Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಆಟ ಆಡುವಾಗ ಕಟ್ಟಡದ 5ನೇ ಮಹಡಿಯಿಂದ ಬಿದ್ದು 4 ವರ್ಷದ ಮಗು ಸಾವು !

20/02/2026 9:07 AM

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರು ರಾಜಕೀಯ & ಚುನಾವಣೆಯಲ್ಲಿ ಭಾಗವಹಿಸಬಹುದಾ? ಇಲ್ಲಿದೆ ಮಾಹಿತಿ
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರು ರಾಜಕೀಯ & ಚುನಾವಣೆಯಲ್ಲಿ ಭಾಗವಹಿಸಬಹುದಾ? ಇಲ್ಲಿದೆ ಮಾಹಿತಿ

By kannadanewsnow5720/01/2026 10:51 AM

ಬೆಂಗಳೂರು : ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ.

(2) ಕಾನೂನಿನ ಮೂಲಕ ಸ್ಥಾಪಿತವಾದ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದ್ದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಯಾರೇ ಸದಸ್ಯನೂ ಭಾಗವಹಿಸದಂತೆ, ಅದರ ಸಹಾಯಾರ್ಥ ವಂತಿಗೆ ನೀಡದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು ಮತ್ತು ಅಂಥ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಸದಸ್ಯರು ಭಾಗವಹಿಸುವುದನ್ನು, ವಂತಿಗೆ ನೀಡುವುದನ್ನು ಅಥವಾ ಬೇರೆ ರೀತಿಯಿಂದ ನೆರವು ನೀಡುವುದನ್ನು ತಡೆಗಟ್ಟಲು ಸರ್ಕಾರಿ ನೌಕರನಿಗೆ ಸಾಧ್ಯವಾಗದಿದ್ದರೆ, ಅವನು ಆ ವಿಷಯವನ್ನು ಸರ್ಕಾರಕ್ಕೆ ವರದಿ ಮಾಡತಕ್ಕದ್ದು.

(3)ಯಾವುದೇ ಒಂದು ಪಕ್ಷವು ರಾಜಕೀಯ ಪಕ್ಷವೇ ಅಥವಾ ಯಾವುದೇ ಸಂಘಸಂಸ್ಥೆಯು ರಾಜಕೀಯದಲ್ಲಿ ಭಾಗವಹಿಸುತ್ತಿದೆಯೇ ಅಥವಾ ಯಾವುದೇ ಚಳವಳಿಯು ಅಥವಾ ಚಟುವಟಿಕೆಯು (2)ನೇ ಉಪನಿಯಮದ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದಾಗ, ಆ ಕುರಿತು ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು.

(4) ಯಾರೇ ಸರ್ಕಾರಿ ನೌಕರನು ಯಾವುದೇ ವಿಧಾನಮಂಡಲದ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣಾ ಪ್ರಚಾರ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಥವಾ ಆ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಅದರಲ್ಲಿ ಭಾಗವಹಿಸತಕ್ಕದ್ದಲ್ಲ:

ಪರಂತು,-

(i) ಅಂಥ ಚುನಾವಣೆಯಲ್ಲಿ ತನ್ನ ಮತವನ್ನು ಚಲಾಯಿಸಲು ಅರ್ಹನಾಗಿರುವ ಸರ್ಕಾರಿ ನೌಕರನು ಮತ ಹಾಕಲು ತನಗಿರುವ ಹಕ್ಕನ್ನು ಚಲಾಯಿಸಬಹುದು, ಆದರೆ ಆತನು ಹಾಗೆ ಮಾಡುವಾಗ, ತಾನು ಮತ ಹಾಕಲು ಉದ್ದೇಶಿಸಿರುವ ರೀತಿ ಅಥವಾ ಮತ ಹಾಕಿದ ರೀತಿಯ ಬಗ್ಗೆ ಯಾವುದೇ ಸೂಚನೆಯನ್ನು ನೀಡತಕ್ಕದ್ದಲ್ಲ.

(ii) ಚುನಾವಣೆ ನಡೆಯುವಾಗ, ಸರ್ಕಾರಿ ನೌಕರನು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಅಥವಾ ಕಾನೂನಿನ ಮೇರೆಗೆ, ಆತನ ಮೇಲೆ ವಿಧಿಸಲಾಗಿರುವ ಕರ್ತವ್ಯದ ಯುಕ್ತ ನಿರ್ವಹಣೆಯಲ್ಲಿ, ಆತನು ನೆರವು ನೀಡುತ್ತಾನೆಂಬ ಏಕೈಕ ಕಾರಣಕ್ಕಾಗಿ ಈ ಉಪನಿಯಮದ ಉಪಬಂಧಗಳನ್ನು ಉಲ್ಲಂಘಿಸಿರುವನೆಂದು ಭಾವಿಸತಕ್ಕದ್ದಲ್ಲ.

ವಿವರಣೆ:- ಸರ್ಕಾರಿ ನೌಕರನು ಯಾವುದೇ ಚುನಾವಣಾ ಚಿಹ್ನೆಯನ್ನು ತನ್ನ ಶರೀರದ, ವಾಹನದ ಅಥವಾ ನಿವಾಸದ ಮೇಲೆ ಪ್ರದರ್ಶಿಸಿದರೆ, ಅವನು, ಈ ಉಪ-ನಿಯಮದ ಅರ್ಥವ್ಯಾಪ್ತಿಯೊಳಗೆ ಚುನಾವಣೆಗೆ ಸಂಬಂಧಿಸಿದಂತೆ ತನ್ನ ಪ್ರಭಾವವನು, ಬೀರುತಿದಾನೆ ಎಂದು ಪರಿಗಣಿಸತಕ್ಕದು.

BIG NEWS: Can state government employees participate in politics & elections? Here is the information
Share. Facebook Twitter LinkedIn WhatsApp Email

Related Posts

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM2 Mins Read

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM2 Mins Read

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM2 Mins Read
Recent News

SHOCKING : ಪೋಷಕರೇ ಎಚ್ಚರ : ಆಟ ಆಡುವಾಗ ಕಟ್ಟಡದ 5ನೇ ಮಹಡಿಯಿಂದ ಬಿದ್ದು 4 ವರ್ಷದ ಮಗು ಸಾವು !

20/02/2026 9:07 AM

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM
State News
KARNATAKA

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

By kannadanewsnow5720/02/2026 9:00 AM KARNATAKA 2 Mins Read

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮೆಂತ್ಯ ಯಾವುದೇ ವಿಶೇಷ ಪರಿಚಯ ಅಗತ್ಯವಿಲ್ಲ. ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾವು ಮೆಂತ್ಯವನ್ನ ಹಲವು…

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM

ನಿಮ್ಮ `ಡೆಬಿಟ್ ಕಾರ್ಡ್’ ಇದ್ರೆ ಲಕ್ಷಾಂತರ ಮೌಲ್ಯದ ಉಚಿತ ವಿಮೆ ಸಿಗಲಿದೆ : ಕ್ಲೈಮ್ ಮಾಡುವುದು ಹೇಗೆ? ತಿಳಿಯಿರಿ !

20/02/2026 8:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.