ನವದೆಹಲಿ : ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕುರಿತು ಪ್ರಧಾನಿ ಮೋದಿ ವಿಡಿಯೋ ಸಂದೇಶ ಹಂಚಿಕೊಂಡಿದ್ದು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ನಾವೆಲ್ಲರೂ ತೀವ್ರ ದುಃಖಿತರಾಗಿದ್ದೇವೆ. ಅವರ ನಿಧನವು ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಹೋರಾಟಗಳ ನಡುವೆಯೂ ನಾವು ಹೇಗೆ ಉನ್ನತ ಸ್ಥಾನವನ್ನು ತಲುಪಬಹುದು ಎಂಬುದಕ್ಕೆ ಅವರ ಜೀವನವು ಭವಿಷ್ಯದ ಪೀಳಿಗೆಗೆ ಒಂದು ಉದಾಹರಣೆಯಾಗಿದೆ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, ಅವರು ಪ್ರಾಮಾಣಿಕ ವ್ಯಕ್ತಿ, ಶ್ರೇಷ್ಠ ಅರ್ಥಶಾಸ್ತ್ರಜ್ಞ ಮತ್ತು ಸುಧಾರಣೆಗಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ನಾಯಕ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
#WATCH | On the demise of former PM Dr Manmohan Singh, PM Modi says, " We all have deeply saddened by the demise of former PM Dr Manmohan Singh. His passing is a setback to the whole nation…his life is an example for future generations regarding how we can rise above struggles… pic.twitter.com/MhgtXg3OK0
— ANI (@ANI) December 27, 2024
“ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ ಅವರು, ಅರ್ಥಶಾಸ್ತ್ರಜ್ಞರಾಗಿ ದೇಶಕ್ಕೆ ಹಲವು ಸೇವೆ ಸಲ್ಲಿಸಿದ್ದಾರೆ. ದೇಶ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ಮಾಜಿ ಪ್ರಧಾನಿ ಭಾರತರತ್ನ ಪಿ.ವಿ.ನರಸಿಂಹರಾವ್ ಅವರ ನೇತೃತ್ವದಲ್ಲಿ ಹಣಕಾಸು ಸಚಿವರಾಗಿ ದೇಶವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.