ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ (CMC & TMC) ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯವಾಗಿದ್ದು, ಸೆಪ್ಟೆಂಬರ್ 9 ರ ಇಂದಿನಿಂದ ನೋಂದಣಿ ಪ್ರಾರಂಭವಾಗಲಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇ-ಆಸ್ತಿ ತಂತ್ರಾಂಶದ ಮಾಹಿತಿ ಹೊರತು,ಬೇರೆ ಯಾವುದೇ ವಿಧಾನದಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಿದ್ದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸೆಪ್ಟೆಂಬರ್ 9. 2024 ರಿಂದ ಬಾಗಲಕೋಟೆ, ರಾಯಚೂರು, ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚಾಲನೆ ನೀಡಲಾಗುತ್ತಿದೆ. ಇ-ಆಸ್ತಿ ಖಾತಾ ಇಲ್ಲದ ಸ್ವತ್ತುಗಳ ನೋಂದಣಿ ಸಾಧ್ಯವಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸ್ಥಿರಾಸ್ತಿಗಳ ನೋಂದಣಿಗೆ ಕಾವೇರಿ-2, ಇ- ಆಸ್ತಿ ತಂತ್ರಾಂಶ ಜೋಡಣೆಯಾಗಿದ್ದು, ಸೆಪ್ಟೆಂಬರ್ 9 ರಿಂದ 4 ಜಿಲ್ಲೆಗಳಲ್ಲಿ ಇ- ಆಸ್ತಿ ಮಾಹಿತಿ ಆಧರಿಸಿ ಸ್ಥಿರಾಸ್ತಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಾವೇರಿ -2 ತಂತ್ರಾಂಶದಲ್ಲಿ ಕೃಷಿಯೇತರ ಸ್ವತ್ತುಗಳಿಗೆ ಕಡ್ಡಾಯವಾಗಿ ಇ- ಸ್ವತ್ತು ಅಥವಾ ಇ- ಆಸ್ತಿ ತಂತ್ರಾಂಶಗಳಿಂದ ಮಾಹಿತಿ ಪಡೆದು ನೋಂದಣಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಮೂಲಕ ಒಂದೇ ಆಸ್ತಿಯನ್ನು ಹಲವರಿಗೆ ನೋಂದಣಿ ಮಾಡುವುದಕ್ಕೆ ಕಡಿವಾಳ ಬೀಳಲಿದೆ.