ಬೆಂಗಳೂರು : ನಾಡಿನ ಕಲೆ, ವಾಸ್ತುಶಿಲ್ಪದ ತೊಟ್ಟಿಲು, ವಿಶ್ವಪ್ರಸಿದ್ಧ ಹಂಪಿಯಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 2ರ ವರೆಗೆ 3 ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದ್ದು, ಫೆ. 28ರಂದು ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಹಂಪಿ ಉತ್ಸವ ನಡೆಸುವ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಅವರಿಗೆ ಸೂಚನೆ ನೀಡಿದ್ದು, ಫೆಬ್ರುವರಿ 28ರಂದು ದಿನಾಂಕ ನಿಗದಿಯಾಗಿದ್ದು ಫೆಬ್ರವರಿ 28ರಿಂದ ಮಾರ್ಚ್ 1 ಮತ್ತು 2ನೇ ತಾರೀಖಿನವರೆಗೂ ಸುಮಾರು ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.