲಕ, ಸಮುದಾಯದೊಳಗಿನ ವಿವಿಧ ಭಾಗೀದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕೆನ್ನುವುದು ಇಲಾಖೆಯ ಪ್ರಮುಖ ಆಶಯವಾಗಿದೆ.
ಆ) ಕಲಿಕಾ ಹಬ್ಬದಲ್ಲಿ ಕೈಗೊಳ್ಳಬಹುದಾದ FLN ಚಟುವಟಿಕೆಗಳು:
1. ಗಟ್ಟಿ ಓದು – ಎಂದರೆ, ಮಕ್ಕಳು/ಶಿಕ್ಷಕರು ಸಿದ್ದಪಡಿಸಿದ ಅಥವಾ ಸೃಜನಾತ್ಮಕವಾಗಿ ರಚಿಸಿದ ವಾಕ್ಯ ಅಥವಾ ಪಠ್ಯ ಸಾಮಗ್ರಿಯನ್ನು ಗ್ರಹಿಸಿ ಗಟ್ಟಿಯಾಗಿ ಓದುವುದು, ಗ್ರಂಥಾಲಯದಿಂದ ಪಡೆದ ಓದು ಸಾಮಗ್ರಿಗಳನ್ನು ಗ್ರಹಿಸಿ ಓದುವುದು ಈ ವಿಭಾಗದ ಮುಖ್ಯವಾದ ಚಟುವಟಿಕೆಯಾಗಿದ್ದು, ಈ ಬಗ್ಗೆ ಶಾಲೆಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ / ಕೊಠ
ಸಾಮಗ್ರಿಗಳ ಕಾರ್ನ‌್ರನಿಂದ / ಗ್ರಂಥಾಲಯ / ಗ್ರಾಮ ಪಂಚಾಯತ್ ಗ್ರಂಥಾಲಯ / ನಗರ ಕೇಂದ್ರ ಗ್ರಂಥಾಲಯ ಇತ್ಯಾದಿಗಳಿಂದ ವಯಸ್ಸಿಗೆ ಸೂಕ್ತವಾದ (ಕಿರಿಯರಿಂದ ಹಿರಿಯರ ಕಡೆಗೆ) ಪುಸ್ತಕಗಳನ್ನು ಸಂಗ್ರಹಿಸಿ. ವರ್ಣರಂಜಿತ ಓದುವ ಮೂಲೆಗಳನ್ನು ಸ್ಥಾಪಿಸಿಕೊಳ್ಳುವುದು. ಮಕ್ಕಳು ಕಥೆಯ ಭಾಗಗಳನ್ನು ಕೂಡ ಓದಿ ಅಭಿನಯಿಸುವಂತಹ ‘ಗಟ್ಟಿಯಾಗಿ ಓದಿ’ ಎಂಬ ಶೀರ್ಷಿಕೆಯ ಅವಧಿಗಳನ್ನು ಇಲ್ಲಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಕನ್ನಡ, ಅಂಗ್ಲ, ಉರ್ದು, ಮರಾಠಿ, ತಮಿಳು, ತೆಲುಗು, ಇತ್ಯಾದಿ ಭಾಷೆಗಳಲ್ಲಿ ನಿರ್ವಹಿಸತಕ್ಕದ್ದು.
2. ಕಥೆ ಹೇಳುವುದು – ಎಂದರೆ, ಮಕ್ಕಳು ಶಾಲಾ ಭಾಷೆಯಾದ ಕನ್ನಡ ಮತ್ತು ಇತರೆ ಪ್ರಾದೇಶಿಕ ಹಾಗೂ ಅಂಗ್ಲ ಭಾಷೆಗಳಲ್ಲಿ ಅಥವಾ ತಮ್ಮ ಮನೆಯ ಮಾತೃ ಭಾಷೆಯಲ್ಲಿ ಆಕರ್ಷಕವಾದ ಕಥೆಗಳನ್ನು ಹೇಳಲು ಪ್ರೇರೇಪಿಸುವುದು. ಇದರಿಂದಾಗಿ ಮಕ್ಕಳಲ್ಲಿ ಹಾಗೂ ಸಮುದಾಯದ ಸದಸ್ಯರಲ್ಲಿ ಕುತೂಹಲವನ್ನು ಸೃಷ್ಟಿಸಲು ಸಾಧವಾಗುತ್ತದೆ. ನೈತಿಕ ಹಾಗೂ ಕಾಲ್ಪನಿಕವಾಗಿ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಅಥವಾ ಇತರೆ ಭಾಷೆಗಳ ಅನಿಮೆಟಿಟ್ ಕಥೆಗಳನ್ನು ಪ್ರದರ್ಶಿಸಲು ಟ್ಯಾಬ್ಲೆಟ್ ಅಥವಾ ಪ್ರೊಜೆಕ್ಟರ್‌ಗಳನ್ನು ಬಳಸಿಕೊಳ್ಳುವುದು.
3. ಕೈಬರಹ ಮತ್ತು ಕ್ಯಾಲಿಗ್ರಫಿ ಉತ್ತಮವಾದ ಸ್ನಾಯುಜನ್ಯ ಕೌಶಲ್ಯಗಳನ್ನು ಸುಧಾರಿಸಲು, ಅಚ್ಚುಕಟ್ಟಾಗಿ ಮತ್ತು ಸೃಜನಶೀಲವಾಗಿ ಅಕ್ಷರ/ಪದ/ವಾಕ್ಯ/ವಾಕ್ಯವೃಂದವನ್ನು ಬರೆಯಲು ಕೈಬರಹಕ್ಕಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳುವುದು.
4. ಸಂತೋಷದಾಯಕ ಗಣಿತ – ಸುತ್ತಮುತ್ತಲಿನ ಭೌತಿಕ ಪರಿಸರದಲ್ಲಿ ಲಭವಾಗುವ ಮೂರ್ತ ವಸ್ತುಗಳ ಎಣಿಕೆ, ಶಾಲೆಯ ಒಳಾಂಗಣ/ಹೊರಾಂಗಣ ವಸ್ತುಗಳ ಎಣಿಕೆ, ಸ್ಥಳೀಯ ಸನ್ನಿವೇಶದ ವಸ್ತುಗಳ ಸಂಖ್ಯೆಗಳ ಎಣಿಕೆ, ವಿವಿಧ ಮಾದರಿಗಳ ಗುರುತಿಸುವಿಕೆ ಮತ್ತು ಸಮಸ್ಯೆ ಪರಿಹರಿಸುವಿಕೆಯೊಂದಿಗೆ ಸಂಖ್ಯಾ ಜ್ಞಾನದ ಆಟಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು.
5. ಟ್ರೆಷರ್ ಹಂಟ್/ ಮೆಮೊರಿ ಪರೀಕ್ಷೆ – ಹಣ್ಣುಗಳು, ತರಕಾರಿಗಳು, ಬಣ್ಣಗಳು, ತರಗತಿಯ ವಸ್ತುಗಳು ಹಾಗೂ ಇತ್ಯಾದಿಗಳ ಕ್ರಿಯಾಶೀಲತೆಯಲ್ಲಿ ಗುರುತಿಸುವಿಕೆ/ಜ್ಞಾಪಕ ಶಕ್ತಿಯ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.
6. ರಸ ಪ್ರಶ್ನೆ – ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಮತ್ತು ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು, ಕೌಶಲಾಧಾರಿತ ಸಂಗತಿಗಳನ್ನು ಅಳವಡಿಸಿ ರಸ ಪ್ರಶ್ನೆಯ ವಿನ್ಯಾಸ ರೂಪಿಸಿಕೊಳ್ಳುವುದು. ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತೀ ಶಾಲೆಯಿಂದಲೂ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. 04 ಸುತ್ತುಗಳಲ್ಲಿ ಸ್ಪರ್ಧೆಯನ್ನು ಮುಗಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಬೋನಸ್ ಸುತ್ತನ್ನು ಅಳವಡಿಸಿಕೊಳ್ಳಬಹುದು.
7. ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕಥೆಗಳನ್ನು ಕಟ್ಟುವುದು, ಮೋಜಿನ ಆಟಗಳನ್ನು ರೂಪಿಸುವುದು ಇತ್ಯಾದಿ. ಈ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು.ಈ ವಲಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಬ್ಬರಿಗೂ ಒದಗಿಸುವುದು. ಉದಾ., ಫ್ಲಾಶ್‌ಕಾರ್ಡ್, ಪೇಪರ್, ಪೆನ್ನು, ಪೆನ್ಸಿಲ್, ಬಣ್ಣ ಇತ್ಯಾದಿ.