ಮುರುಡೇಶ್ವರ : ಮೀನುಗಾರಿಕೆ ಮಾಡುವಾಗ ಸಂಭವಿಸುವ ಅವಘಡಗಳಲ್ಲಿ ಮೃತಪಡುವ ಮೀನುಗಾರರ ವಾರಸುದಾರರಿಗೆ ನೀಡುವ ಪರಿಹಾರವನ್ನು 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮರುಡೇಶ್ವರದಲ್ಲಿ ಆರಂಭವಾದ 3 ದಿನಗಳ ಬೃಹತ್ ಮತ್ಸ್ಯಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮರುಡೇಶ್ವರದಲ್ಲಿ ಇಂದು ಆರಂಭವಾದ 3 ದಿನಗಳ ಬೃಹತ್ ಮತ್ಸ್ಯಮೇಳವನ್ನು ಉದ್ಘಾಟಿಸಿ ಮಾತನಾಡಿದೆ. ರೈತರು ಭೂಮಿಯಲ್ಲಿ ಕೃಷಿ ಮಾಡ್ತಾರೆ. ಮೀನುಗಾರರು ನೀರಿನ ಮೇಲೆ ಕೃಷಿ ಮಾಡ್ತಾರೆ. ರೈತನಿಗೆ ಸಂಬಳ ಇಲ್ಲ, ಪೆನ್ಷನ್ ಇಲ್ಲ, ನಿವೃತ್ತಿ ಕೂಡ ಇಲ್ಲ. ಮೀನುಗಾರರ ಪರಿಸ್ಥಿತಿ ಕೂಡ ಅದೇ. ಮೀನುಗಾರಿಕೆ ಅವಲಂಬಿಸಿದವರು ಒಂದು ಮಧ್ಯಮವರ್ಗದ ಬದುಕು ಕಟ್ಟಿಕೊಂಡಿರಬಹುದು, ಕೋಟ್ಯಾಧಿಪತಿಗಳಾಗಿದ್ದನ್ನು ನಾನು ನೋಡಿಲ್ಲ ಎಂದರು.
ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮರುಡೇಶ್ವರದಲ್ಲಿ ಇಂದು ಆರಂಭವಾದ 3 ದಿನಗಳ ಬೃಹತ್ ಮತ್ಸ್ಯಮೇಳವನ್ನು ಉದ್ಘಾಟಿಸಿ ಮಾತನಾಡಿದೆ. ರೈತರು ಭೂಮಿಯಲ್ಲಿ ಕೃಷಿ ಮಾಡ್ತಾರೆ. ಮೀನುಗಾರರು ನೀರಿನ ಮೇಲೆ ಕೃಷಿ ಮಾಡ್ತಾರೆ. ರೈತನಿಗೆ ಸಂಬಳ ಇಲ್ಲ, ಪೆನ್ಷನ್ ಇಲ್ಲ, ನಿವೃತ್ತಿ ಕೂಡ ಇಲ್ಲ. ಮೀನುಗಾರರ ಪರಿಸ್ಥಿತಿ ಕೂಡ ಅದೇ. ಮೀನುಗಾರಿಕೆ… pic.twitter.com/uWf7ZZ6jLj
— DK Shivakumar (@DKShivakumar) November 21, 2024
ಸಮುದ್ರವೇ ನಿಮ್ಮ ಬದುಕು. ಪ್ರಾಣವನ್ನೂ ಲೆಕ್ಕಿಸದೆ ನೀವು ಸಮುದ್ರಕ್ಕಿಳಿಯುತ್ತೀರ, ನಿಮ್ಮಿಂದ ಒಂದು ದೊಡ್ಡ ಉದ್ಯಮ ಕ್ಷೇತ್ರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಮಾಡುವಾಗ ಸಂಭವಿಸುವ ಅವಘಡಗಳಲ್ಲಿ ಮೃತಪಡುವ ಮೀನುಗಾರರ ವಾರಸುದಾರರಿಗೆ ನೀಡುವ ಪರಿಹಾರವನ್ನು 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಕರಾವಳಿ ಪ್ರದೇಶದ ಸಾಕಷ್ಟು ಜನ ಬದುಕು ಕಟ್ಟಿಕೊಳ್ಳಲು ಮುಂಬೈ, ಬೆಂಗಳೂರು, ದುಬೈನಂತಹ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಮಾಡಲು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಉತ್ಸುಕವಾಗಿದೆ ಎಂದು ತಿಳಿಸಿದೆ.