Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಗ್ರ್ಯಾಂಡ್ ಚೆಸ್ ಟೂರ್ 2025 ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಡಿ.ಗುಕೇಶ್ ರ‍್ಯಾಪಿಡ್ | World Champion D Gukesh wins

04/07/2025 11:53 PM

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲೆಗಳಿಗೆ 2025-26ನೇ ಸಾಲಿನ ಪಠ್ಯಪುಸ್ತಕಗಳ ವಿತರಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಶಾಲೆಗಳಿಗೆ 2025-26ನೇ ಸಾಲಿನ ಪಠ್ಯಪುಸ್ತಕಗಳ ವಿತರಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

By kannadanewsnow5724/04/2025 5:36 AM

ಬೆಂಗಳೂರು : ರಾಜ್ಯದ ಶಾಲೆಗಳಿಗೆ 2025-26ನೇ ಸಾಲಿನ ಪಠ್ಯಪುಸ್ತಕಗಳನ್ನು ವಿತರಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ಈಗಾಗಲೇ ಉಲ್ಲೇಖ (1) ರ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ಲಭ್ಯಗೊಳಿಸಬೇಕಾಗಿರುವುದರಿಂದ ಈಗಾಗಲೇ ತಾಲ್ಲೂಕು ಹಂತಕ್ಕೆ ಶೇ.50 ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದಲ್ಲಿ ಅಂತಹ ತಾಲ್ಲೂಕುಗಳಲ್ಲಿ ಎಲ್ಲಾ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಆಯಾ ಶಾಲಾ ಬೇಡಿಕೆಗೆ ಅನುಗುಣವಾಗಿ ದಿನಾಂಕ:23.04.2025 ರಿಂದ ಆಯಾ ಶಾಲೆಗಳಿಗೆ ಸಾಗಾಣಿಕೆ ಮಾಡಿ ನಿಯಮಾನುಸಾರ ವಿತರಿಸಲು ಕ್ರಮವಹಿಸಲು ತಿಳಿಸಿದೆ. ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲು ಸಾಗಾಣಿಕ ವೆಚ್ಚವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು.

ಮಾರಾಟ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಯನ್ವಯ ಶೇ.10 ರಷ್ಟು ಮುಂಗಡ ಹಣ ಪಾವತಿಸಿರುವ ಶಾಲೆಗಳು ಶೇ.100 ರಷ್ಟು ಹಣ ಪಾವತಿಸಿದ ನಂತರ ಹಾಗೂ ಉಲ್ಲೇಖ (2) ರ ಜ್ಞಾಪನ ಪತ್ರಗಳಲ್ಲಿ ತಿಳಿಸಿರುವಂತೆ ಹಿಂದಿನ ಸಾಲುಗಳ ಬಾಕಿ ಮೊತ್ತವನ್ನು ಪಾವತಿಸಿರುವ ಶಾಲೆಗಳಿಗೆ ಶೇ.100 ಪಠ್ಯಪುಸ್ತಕಗಳನ್ನು ವಿತರಿಸಲು ತಿಳಿಸಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಇಲಾಖೆಗಳಿಂದ ಅನುಷ್ಠಾನಗೊಂಡಿರುವ ಶಾಲೆಗಳಿಗೆ ಬೇಡಿಕೆಯನ್‌ವಯ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ವಿತರಿಸುವುದು.

ಶೇ.10 ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ಅನ್ವಯ ಶೇ.100 ರಷ್ಟು ಹಣ ಪಾವತಿಸಿ ಖರೀದಿಸಲು ಕೋರಿದ್ದಲ್ಲಿ ಅಂತಹ ಖಾಸಗಿ ಶಾಲೆಗಳಿಗೆ ಜೇಷ್ಠತೆ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ವಿತರಿಸಲು ತಿಳಿಸಿದೆ ಹಾಗೂ ಉಲ್ಲೇಖ (3) ರ ಸುತ್ತೋಲೆಯಂತೆ 2023-24, 2024-25 ನೇ ಸಾಲಿನ ಬಾಕಿ ಮೊತ್ತವನ್ನು NEFT ಮೂಲಕ ಹಾಗೂ 2025-26ನೇ ಸಾಲಿನ ಸಲ್ಲಿಕೆಯಾಗಿರುವ ಬೇಡಿಕೆಯನ್ವಯ ಕಡ್ಡಾಯವಾಗಿ Payment gateway ಮೂಲಕವೇ ಪೂರ್ಣ ಮೊತ್ತವನ್ನು ಪಾವತಿಸಿಕೊಂಡು ಪಠ್ಯಪುಸ್ತಕಗಳನ್ನು ವಿತರಿಸುವುದು, ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿದ ನಂತರ ವಿದ್ಯಾರ್ಥಿವಾರು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ಆ ದಿನವೇ ದಾಖಲಿಸಲು ಸಹ ಸೂಚಿಸಿದೆ.

BIG NEWS: Distribution of textbooks for the year 2025-26 to schools in the state: Important order from the Education Department!
Share. Facebook Twitter LinkedIn WhatsApp Email

Related Posts

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM2 Mins Read

ಶೀಘ್ರವೇ ಬೆಂಗಳೂರಿನ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಅಂತಿಮ:‌ ಡಿಸಿಎಂ ಡಿ.ಕೆ.ಶಿವಕುಮಾರ್

04/07/2025 9:27 PM1 Min Read

ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಣೆ

04/07/2025 8:44 PM1 Min Read
Recent News

BREAKING: ಗ್ರ್ಯಾಂಡ್ ಚೆಸ್ ಟೂರ್ 2025 ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಡಿ.ಗುಕೇಶ್ ರ‍್ಯಾಪಿಡ್ | World Champion D Gukesh wins

04/07/2025 11:53 PM

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM

ದೇಶದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಳ.! ಭಾರತದಲ್ಲಿ ಈ ರಾಜ್ಯವೇ ನಂಬರ್ ಒನ್, ಕರ್ನಾಟಕಕ್ಕೆ 2ನೇ ಸ್ಥಾನ!

04/07/2025 9:42 PM
State News
KARNATAKA

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

By kannadanewsnow0904/07/2025 9:44 PM KARNATAKA 2 Mins Read

ಬೆಂಗಳೂರು : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ…

ಶೀಘ್ರವೇ ಬೆಂಗಳೂರಿನ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಅಂತಿಮ:‌ ಡಿಸಿಎಂ ಡಿ.ಕೆ.ಶಿವಕುಮಾರ್

04/07/2025 9:27 PM

ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಣೆ

04/07/2025 8:44 PM

BREAKING: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: 34.12 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED

04/07/2025 8:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.