Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ವ್ಯಾಪಾರ ಸ್ಥಿರತೆ, ಇಂಧನ ಭದ್ರತೆಯ ಮೇಲೆ ಗಮನಹರಿಸಿ’ : ‘ಸಿಎಂ’ಗಳಿಗೆ ಪ್ರಧಾನಿ ಮೋದಿ ಸೂಚನೆ

27/03/2026 10:05 PM

ಮೀನುಗಾರರ ಸಾಲ ಮನ್ನಾ ಯೋಜನೆಯಲ್ಲಿ ₹1.66 ಕೋಟಿ ವಂಚನೆ: ಮೂಕಾಂಬಿಕಾ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ ಇಡಿ

27/03/2026 9:52 PM

ಸಣ್ಣಪುಟ್ಟ ಗಲಾಟೆಗಳಿಗೆಲ್ಲಾ 498A ಕೇಸ್ ಹಾಕುವಂತಿಲ್ಲ: ಅತ್ತೆ-ಮಾವಂದಿರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

27/03/2026 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘EEDS’ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳ ಗಣಕೀಕರಣ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!
KARNATAKA

BIG NEWS : ‘EEDS’ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳ ಗಣಕೀಕರಣ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!

By kannadanewsnow5709/03/2025 6:10 AM

ಬೆಂಗಳೂರು : ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಶಿಕ್ಷಕರ ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಎಲ್ಲಾ ಅಧಿಕಾರಿಗಳ ಮಾಹಿತಿಯ ಇಂದೀಕರಣಕ್ಕೆ ಸಂಬಂಧಿಸಿದಂತೆ. ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿತ್ತು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇಇಡಿ.ಎಸ್ ನಲ್ಲಿ ಇರುವ ಸೇವಾ ಮಾಹಿತಿಯು ಅಂತಿಮವಾಗಿರುವುದರಿಂದ ಈ ಕೆಳಕಂಡ ಅಂಶಗಳ ಸೇವಾ ವಿವರಗಳನ್ನು ನಿಖರವಾಗಿ ಇ ಇಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ದಿನಾಂಕ:15/03/2025 ರೊಳಗೆ ಅಂತಿಮಗೊಳಿಸಲು ಆಯಾ ಬಟವಾಡೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಶಿಕ್ಷಕರ ಕ್ರಮಬದ್ಧವಾದ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ ನಮೂದಾಗಿರುವ ಬಗ್ಗೆ ಪರಿಶೀಲಿಸುವುದು. ತಂತ್ರಾಂಶದ ವರದಿಗಳನ್ನು ಗಮನಿಸಿದಂತೆ ಕೆಲವು ಪ್ರಕರಣಗಳಲ್ಲಿ ಎರಡೆರಡು ಕೆ.ಜಿ.ಐ.ಡಿ ಸಂಖ್ಯೆಗಳನ್ನು ನಮೂದಿಸಿ ಸೇವಾ ವಿವರಗಳನ್ನು ಅಂತಿಮಗೊಳಿಸಿರುವುದು ಕಂಡುಬಂದಿರುತ್ತದೆ. ಇದು ಸಾಕಷ್ಟು ಗೊಂದಲಗಳಿಗೆ ಅವಕಾಶ ಮಾಡಿಕೊಡುವುದರಿಂದ ಪ್ರತಿಯೊಬ್ಬ ಶಿಕ್ಷಕರ ಮೊದಲನೇ ಕೆ.ಜಿ.ಐ.ಡಿ ಸಂಖ್ಯೆಯಡಿ ಸೇವಾ ವಿವರಗಳನ್ನು ಅಂತಿಮಗೊಳಿಸಿ ಉಳಿದ ವಿವರಗಳನ್ನು ತಂತ್ರಾಂಶದಿಂದ ತೆಗೆದು ಹಾಕಲು ಕ್ರಮವಹಿಸುವುದು.

2. ಶಿಕ್ಷಕರ ಹೆಸರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕ್ರಮಬದ್ಧವಾಗಿರುವ ಬಗ್ಗೆ ಪರಿಶೀಲಿಸುವುದು. ಕನ್ನಡ ಹಾಗೂ ಆಂಗ್ಲ ಹೆಸರುಗಳನ್ನು ಇ.ಇ.ಡಿ.ಎಸ್ ನಲ್ಲಿ ತಪ್ಪಾಗಿ ನಮೂದಿಸಿದ್ದು ತಿದ್ದುಪಡಿಗಾಗಿ ಹೆಚ್ಚಿನ ಅರ್ಜಿಗಳು ತಾಲ್ಲೂಕು/ಜಿಲ್ಲಾ ಹಂತದಿಂದ ಈ ಕಛೇರಿಗೆ ಸಲ್ಲಿಕೆಯಾಗುತ್ತಿದೆ. ಆದ್ದರಿಂದ ಶಿಕ್ಷಕರ ಸೇವಾವಹಿ ಹಾಗೂ 2.2.2 ಅಂಕಪಟ್ಟಿಯಲ್ಲಿರುವಂತೆ ಸರಿಯಾದ ಮಾಹಿತಿಯನ್ನು ಇಂದೀಕರಿಸುವುದು. ಇನ್ನು ಮುಂದೆ ಇಂತಹ ಅರ್ಜಿಗಳು ಸಲ್ಲಿಕೆಯಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.

3. ಶಿಕ್ಷಕರ ಜನ್ಮ ದಿನಾಂಕ. ಸೇವೆಗೆ ಸೇರಿದ ದಿನಾಂಕ. ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ ಮುಂತಾದ ಅಂಶಗಳು ಕ್ರಮಬದ್ಧವಾಗಿ ನಮೂದಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವುದು. ಕೆ.ಜಿ.ಐ.ಡಿ. ಸಂಖ್ಯೆಗಳ ತಿದ್ದುಪಡಿಗೆ ಅರ್ಜಿಸಲ್ಲಿಕೆಯಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.

4 ಶಿಕ್ಷಕರ ಸೇವಾ ವಿವರದಲ್ಲಿ ಯಾವುದೇ ಅಂಕಣ ಖಾಲಿ ಉಳಿಯದಂತೆ ಭರ್ತಿ ಮಾಡಲು ಕ್ರಮವಹಿಸುವುದು

5. ಅನುದಾನಿತ ಶಾಲಾ ಶಿಕ್ಷಕರನ್ನು ಸರ್ಕಾರಿ ಶಾಲಾ ಶಿಕ್ಷಕರೆಂದು ನಮೂದಾಗಿದ್ದಲ್ಲಿ ಪರಿಶೀಲಿಸಿ ಅಂತಹ ಪ್ರಕರಣಗಳನ್ನು ರದ್ದುಪಡಿಸುವುದು ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿರುತ್ತದೆ.

6. ಶಿಕ್ಷಕರ ಪದನಾಮ, ಆಯ್ಕೆ ಮಾಡುವಾಗ ಗ್ರೇಡ್-1, ಗ್ರೇಡ್-2 ಎಂದು ಸರಿಯಾಗಿ ನಮೂದಿಸಿವುದು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರೆಂದು ತಪ್ಪಾಗಿ ನಮೂದಾಗಿದ್ದಲ್ಲಿ ಕೂಡಲೇ ಪರಿಶೀಲಿಸಿ ಸರಿಪಡಿಸುವುದು.

– ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಆದ್ಯತಾ ವಲಯ ಎ/ಬಿ/ಸಿ ಜೋನ್) ಪರಿಶೀಲಿಸುವುದು. ಮತ್ತು ಸಮಂಜಸವಾದ ಆದ್ಯತಾ ವಲಯಗಳನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಿಸಿ ಅಂತಿಮಗೊಳಿಸುವುದು.

8. ಶಿಕ್ಷಕರ ವಿನಾಯಿತಿಗೆ ಸಂಬಂಧಿಸಿದ ಎಲ್ಲಾ ವಿವರ ಕ್ರಮಬದ್ದವಾಗಿ ನಮೂದಾಗಿರುವ ಬಗ್ಗೆ, ಪರಿಶೀಲಿಸುವುದು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆ/ಕಛೇರಿಯಲ್ಲಿಯೇ ಆ ಶಿಕ್ಷಕರು/ಸಿಬ್ಬಂದಿ ಮ್ಯಾಪಿಂಗ್ ಆಗಿರುವ ಬಗ್ಗೆ, ಕಡ್ಡಾಯವಾಗಿ ಪರಿಶೀಲಿಸುವುದು.

10. ಶಿಕ್ಷಕರ ಬೋಧನಾ ವಿಷಯ ನಮೂದಿಸುವುದು. ಖಾಯಂಪೂರ್ವ ಅವಧಿ ಘೋಷಣೆ ಮಾಹಿತಿ ನಮೂದಿಸುವುದು ಮತ್ತು ಪತಿ ಅಥವಾ ಪತ್ನಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆ ಮತ್ತು ಕಂದಾಯ ತಾಲ್ಲೂಕನ್ನು ಕಡ್ಡಾಯವಾಗಿ ಹಾಗೂ ಸರಿಯಾಗಿ ಗಣಕೀಕರಣಗೊಳಿಸುವುದು ಈ ಬಗ್ಗೆ ತಂತ್ರಾಂಶದಲ್ಲಿ ಅವಕಾಶ ಲಭ್ಯವಿರುತ್ತದೆ.

11. ನಿವೃತ್ತಿ ಸ್ವಯಂ ನಿವೃತ್ತಿ ಹೊಂದಿದವರನ್ನು ತಂತ್ರಾಂಶದಿಂದ EXIT ಮಾಡುವುದು.

12. ಅಮಾನತ್ತು ಶಿಸ್ತುಕ್ರಮ ದಂಡನೆ ಆಗಿರುವ ಶಿಕ್ಷಕರ ಮಾಹಿತಿಯನ್ನು ಅವರ ಸೇವಾ ವಿವರದಲ್ಲಿ ನಮೂದಿಸುವುದು ಹಾಗೂ ಇನ್ನಿತರ ಎಲ್ಲಾ ಪ್ರಮುಖ ಸೇವಾ ವಿವರಗಳನ್ನು ಪರಿಶೀಲಿಸಿ ಅಪ್‌ಡೇಟ್ ಮಾಡುವುದು.

13. ಸೇವಾ ವಿವರಗಳಾದ ಸೇವೆಗೆ ಸೇರಿದ ದಿನಾಂಕ. ಶಾಲೆ ವಲಯ. ಕಾರ್ಯ ನಿರ್ವಹಿಸಿದ ಅವಧಿಯನ್ನು ಕ್ರಮ ಬದ್ಧವಾಗಿ ನಮೂದಿಸುವುದು.

14. ಕೆಲವು ಶಿಕ್ಷಕರ ಸೇವಾ ವಿವರಗಳು ಒಂದಕ್ಕಿಂತ ಹೆಚ್ಚು ಬಾರಿ ನಮೂದಿಸಲಾಗಿದ್ದು ಒಂದನ್ನು ಮಾತ್ರ ಉಳಿಸಿಕೊಂಡು ಮತ್ತೊಂದನ್ನು ಡಿಲೀಟ್ ಮಾಡುವುದು. ಯಾವುದೇ ಕಾರಣಕ್ಕೂ ಡಬಲ್ ಎಂಟ್ರಿಗೆ ಅವಕಾಶ ನೀಡಬಾರದು.

15. ಶಿಕ್ಷಕರ/ನೌಕರರ ಪರೀಕ್ಷಾರ್ಥ ಸೇವೆ. ವೃಂದ, ಬೋಧನಾ ಮಾಧ್ಯಮ ಬೋದನಾ ವಿಷಯ ನೇಮಕಾತಿ ವಿಧಾನ, ವರ್ಗಾವಣಾ ವಿವರ ಜಿಲ್ಲೆ/ತಾಲ್ಲೂಕು/ಶಾಲೆ ಕಛೇರಿ ಮುಂತಾದ ಪ್ರಮುಖ ಅಂಶಗಳನ್ನು ಸರಿಯಾಗಿ ನಮೂದಿಸುವುದು. ಇದರಲ್ಲಿ ಯಾವುದೇ ಅಸ್ಪಷ್ಟತೆಗೆ ಮತ್ತು ಗೊಂದಲಗಳಿಗೆ ಅವಕಾಶ ನೀಡಬಾರದು. ಸೇವಾ ವಿವರ ಅಪೂರ್ಣವಾಗಿದ್ದಲ್ಲಿ ಆ ನೌಕರರ ಕಾಲಮಿತಿ ಬಡ್ತಿಯ ಪ್ರಸ್ತಾವನ ಸಲ್ಲಿಸಲು ಸಮಸ್ಯೆಯಾಗುತ್ತದೆ.

16. ಟಿ.ಜಿ.ಟಿ ಮತ್ತು ಜಿ.ಹೆಚ್.ಎಂ ಪ್ರೌಢಶಾಲಾ ವೃಂದದವರು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಪ್ರೌಢಶಾಲೆಗಳಿಗೆ ವರ್ಗಾವಣೆಯಾಗಿದ್ದಲ್ಲಿ ತಂತ್ರಾಂಶದಲ್ಲಿ ಇಂದೀಕರಿಸುವುದು ಈ ಬಗ್ಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

17. ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಸಂಬಂಧಿಸಿದ ಕಛೇರಿಗಳಲ್ಲಿ ವೃಂದ, ಪದನಾಮ.ಜಿಲ್ಲೆ/ತಾಲ್ಲೂಕು/ಕಛೇರಿ ಹುದ್ದೆಗೆ ಬಂದ ದಿನಾಂಕ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಗಣಕೀಕರಿಸುವುದು.

18. ಕೆಲವು ಪ್ರಕರಣಗಳಲ್ಲಿ ಸಹಶಿಕ್ಷಕರು ಮುಖ್ಯಶಿಕ್ಷಕರ ಹುದ್ದೆಯಲ್ಲಿ ತಾತ್ಕಾಲಿಕ ಪ್ರಭಾರದಲ್ಲಿದ್ದಂತಹ ಸಂದರ್ಭದಲ್ಲಿ ಸಹಶಿಕ್ಷಕರಾಗಿಯೇ ಅವರ ಸೇವಾ ವಿವರಗಳನ್ನು ಗಣಕೀಕರಿಸುವುದು.

19. ರಾಜ್ಯದ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವಾವಿವರಗಳನ್ನು ಆಯಾ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಲಾಗಿನ್ ಮೂಲಕವೇ ಗಣಕೀಕರಿಸುವ ಸಂಬಂಧ ಆಡಳಿತ ಮಂಡಲಿಗಳಿಂದ ಸೇವಾ ವಹಿಗಳನ್ನು ಪಡೆದು ಪರಿಶೀಲಿಸಿ ಕರಾರುವಕ್ಕಾದ ಸೇವಾ ವಿವರಗಳನ್ನು ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ತಮ್ಮ ಲಾಗಿನ್ ಮೂಲಕ ಗಣಕೀಕರಿಸಲು ಮತ್ತೊಮ್ಮೆ ತಿಳಿಸಿದೆ.

ಮುಂದುವರೆದು ಗಣಕೀಕರಣ ಪ್ರಕ್ರಿಯೆಗೆ ನಿಗದಿಪಡಿಸಿದ ಕಡೆಯ ದಿನಾಂಕದ ನಂತರ ಗಣಕೀಕರಿಸುವುದನ್ನು ಸ್ಥಗಿತಗೊಳಿಸಲಾಗುವುದು.

ಈ ಹಂತದಲ್ಲಿ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ಗೊಂದಲಗಳಿದ್ದಲ್ಲಿ ಅಥವಾ ಸಂದೇಹಗಳಿದ್ದಲ್ಲಿ ಈ ಬಗ್ಗೆ ವಿವರಗಳನ್ನು karonlineserviceshelp@gmail.com ಗೆ ಇ-ಮೇಲ್ ಮುಖೇನ ಮನವಿ ಸಲ್ಲಿಸಲು ತಿಳಿಸಿದೆ.

ನೌಕರರ ನಿಖರ ಮತ್ತು ಪ್ರಮಾಣಿಕೃತ ಅಗತ್ಯ ಸೇವಾ ವಿವರಗಳನ್ನು ಡಿ.ಡಿ.ಒ ಲಾಗಿನ್ ನಲ್ಲಿ ಮಾತ್ರ ಇಂದೀಕರಿಸಲು ಅವಕಾಶವಿರುವುದರಿಂದ ತಮ್ಮ ವ್ಯಾಪ್ತಿಯ ಡಿ.ಡಿ.ಒ ಗಳಿಗೆ ಸ್ಪಷ್ಟ ಮಾಹಿತಿ ನೀಡುವುದು ಒಂದು ವೇಳೆ ನಿಗದಿತ ಕಾಲಮಿತಿಯೊಳಗೆ ಇಂದೀಕರಿಸದೇ. ಸೇವಾವಿವರಗಳನ್ನು ತಪ್ಪಾಗಿ ನಮೂದಿಸಿ ಮುಂದಿನ ದಿನಗಳಲ್ಲಿ ವ್ಯತ್ಯಾಸಗಳಾಗಿ, ಬಾಧಿತರಿಂದ ದೂರುಗಳು ಈ ಕಛೇರಿಗೆ ಸ್ವೀಕೃತಗೊಂಡಲ್ಲಿ, ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ಹಾಗೂ ಕಛೇರಿ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುವುದು. ಆದುದರಿಂದ ಸದರಿ ಗಣಕೀಕರಣ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ದಿನಾಂಕ:15/03/2025 ರೊಳಗೆ ಪೂರ್ಣಗೊಳಿಸಲು ತಿಳಿಸಿದೆ.

BIG NEWS: Computerization of teacher service details in ‘EEDS’ software: Important order from ‘Education Department’!
Share. Facebook Twitter LinkedIn WhatsApp Email

Related Posts

ಮೀನುಗಾರರ ಸಾಲ ಮನ್ನಾ ಯೋಜನೆಯಲ್ಲಿ ₹1.66 ಕೋಟಿ ವಂಚನೆ: ಮೂಕಾಂಬಿಕಾ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ ಇಡಿ

27/03/2026 9:52 PM1 Min Read

ಸಣ್ಣಪುಟ್ಟ ಗಲಾಟೆಗಳಿಗೆಲ್ಲಾ 498A ಕೇಸ್ ಹಾಕುವಂತಿಲ್ಲ: ಅತ್ತೆ-ಮಾವಂದಿರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

27/03/2026 9:46 PM2 Mins Read

ಬೆಂಗಳೂರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶಾಕ್: 33 ಸ್ವತ್ತುಗಳು ಕೇಂದ್ರ ನಗರ ಪಾಲಿಕೆ ವಶಕ್ಕೆ

27/03/2026 8:18 PM1 Min Read
Recent News

BREAKING : ‘ವ್ಯಾಪಾರ ಸ್ಥಿರತೆ, ಇಂಧನ ಭದ್ರತೆಯ ಮೇಲೆ ಗಮನಹರಿಸಿ’ : ‘ಸಿಎಂ’ಗಳಿಗೆ ಪ್ರಧಾನಿ ಮೋದಿ ಸೂಚನೆ

27/03/2026 10:05 PM

ಮೀನುಗಾರರ ಸಾಲ ಮನ್ನಾ ಯೋಜನೆಯಲ್ಲಿ ₹1.66 ಕೋಟಿ ವಂಚನೆ: ಮೂಕಾಂಬಿಕಾ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ ಇಡಿ

27/03/2026 9:52 PM

ಸಣ್ಣಪುಟ್ಟ ಗಲಾಟೆಗಳಿಗೆಲ್ಲಾ 498A ಕೇಸ್ ಹಾಕುವಂತಿಲ್ಲ: ಅತ್ತೆ-ಮಾವಂದಿರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

27/03/2026 9:46 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್, LPG ಕುರಿತು ಸರ್ಕಾರ ಮತ್ತೊಂದು ಗುಡ್ ನ್ಯೂಸ್!

27/03/2026 9:38 PM
State News
KARNATAKA

ಮೀನುಗಾರರ ಸಾಲ ಮನ್ನಾ ಯೋಜನೆಯಲ್ಲಿ ₹1.66 ಕೋಟಿ ವಂಚನೆ: ಮೂಕಾಂಬಿಕಾ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ ಇಡಿ

By kannadanewsnow0927/03/2026 9:52 PM KARNATAKA 1 Min Read

ಮಂಗಳೂರು: ಮೀನುಗಾರರ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದ ಮೇಲೆ,…

ಸಣ್ಣಪುಟ್ಟ ಗಲಾಟೆಗಳಿಗೆಲ್ಲಾ 498A ಕೇಸ್ ಹಾಕುವಂತಿಲ್ಲ: ಅತ್ತೆ-ಮಾವಂದಿರ ವಿರುದ್ಧದ FIR ರದ್ದುಗೊಳಿಸಿದ ಹೈಕೋರ್ಟ್

27/03/2026 9:46 PM

ಬೆಂಗಳೂರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶಾಕ್: 33 ಸ್ವತ್ತುಗಳು ಕೇಂದ್ರ ನಗರ ಪಾಲಿಕೆ ವಶಕ್ಕೆ

27/03/2026 8:18 PM

BREAKING: ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ‘ಸ್ಟಾರ್’ ಬಲ: ದಾವಣಗೆರೆ, ಬಾಗಲಕೋಟೆಗೆ ಪ್ರಚಾರಕರ ಪಟ್ಟಿ ಬಿಡುಗಡೆ

27/03/2026 8:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.