Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮೆಕ್ಸಿಕೋದಲ್ಲಿ 6.4 ತೀವ್ರತೆಯ ಭೂಕಂಪ | Earthquake

03/01/2026 6:43 AM

BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ

03/01/2026 6:41 AM

ಉಕ್ರೇನ್: ಖೇರ್ಸನ್ ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆ

03/01/2026 6:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ
KARNATAKA

BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ

By kannadanewsnow5703/01/2026 6:41 AM

ಬೆಂಗಳೂರು : ಎಂಜಿ-ನರೇಗಾ ಯೋಜನೆಯ ಉದ್ದೇಶಕ್ಕೆ ಧಕ್ಕೆ ಬರುವಂತೆ ‘ವಿಬಿ ಜಿ ರಾಮ್ ಜಿ’ ಹೆಸರಿ ನಲ್ಲಿ ಯೋಜನೆ ಅನುಷ್ಠಾನಗೊಳಿಸುವ ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ಖಂಡಿ ಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದಿನಾಂಕ: 02-01-2026 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳು ಹೀಗಿವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (MGNREGA) ಯೋಜನೆಯ ಬದಲಾಗಿ ವಿಕಸಿತ್ ಭಾರತ್ -ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ 2025 (VB-G RAM G) ಜಾರಿಗೊಳಿಸಿರುವ ಕೇಂದ್ರದ ಕ್ರಮವನ್ನು ತೀವ್ರವಾಗಿ ಖಂಡಿಸಲು  ಸಚಿವಸಂಪುಟ ನಿರ್ಣಯ ಕೈಗೊಂಡಿದೆ.

ಅಧಿಕಾರ ವಿಕೇಂದ್ರೀಕರಣ, ಗ್ರಾಮಗಳಿಗೆ ಅಭಿವೃದ್ಧಿ ತಲುಪಿಸುವ ಅಧಿಕಾರವನ್ನು ಗ್ರಾಮಪಂಚಾಯತಿಗಳಿಗೆ ನೀಡಲಾಗಿದ್ದ ಎಲ್ಲ ರಚನಾತ್ಮಕ, ಸಕಾರಾತ್ಮಕ, ಸ್ವರಾಜ್ಯದ ಪರಿಕಲ್ಪನೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಯೋಜನೆ ರದ್ಧತಿ ಕುರಿತು ವಿವರವಾದ ಪತ್ರಿಕಾಗೋಷ್ಠಿಯನ್ನು ಮುಖ್ಯಮಂತ್ರಿಗಳು ನಾಳೆ ಕೈಗೊಳ್ಳಲಿದ್ದಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಹೆಚ್.ಕೆ.ಪಾಟೀಲ್ ರವರು ತಿಳಿಸಿದರು.

ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) RoP ಯಡಿ ವಿವಿಧ ಐಇಸಿ/ ಎಸ್ ಬಿಸಿಸಿ ಕಾರ್ಯಚಟುವಟಿಕೆಗಳ ರೂ. 41.80 ಕೋಟಿಗಳ ಸಮಗ್ರ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ 100 ಹಾಸಿಗೆಗಳ ಹೊಸ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು ರೂ. 40.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (BSTP) ಕಾರಿಡಾರ್ 2 ಮತ್ತು 4ರ ಪರಿಷ್ಕೃತ ಅಂದಾಜು ವೆಚ್ಚ ರೂ.16876.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಜ್ಯದ ಆಯ್ದ (2023-24) ಆರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (DIET) ರಚನಾತ್ಮಕ ವಿನ್ಯಾಸವನ್ನು ಉನ್ನತೀಕರಿಸಿ ಉತ್ಕೃಷ್ಟ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET for Excellence) ಗಳನ್ನಾಗಿ( ಬೀದರ್, ಬಳ್ಳಾರಿ, ಚಿತ್ರದುರ್ಗ, ಮೈಸೂರು,ಶಿವಮೊಗ್ಗ,ಮಂಡ್ಯ) ಪರಿವರ್ತಿಸುವ ರೂ.36.90 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನಿರ್ಣಯಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿಗೆ (CCSR Policy) ಅನುಮೋದನೆ ನೀಡಲಾಗಿದೆ.

ಬೆಂಗಳೂರಿನ ಯಲಹಂಕ ಮಾದಪ್ಪನಹಳ್ಳಿ ಕಾಯ್ದಿಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ (ಒಟ್ಟು 153 ಎಕರೆ 39 ಗುಂಟೆ) “ವಿಶ್ವಗುರು ಬಸವಣ್ಣ ಜೀವ ವೈವಿಧ್ಯ ಬೃಹತ್ ಉದ್ಯಾನವನ” (Vishwaguru Basavanna Bruhath Bio-diversity Park) ಎಂಬ ಹೆಸರಿನ ಉದ್ಯಾನವನವನ್ನು ರೂ. 50.29 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ (IGOT) ಸಂಸ್ಥೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಎಲ್ಲಾ ಅಂಗಾಂಗ ಕಸಿಗಳನ್ನು ಒಳಗೊಂಡಂತೆ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದಕ್ಕಾಗಿ ಅಜೀಮ್ ಪ್ರೇಮ್ಜಿ ಫೌಂಡೇಷನ್ ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಹಾಗೂ ಸದರಿ ಸಂಸ್ಥೆಯೊಂದಿಗೆ MoU ಮಾಡಿಕೊಳ್ಳಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಛೇರಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ “ಕಾಂಗ್ರೆಸ್ ಭವನ ಟ್ರಸ್ಟ್ (ರಿ), ಬೆಂಗಳೂರು” ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಶೇಖರೋಜಾ ಸರ್ವೆ ನಂ. 111/2ರಲ್ಲಿನ 2338.91 ಚ.ಮೀ. ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನ ಪಿ.ಎಲ್-01ನ್ನು ಶಿಕ್ಷಕರ ಭವನ ನಿರ್ಮಿಸಲು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ಜಿಲ್ಲಾ ಸಂಘ, ಕಲಬುರಗಿ ಇವರಿಗೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ.

2025-26ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ 41685 ಪೀಠೋಪಕರಣಗಳನ್ನು ಕೆಎಸ್ಎಫ್ ಐಸಿಯಿಂದ ನೇರ ಖರೀದಿಯ ಮೂಲಕ ಅಂದಾಜು ರೂ.864.74 ಲಕ್ಷ ವೆಚ್ಚದಲ್ಲಿ ಮತ್ತು ಅಲ್ಪಾವಧಿಯ ಟೆಂಡರ್ ಮೂಲಕ ಅಂದಾಜು ರೂ.2667.42 ಲಕ್ಷ ವೆಚ್ಚದಲ್ಲಿ (ಒಟ್ಟು ರೂ.35.32 ಕೋಟಿಗಳು) ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ರೂ. 50.00 ಕೋಟಿಗಳ ಅಂದಾಜು ವೆಚ್ಚದಲ್ಲಿ ನಬಾರ್ಡ್ ಅನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಐಐಟಿ ಹೈದರಾಬಾದ್ ಸಹಯೋಗದೊಂದಿಗೆ ಹೊಸ “ಕರ್ನಾಟಕ ಜಿಎಸ್ ಟಿ ಅನಲೈಟಿಕ್ಸ್ ಪೋರ್ಟಲ್ ನ್ನು ರೂ. 19.00 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಕಾರ್ಯಗತಗೊಳಿಸಲು ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.

The Karnataka Jnana Bhandar Manuscripts and Digitalisation Bill, 2025″ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.

BIG NEWS: Central government renames NREGA to 'Ji Ram Ji': State Cabinet condemns
Share. Facebook Twitter LinkedIn WhatsApp Email

Related Posts

ALERT : ಪೋಷಕರೇ ಎಚ್ಚರ : `ಮೊಬೈಲ್’ ನೋಡುವುದರಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ `ಟೆಕ್ಸ್ಟ್ ನೆಕ್’ ಸಮಸ್ಯೆ.!

03/01/2026 6:30 AM2 Mins Read

BIG NEWS : ರಾಜ್ಯಮಟ್ಟದ `SSLC ಪೂರ್ವ ಸಿದ್ಧತಾ ಪರೀಕ್ಷೆ-1’ರ ವೇಳಾಪಟ್ಟಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

03/01/2026 6:19 AM1 Min Read

ನಿಮ್ಮ ‘ಮೊಬೈಲ್’ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿ, ಸಿಗೋದು ಗ್ಯಾರಂಟಿ

03/01/2026 6:10 AM3 Mins Read
Recent News

BREAKING: ಮೆಕ್ಸಿಕೋದಲ್ಲಿ 6.4 ತೀವ್ರತೆಯ ಭೂಕಂಪ | Earthquake

03/01/2026 6:43 AM

BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ

03/01/2026 6:41 AM

ಉಕ್ರೇನ್: ಖೇರ್ಸನ್ ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆ

03/01/2026 6:39 AM

ALERT : ಪೋಷಕರೇ ಎಚ್ಚರ : `ಮೊಬೈಲ್’ ನೋಡುವುದರಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ `ಟೆಕ್ಸ್ಟ್ ನೆಕ್’ ಸಮಸ್ಯೆ.!

03/01/2026 6:30 AM
State News
KARNATAKA

BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ

By kannadanewsnow5703/01/2026 6:41 AM KARNATAKA 3 Mins Read

ಬೆಂಗಳೂರು : ಎಂಜಿ-ನರೇಗಾ ಯೋಜನೆಯ ಉದ್ದೇಶಕ್ಕೆ ಧಕ್ಕೆ ಬರುವಂತೆ ‘ವಿಬಿ ಜಿ ರಾಮ್ ಜಿ’ ಹೆಸರಿ ನಲ್ಲಿ ಯೋಜನೆ ಅನುಷ್ಠಾನಗೊಳಿಸುವ…

ALERT : ಪೋಷಕರೇ ಎಚ್ಚರ : `ಮೊಬೈಲ್’ ನೋಡುವುದರಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ `ಟೆಕ್ಸ್ಟ್ ನೆಕ್’ ಸಮಸ್ಯೆ.!

03/01/2026 6:30 AM

BIG NEWS : ರಾಜ್ಯಮಟ್ಟದ `SSLC ಪೂರ್ವ ಸಿದ್ಧತಾ ಪರೀಕ್ಷೆ-1’ರ ವೇಳಾಪಟ್ಟಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

03/01/2026 6:19 AM

ನಿಮ್ಮ ‘ಮೊಬೈಲ್’ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿ, ಸಿಗೋದು ಗ್ಯಾರಂಟಿ

03/01/2026 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.