* ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಕರ್ನಾಟದಲ್ಲಿ ಮತ್ತೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಲಿದೆ. ಕಾಂಗ್ರೆಸ್ ಶಾಸಕರಾಗಿದ್ದ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಮತ್ತು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರುವಾಗಿರುವ ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ನಡೆಸಲಿದೆ.
ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅವರು ನವೆಂ 3, 2025ರಂದು ನಿಧರಾಗಿದ್ದರು, ಹಾಗೂ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪನವರರು ಡಿಸೆಂಬರ್ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಉಪ ಚುನಾವಣೆ ಬಗ್ಗೆ ಶೀಘ್ರದಲ್ಲಿ ಗೆಜೆಟ್ ಅನ್ನು ಭಾರತ ಚುನಾವಣಾ ಆಯೋಗ ಹೊರಡಿಸಲಿದೆ ಎನ್ನಲಾಗಿದೆ. ಉಪ ಚುನಾವಣೆ ಸಾಮಾನ್ಯವಾಗಿ ಶಾಸಕರು ಅಥವಾ ಸಂಸದರು ನಿಧರಾಗಿದ್ದ ಸಮಯದಲ್ಲಿ, ಇಲ್ಲವೇ ರಾಜೀನಾಮೆ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ಅಥವಾ ಇತರ ಕಾರಣಗಳಿಂದಾಗಿ ಶಾಸಕರು/ಸಂಸದರನ್ನು ಅನರ್ಹಗೊಳಿಸಿದಾಗ. ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದೆ ಎಂದು ಸಾಬೀತಾದಾಗ, ಆ ಚುನಾವಣೆಯನ್ನು ರದ್ದುಪಡಿಸಿ ಮತ್ತೆ ಚುನಾವಣೆ ನಡೆಸಲಾಗುತ್ತದೆ. ಸಾರ್ವತ್ರಿಕ ಚುನಾವಣೆಗಳ ನಂತರ ತೆರವಾದ ಸ್ಥಾನಕ್ಕೆ ಹೊಸ ಪ್ರತಿನಿಧಿಯನ್ನು ಆಯ್ಕೆ ಮಾಡಲು ಉಪಚುನಾವಣೆ ನಡೆಸಲಾಗುತ್ತದೆ. ಸೆಕ್ಷನ್ 154ಎ ಪ್ರಕಾರ ಒಂದು ವರ್ಷಕ್ಕಿಂತ ಕಡಿಮೆ ಅಂತರ ಇರುವ ಕೇತ್ರಗಳಲ್ಲಿ ಉಪಚುನಾವಣೆ ಅಗತ್ಯವಿಲ್ಲ ಆದರೆ ಇನ್ನೂ ಎರಡೂ ವರರೆ ವರ್ಷ ಹಾಲಿ ವಿಧಾನಸಭೆ ಚಾಲ್ತಿಯಲ್ಲಿರುವ ಕಾರಣಕ್ಕೆ ಈಗ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಸಬೇಕಾಗಿದೆ.
ಫೆಬ್ರವರಿಯೊಳಗೆ ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಸಲಾಗುವುದು ಎನ್ನಲಾಗುತ್ತಿದೆ. ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸೀಟುಗಾಗಿ ಕದನ ನಡೆಯುತ್ತಿದ್ದು, ಸದ್ಯ ಈಗ ಅಭ್ಯರ್ಥಿಗಳನ್ನು ಹುಡುಕ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಅವಿನಾಶ್ ಆರ್ ಭೀಮಸಂದ್ರ








