ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನದಿಂದ, ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ನಿಖರ ಮೊಬಲಗಿನ ಕಟಾವಣೆ ಹಾಗೂ ಕಟಾವಣೆ ಮೊಬಲಗಿನ ತಿದ್ದುಪಡಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಖಜಾನೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆರ್.ಎಂ.ಎಸ್. ತಂತ್ರಾಂಶಗಳ ಅನುಕಲನ ವೇದಿಕೆಯ ಮೂಲಕ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವಣೆಯಾಗುತ್ತಿರುವ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತಿನ ಮೊಬಲಗುಗಳು, ವಿಮಾ ಇಲಾಖೆಯ ದತ್ತಾಂಶದಂತೆ ಕಟಾವಣೆಯಾಗಬೇಕಿರುವ ಮೊಬಲಗುಗಳಿಗಿಂತ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ.
ಉಲ್ಲೇಖಿತ ಸುತ್ತೋಲೆಯಲ್ಲಿ, ಈ ಮೇಲೆ ವಿವರಿಸಿರುವಂತೆ ವ್ಯತ್ಯಾಸವಿರುವ 15,287 ಪ್ರಕರಣಗಳನ್ನು ಗುರುತಿಸಿ, ದತ್ತಾಂಶವನ್ನು ಜಿಲ್ಲಾವಾರು ಪ್ರತ್ಯೇಕಿಸಿ, Excel Sheet ನಲ್ಲಿ ನಮೂದಿಸಿ, ಜಿಲ್ಲಾ ವಿಮಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸದರಿ ಪ್ರಕರಣಗಳನ್ನು ಭೌತಿಕ ಕಡತಗಳೊಂದಿಗೆ ಪರಿಶೀಲಿಸಿ, ನ್ಯೂನತೆಯಿರುವ ಪ್ರಕರಣಗಳನ್ನು ಪ್ರತ್ಯೇಕಿಸಿ, ವಿಮಾದಾರರ ವೇತನ ಬಟವಾಡೆ ಅಧಿಕಾರಿಗಳಿಗೆ ಪತ್ರ ಬರೆದು, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಕಟಾವಣೆ ಮಾಡುತ್ತಿರುವ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗುಗಳಲ್ಲಿ ವ್ಯತ್ಯಾಸವನ್ನು ಸರಿಪಡಿಸುವಂತೆ, ಹಾಗೂ ರದ್ದು ಪಡಿಸಬೇಕಿರುವ ಜೀವ ವಿಮಾ ಪಾಲಿಸಿಗಳನ್ನು ಪಟ್ಟಿಮಾಡಿ ನಿಯಮಾನುಸಾರ ಶಿಫಾರಸ್ಸಿನೊಂದಿಗೆ ಎ.ವಿ.ಜಿ., ಶಾಖೆಗೆ ಕಳುಹಿಸುವಂತೆ ಸೂಚಿಸಲಾಗಿತ್ತು.
ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗುಗಳನ್ನು ನಿಯಮಾನುಸಾರ ಹೆಚ್.ಆರ್.ಎಂ.ಎಸ್., ನಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ವಿಮಾ ಇಲಾಖೆಗೆ ನೀಡಲಾಗಿರುತ್ತದೆ. ಈ ಕೆಲಸವನ್ನು ಪ್ರಸ್ತುತ ವಿಮಾ ಇಲಾಖೆಯ ಗಣಕ ವಿಭಾಗದಲ್ಲಿ ನಿರ್ವಹಿಸಲಾಗುತ್ತಿದೆ.
ಆದುದರಿಂದ, ಮೇಲ್ಕಂಡ ವಿಷಯದ ಸಂಬಂಧ ವಿಮಾ ಇಲಾಖೆಯ ಜಿಲ್ಲಾ ವಿಮಾಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯವಿಧಾನಗಳು ಈ ಕೆಳಕಂಡಂತ್ತಿರುತ್ತವೆ.
1. ಹೆಚ್.ಆರ್.ಎಂ.ಎಸ್., ನಲ್ಲಿ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ซึ่งกี่ พ (Insurance Details / Loan and Recoveries) កơ 3 ಮಾಡುವ ಸಂಬಂಧ ಕೋರಿಕೆಗಳನ್ನು ವಿಮಾದಾರರಿಂದ ನೇರವಾಗಿ ವಿಮಾ ಇಲಾಖೆಯ ಗಣಕ ವಿಭಾಗದಲ್ಲಿ ಸ್ವೀಕರಿಸುವುದಿಲ್ಲ.
2. ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ៩ ៩ (Insurance Details / Loan and Recoveries) ಹೆಚ್.ಆರ್.ಎಂ.ಎಸ್., ನಲ್ಲಿ ತಿದ್ದುಪಡಿ ಮಾಡುವ ಬಗ್ಗೆ ವಿಮಾದಾರರಿಂದ ಜಿಲ್ಲಾ ವಿಮಾ ಕಛೇರಿಗಳಿಗೆ ಸಲ್ಲಿಕೆಯಾಗುವ ಕೋರಿಕೆಗಳನ್ನು ವಿಷಯವಾರು KGIDMIS Portal ತಂತ್ರಾಂಶದಲ್ಲಿ Ticket Rise ಮಾಡುವ ಮೂಲಕ ಕೋರಿಕೆಗಳನ್ನು ವಿಮಾ ಇಲಾಖೆಯ ಗಣಕ ವಿಭಾಗಕ್ಕೆ ಸಲ್ಲಿಸಬೇಕು.
3. ವಿಮಾ ನಿರ್ದೇಶನಾಲಯದ ಸುತ್ತೋಲೆ ಸಂಖ್ಯೆ 17/2025-26, ದಿನಾಂಕ 24-07-2025 ರಲ್ಲಿ ತಿಳಿಸಿರುವಂತೆ ವಿಮಾ ಇಲಾಖೆಯ ದತ್ತಾಂಶದಲ್ಲಿ ನಿಯಮಾನುಸಾರ ತಿದ್ದುಪಡಿಗಳನ್ನು ಜಿಲ್ಲಾ ವಿಮಾ ಕಛೇರಿಗಳ ಮಟ್ಟದಲ್ಲೇ ಜರೂರಾಗಿ ಪೂರ್ಣಗೊಳಿಸಬೇಕು. (ಹೆಚ್.ಆರ್.ಎಂ.ಎಸ್., ದತ್ತಾಂಶ ಸರಿ ಇದ್ದು, ವಿಮಾ ಇಲಾಖೆಯ ದತ್ತಾಂಶ ತಿದ್ದುಪಡಿಯಾಗಬೇಕಿರುವ ಪ್ರಕರಣಗಳು.)
4. ವಿಮಾ ನಿರ್ದೇಶನಾಲಯದ ಸುತ್ತೋಲೆ ಸಂಖ್ಯೆ 17/2025-26, ದಿನಾಂಕ 24-07-2025 ರಲ್ಲಿ ತಿಳಿಸಿರುವಂತೆ ಪರಿಶೀಲಿಸಿ, ವಿಮಾ ಇಲಾಖೆಯ ದತ್ತಾಂಶ ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿಯಾಗಬೇಕರುವ ಪ್ರಕರಣಗಳನ್ನು ಜಿಲ್ಲಾ ವಿಮಾ ಕಛೇರಿಗಳಿಂದ ವಿಮಾ ಇಲಾಖೆಯ KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ ಯಾವುದೇ ದಾಖಲೆಗಳನ್ನು Upload ಮಾಡದೇ, Ticket Rise ಮಾಡುವ ಮೂಲಕ ವಿಮಾ ಇಲಾಖೆಯ ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು.
5. ರದ್ದುಪಡಿಸಿರುವ, ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ವಿವರವನ್ನು ಪಟ್ಟಿಮಾಡಿ, ವಿಮಾ ಇಲಾಖೆಯ ಗಣಕ ವಿಭಾಗಕ್ಕೆ ಸಲ್ಲಿಸಬೇಕು. ಸದರಿ ವಿವರವನ್ನು ಗಣಕ ವಿಭಾಗದಲ್ಲಿ ಕ್ರೋಢೀಕರಿಸಿ, DataVerification Portal ನಲ್ಲಿ ರದ್ದಾದ ಪಾಲಿಸಿಗಳ ವಿಮಾ ಮೊತ್ತ ಮತ್ತು ವಿಮಾ ಕಂತನ್ನು ಶೂನ್ಯ (Zero) ಮಾಡಲಾಗುವುದು. Kgidverificationportal ನಲ್ಲಿ ಇ-ಸಹಿ ಮಾಡುವ ಮೂಲಕ ದತ್ತಾಂಶವನ್ನು kgidonline ತಂತ್ರಾಂಶಕ್ಕೆ ಕಳುಹಿಸಬೇಕು.
6. ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತುಗಳ ಕಟಾವಣೆಯನ್ನು ಪಾಲಿಸಿಯ ಹೊಣೆ ದಿನಾಂಕದಿಂದ ಆರಂಭಿಸದೇ, ವಿಮಾ ಕಂತು ಕಟಾವಣೆಯನ್ನು ಇತ್ತೀಚೆಗೆ ಆರಂಭಿಸಿರುವ ಪಾಲಿಸಿಗಳನ್ನು ಮುಂದುವರೆಸುವ / ರದ್ದುಪಡಿಸುವ ಬಗ್ಗೆ ಆದೇಶ ಕೋರಿ ಎ.ವಿ.ಜಿ. ಶಾಖೆಗೆ KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ಕೋರಿಕೆ ಸಲ್ಲಿಸಬೇಕು. ಎ.ವಿ.ಜಿ. ಶಾಖೆಯಿಂದ ಪಾಲಿಸಿ ರದ್ದತಿ ಬಗ್ಗೆ ಆದೇಶ ಬಂದಲ್ಲಿ ಅಂತಹ ಪಾಲಿಸಿಗಳ ವಿವರವನ್ನು KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ರದ್ದಾದ ಪಾಲಿಸಿಗಳ ವಿಮಾ ಮೊತ್ತ ಮತ್ತು ವಿಮಾ ಕಂತನ್ನು ಶೂನ್ಯಗೊಳಿಸಲು ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು. ನಂತರ ಕ್ರಮ ಸಂಖ್ಯೆ 5 ರಲ್ಲಿ ತಿಳಿಸಿರುವಂತೆ ಕ್ರಮವಹಿಸಬೇಕು. ಪಾಲಿಸಿ ಮುಂದುವರೆಸುವಂತೆ ಆದೇಶ ಬಂದಲ್ಲಿ, ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿರುವಂತೆ ಕ್ರಮವಹಿಸಬೇಕು.








